ಬಳ್ಳಾರಿ

ಯುವತಿ ಕಾಣೆ

ಯುವತಿ ಕಾಣೆ

ಬಳ್ಳಾರಿ 29 : ಸಿರುಗುಪ್ಪ ಪಟ್ಟಣದ 8ನೇ ವಾರ್ಡ್‌ನ ಭೋವಿ ಕಾಲೋನಿ ನಿವಾಸಿಯಾದ ಬಿ.ಕೀರ್ತಿ ಎನ್ನುವ 19 ವರ್ಷದ ಯುವತಿ ಮೇ.25 ರಂದು ಕಾಣೆಯಾಗಿರುವ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರು ತಿಳಿಸಿದ್ದಾರೆ. 

ಕಾಣೆಯಾದ ಯುವತಿ ಚಹರೆ ಗುರುತು: ಸುಮಾರು 4.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣೆಕೆಂಪು ಮೈಬಣ್ಣ, ದುಂಡು ಮುಖ ಹೊಂದಿತ್ತಾಳೆ. ಕನ್ನಡ ಭಾಷೆಯನ್ನು ಮಾತನಾಡುತ್ತಾಳೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಮತ್ತು ಬಿಳಿ ಮಿಶ್ರಿತ ಲಾಂಗ್ ಪ್ರಾಕ್, ಕಪ್ಪು ಬಣ್ಣದ ಲಗ್ಗಿನ್ ಧರಿಸಿರುತ್ತಾಳೆ.    

ಈ ಮೇಲ್ಕಂಡ ಚಹರೆಯುಳ್ಳ ಯುವತಿ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ದೂ.08396-220333, ಸಿ.ಪಿ.ಐ ವೃತ್ತ ಸಿರುಗುಪ್ಪ ದೂ.08396-220003, ಡಿ.ಎಸ್‌.ಪಿ ಸಿರುಗುಪ್ಪ ದೂ.08392-276000, ಎಸ್‌.ಪಿ ಬಳ್ಳಾರಿ ಅವರ ದೂ.08932-258400 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. 


ಸುದ್ದಿ ಓದಿ