ಹೊಸಪೇಟೆ

ತಾಯಿ, ಮಕ್ಕಳು ಕಾಣೆ: ಪ್ರಕರಣ ದಾಖಲು

ತಾಯಿ, ಮಕ್ಕಳು ಕಾಣೆ: ಪ್ರಕರಣ ದಾಖಲು

ಹೊಸಪೇಟೆ(ವಿಜಯನಗರ) 07: ಹಂಪಿಯ ಪ್ರಕಾಶನಗರ ನಿವಾಸಿಯಾದ ಸುಮಾರು 24 ವರ್ಷದ ರಿಜ್ವಾನಾ ಎಂಬ ಮಹಿಳೆಯು ತನ್ನ ಮಕ್ಕಳಾದ ಮಹ್ಮದ್ ಹಫೀಜ್(05ವರ್ಷ), ಉಮೇರಾ(03), ಮಹಿ ಸಮೀರಾ(02ತಿಂಗಳು)ರೊಂದಿಗೆ ಮಾ.01 ರಂದು ಕಾಣೆಯಾಗಿರುವ ಕುರಿತು ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಂಪಿ ಪ್ರವಾಸಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

     ಕಾಣೆಯಾದ ತಾಯಿ ಮತ್ತು ಮಕ್ಕಳ ಚಹರೆ ಗುರುತು :  ತಾಯಿ   ರಿಜ್ವಾನಾ ವಯಸ್ಸು ಸುಮಾರು 24ವರ್ಷ, 5.2 ಅಡಿ ಎತ್ತರ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ಕನ್ನಡ, ಉರ್ದು ಮತ್ತು ತೆಲುಗು ಭಾಷೆಯನ್ನು ಮಾತನಾಡುತ್ತಾಳೆ, ಕಪ್ಪು ಬಣ್ಣದ ಚೂಡಿದಾರವನ್ನು ಧರಿಸಿರುತ್ತಾಳೆ, ಮಕ್ಕಳಾದ ಮಹಮ್ಮದ್ ಹಫೀಜ್(05ವರ್ಷ), 2.5ಅಡಿ ಎತ್ತರ, ಗೋಧಿ ಮೈಬಣ್ಣ, ಎಡ ಗಲ್ಲದ ಮೇಲೆ ಕಪ್ಪು ಮಚ್ಚೆ ಇರುತ್ತದೆ, ಕನ್ನಡ ಮತ್ತು ಉರ್ದು ಭಾಷೆಯನ್ನು ಮಾತನಾಡುತ್ತಾನೆ, ಉಮೇರಾ(03ವರ್ಷ), 2ಅಡಿ ಎತ್ತರ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ಮಹಿ ಸಮೀರಾ(02ತಿಂಗಳು) ಮಕ್ಕಳೊಂದಿಗೆ ತಾಯಿಯು ಕಾಣೆಯಾಗಿರುತ್ತಾಳೆ. 

     ಈ ಮೆಲ್ಕಂಡ ಚಹರೆಯುಳ್ಳ ತಾಯಿ ಮತ್ತು ಮಕ್ಕಳುಗಳ ಬಗ್ಗೆ ಸುಳಿವು ಅಥವಾ ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಹಂಪಿ  ಪ್ರವಾಸಿ ಪೊಲೀಸ್ ಠಾಣೆ ದೂ.08394-241530, ಹಂಪಿ ಸಿಪಿಐ ಮೊ.9480805732, ಹಂಪಿ ಪಿಎಸ್‌ಐ ಮೊ.9480805758, ಡಿಎಸ್‌ಪಿ ಹೊಸಪೇಟೆ ಅವರ ದೂ.08394-224204-ಗೆ ಸಂಪರ್ಕಿಸಲು ಅವರು ತಿಳಿಸಿದ್ದಾರೆ. 


ಸುದ್ದಿ ಓದಿ