ಶಿಗ್ಗಾವ್

ವ್ಯಕ್ತಿ ಕಾಣೆ, ತಡವಾಗಿ ಪ್ರಕರಣ ದಾಖಲು

ವ್ಯಕ್ತಿ ಕಾಣೆ, ತಡವಾಗಿ ಪ್ರಕರಣ ದಾಖಲು

ಶಿಗ್ಗಾವಿ 23: ಶಿಗ್ಗಾವಿ ಪಟ್ಟಣದ ವಿರಕ್ತಮಠದ ಓಣಿಯ ವ್ಯಕ್ತಿಯೊರ್ವ ಕಾಣೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಈ ಕುರಿತು ತಡವಾಗಿ ಪ್ರಕರಣ ದಾಖಲಾಗಿದೆ ಶಿಗ್ಗಾವಿ ಪಟ್ಟಣದ ವಿರಕ್ತಮಠ ಓಣಿಯ ಶಂಭುಲಿಂಗಪ್ಪ ತಂದೆ ಬಸಪ್ಪ ಕಬನೂರ ವಯಸ್ಸು 38 ವರ್ಷದ ವ್ಯಕ್ತಿಯೇ ಕಾಣೆಯಾದ  ವ್ಯಕ್ತಿಯಾಗಿದ್ದಾನೆ. 

ಅಕ್ಟೋಬರ್ 20, 2006 ರಂದು ಮನೆಯಲ್ಲಿ ಮಲಗಿದ್ದವನು ಎದ್ದು ಹೋದವನು ಮರಳಿ ಬಾರದೆ ಕಾಣೆಯಾಗಿದ್ದಾನೆ ಹುಡುಕಾಟ ನಡೆಸಿದರು ಸಿಕ್ಕಿಲ್ಲ ಅಲ್ಲದೆ ಒಬ್ಬನೇ ಮಗನಾಗಿರುವುದರಿಂದ ಆಸ್ತಿ ವಿಚಾರಕ್ಕಾಗಿ ಅವನು ಕಳೆದಿರುವ ಬಗ್ಗೆ ದಾಖಲಾತಿ ಅವಶ್ಯಕತೆ ಇರುವುದರಿಂದ ಈಗ ತಡವಾಗಿ ಕಾಣೆಯಾದ ವ್ಯಕ್ತಿಯ ತಂದೆ ಬಸಪ್ಪ ತಂದೆ ಕಲ್ಲಪ್ಪ ಕಬನೂರ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 


ಸುದ್ದಿ ಓದಿ