ಯುವತಿ ಕಾಣೆ: ಪ್ರಕರಣ ದಾಖಲು

ಹೊಸಪೇಟೆ(ವಿಜಯನಗರ).ಡಿ.9: ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡದ ನಿವಾಸಿಯಾದ ಗೌತಮಿ ಬಾಯಿ ಎಂಬ 20ವರ್ಷದ  ಯುವತಿಯು ಡಿ.4ರಂದು ಕಾಣೆಯಾಗಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೊಸಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರು ತಿಳಿಸಿದ್ದಾರೆ. 

ಕಾಣೆಯಾದ ಯುವತಿ ಎತ್ತರ 5.4 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ನೀಲಿ ಬಿಳಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಕನ್ನಡ, ಲಂಬಾಣಿ ಮತ್ತು ತೆಲುಗು ಭಾಷೆಯಲ್ಲಿ ಮಾತನಾಡುತ್ತಾಳೆ. 

ಯುವತಿಯ ಮಾಹಿತಿ ದೊರೆತಲ್ಲಿ ಕೂಡ್ಲಿಗಿ ಪಿಎಸ್‌ಐ ದೂ.08391-220223, ಕೂಡ್ಲಿಗಿ ಸಿಪಿಐ ದೂ.08391-220033, ಕೂಡ್ಲಿಗಿ ಡಿಎಸ್ಪಿ ದೂ.08391-220326 ಮತ್ತು ವಿಜಯನಗರ ಜಿಲ್ಲೆ ಎಸ್ಪಿ ದೂ.08391-258400ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.