ವ್ಯಕ್ತಿ ಕಾಣೆ: ಪ್ರಕರಣ ದಾಖಲು
ಹೊಸಪೇಟೆ (ವಿಜಯನಗರ) 09: ಹಂಪಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಮಲಾಪುರದ ನಿವಾಸಿ 30 ವರ್ಷದ ಬಸಯ್ಯ ಎಂಬ ವ್ಯಕ್ತಿಯು ಆ.04 ರಂದು ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಂಪಿ ಪೊಲೀಸ್ ಠಾಣೆ (ಕಾನೂನು ಮತ್ತು ಸುವ್ಯವಸ್ಥೆ) ಪೊಲೀಸ್ ಸಬ್‌ಇನ್ಸ್‌ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ: 168 ಸೆ.ಮೀ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಕಪ್ಪು ಮೈಬಣ್ಣ, ಬಿಳಿ ಬಣ್ಣದ ನೀಲಿ ಗೀರಿಗಳಿರುವ ಟೀ ಶರ್ಟ, ನೀಲಿ ಜೀನ್ಸ್ ಪ್ಯಾಂಟ್ ಧರಿಸುತ್ತಾರೆ. ಕನ್ನಡ, ಇಂಗ್ಲೀಷ್, ಹಿಂದಿ, ತೆಲಗು ಮಾತನಾಡುತ್ತಾರೆ.
ಕಾಣೆಯಾದ ವ್ಯಕ್ತಿಯ ಮಾಹಿತಿ ದೊರೆರಲ್ಲಿ ಹಂಪಿ ಟೂರಿಸಂ ಪಿ.ಎಸ್ ದೂ.ಸಂ:08394-241600, ಎಸ್.ಡಿ.ಪಿ.ಒ. ದೂ.ಸಂ:08394-241600, ಡಿಪಿಒ ದೂ.ಸಂ:08392-258400 ಗೆ ಸಂಪರ್ಕಿಸಲು ಕೊರಿದೆ.