ವ್ಯಕ್ತಿ ಕಾಣೆ: ಪ್ರಕರಣ ದಾಖಲು
ಹೊಸಪೇಟೆ(ವಿಜಯನಗರ) 08: : ಹೊಸಪೇಟೆ ನಗರದ 19ನೇ ವಾರ್ಡ್ನ ಕೌಲ್ಪೇಟೆಯ ನಿವಾಸಿ ಸುಮಾರು 28 ವರ್ಷದ ದೀಪಕ್ ಕುಮಾರ್ ಎಂಬ ವ್ಯಕ್ತಿಯು ಸೆ.05 ಮತ್ತು ಸೆ.06ರ ಮಧ್ಯದ ಅವಧಿಯಲ್ಲಿ ಕಾಣೆಯಾಗಿರುವ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ: ಬಿ.ಇ.ಸಿ.ಎಸ್.(ಪಿಡಿಐಟಿ ಕಾಲೇಜ್ ಹೊಸಪೇಟೆಯಲ್ಲಿ) ವಿದ್ಯಾರ್ಥಿ ಆಗಿದ್ದು, ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯನ್ನು ಮಾತನಾಡುತ್ತಾನೆ, ತೆಳ್ಳನೆಯ ಮೈಕಟ್ಟು, ದುಂಡು ಮುಖ, ಗೋಧಿ ಮೈ ಬಣ್ಣ, 5.7 ಅಡಿ ಎತ್ತರ, ಹಣೆ ಮಧ್ಯದಲ್ಲಿ ಹಳೆ ಗಾಯದ ಗುರುತು ಇದ್ದು, ಬ್ಲೂ ಟಿ-ಶರ್ಟ್, ಬ್ಲಾಕ್ ನೈಟ್ ಪ್ಯಾಂಟ್ ಧರಿಸಿರುತ್ತಾನೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಅಥವಾ ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪಿ.ಐ.ಪಟ್ಟಣ ಪೊಲೀಸ್ ಠಾಣೆ ಹೊಸಪೇಟೆ:08394-224033/ 9480803070, ಡಿ.ಎಸ್.ಪಿ.ಹೊಸಪೇಟೆ : 08394-224204, ಎಸ್.ಪಿ.ಬಳ್ಳಾರಿ : 08392-258100 ಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.