ಪತಿ ಕಾಣೆ: ಪತ್ತೆಗಾಗಿ ಪ್ರಕರಣ ದಾಖಲು
ಲೋಕದರ್ಶನ ವರದಿ
ರಾಣೇಬೆನ್ನೂರು 02: ಇಲ್ಲಿನ ಕುರುಬಗೇರಿ ಬನಶಂಕರಿ ರಸ್ತೆ ಮೈಲಾರದ ಓಣಿಯ ನಿವಾಸಿ ಹನುಮಂತಪ್ಪ ಶಿವಪ್ಪ ಹೊಸಳ್ಳಿ ಅವರು ಕಾಣೆಯಾಗಿದ್ದು, ತನ್ನ ಗಂಡನನ್ನು ಹುಡುಕಿಕೊಡುವಂತೆ ರಾಣೇಬೆನ್ನೂರು ನಗರ ಠಾಣೆಯಲ್ಲಿ ಪತ್ನಿ ಶಂಕ್ರಮ್ಮ ಹೊಸಳ್ಳಿ ಅವರು ದೂರು ದಾಖಲಿಸಿದ್ದಾರೆ.
ತಮ್ಮ ವಾಸದ ಮನೆಯಿಂದ 2019 ರಲ್ಲಿ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ಇದುವರೆಗೂ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ. ಕೂಡಲೇ ಆತನನ್ನು ಹುಡುಕಿಕೊಡಬೇಕೆಂದು ನಗರ ಠಾಣೆಯಲ್ಲಿ ಪತ್ನಿ ದೂರು ದಾಖಲಿಸಿದ್ದಾರೆ.
ಚಹರೆ ಪಟ್ಟಿ ಇಂತಿದೆ:- ವಯಸ್ಸು 45, ಹಿಂದು ಲಿಂಗಾಯತ, ಉದ್ಯೋಗ ವ್ಯಾಪಾರ, ಎತ್ತರ 5 ಪೂಟು, ಸಾಧಾರಣ ಮೈಕಟ್ಟು, ಗೋಧಿ ಗೆಂಪು ಮೈಬಣ್ಣ, ದುಂಡು ಮುಖ, ಬಲಗೈ, ಮೊಣಕೈ ಒಳಭಾಗದಲ್ಲಿ ಹಳೆಯ ಮಾದ ಕಲೆ ಗುರುತಿದೆ. ಬಟ್ಟೆಗಳು: ಕರೆ ಮತ್ತು ಬಿಳಿ ಮಿಶ್ರಿತ ಬಣ್ಣದ ಅಂಗಿ, ನೀಲಿ ಮತ್ತು ಕರಿ ಮಿಶ್ರಿತ ಬಣ್ಣದ ಚಕ್ಸ್ ಲುಂಗಿ ಧರಿಸಿದ್ದು, ಈತನು ಪತ್ತೆಯಾದಲ್ಲಿ ರಾಣೇಬೆನ್ನೂರು ಶಹರ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪಿಎಸ್ಐ, ಸಿಪಿಐ ಅವರು ಕೋರಿದ್ದಾರೆ. 08373-266333, 9480804550 ಅವರು ಕೋರಿದ್ದಾರೆ.