ಹೊಸಪೇಟೆ

ಮಹಿಳೆ ಕಾಣೆ: ಪ್ರಕರಣ ದಾಖಲು

ಮಹಿಳೆ ಕಾಣೆ: ಪ್ರಕರಣ ದಾಖಲು

ವಿಜಯನಗರ(ಹೊಸಪೇಟೆ) 15: ಹೊಸಪೇಟೆಯ 33ನೇ ವಾರ್ಡ್‌ನ ಎ.ಸಿ.ಆಫೀಸ್ ಎದುರು ಮ್ಯಾಸಕೇರಿಯ ನಿವಾಸಿಯಾದ ಸುಮಾರು 23 ವರ್ಷದ ರೇಖಾ ಎಂಬ ಮಹಿಳೆ ನ.13ರಂದು  ಕಾಣೆಯಾಗಿರುವ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಕಾಣೆಯಾದ ಮಹಿಳೆಯ ಚಹರೆ ಗುರುತು: ಸುಮಾರು 5ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ಆಕಾಶ ಬಣ್ಣದ ಚೂಡಿದಾರ ಹಾಗೂ ಆಕಾಶ ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಕನ್ನಡ ಭಾಷೆಯನ್ನು ಮಾತನಾಡುತ್ತಾಳೆ. 

ಕಾಣೆಯಾದ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹೊಸಪೇಟೆಯ ಪೊಲೀಸ್ ಠಾಣೆ ದೂ.ಸಂ. 08394-224033/9480803070, ಹೊಸಪೇಟೆಯ ಡಿ.ಎಸ್‌.ಪಿ. ಕಚೇರಿಯ ದೂ.ಸಂ.08394-224204, ಬಳ್ಳಾರಿಯ ಎಸ್‌.ಪಿ ಕಚೇರಿಯ ದೂ.ಸಂ.08392-258100ಗೆ ಸಂಪರ್ಕಿಸಬಹುದು. 


ಸುದ್ದಿ ಓದಿ