ಗಂಗಾ ವಿವಿಧ ಉದ್ದೇಶಗಳ ಸಹಕಾರಿ ಸಂಘದಲ್ಲಿ ಸಚಿವ ಶಂಕರ್ ಸನ್ಮಾನ
ಅಪಪ್ರಚಾರಕ್ಕೆ ನಾಗರೀಕರು ಕಿವಿಗೊಡಬಾರದು: ಆರ್ ಶಂಕರ್
ರಾಣಿಬೆನ್ನೂರ ಮಾ 14: ಆರ್. ಶಂಕರ ಇನ್ನು ರಾಣಿಬೆನ್ನೂರಲ್ಲಿ ಇರುವುದಿಲ್ಲ. ಅವರು ಹರಿಹರ ಅಥವಾ ದಾವಣಗೇರಿಯಲ್ಲಿ ನೆಲೆಸುವ ಮೂಲಕ ತಮ್ಮ ರಾಜಕೀಯ ಆರಂಭಿಸಲಿದ್ದಾರೆ. ಅದೂ ಸಹ ನಗರದಲ್ಲಿಯ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ ಎಂದು ಕೆಲವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು ಎಂದು ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ಸಚಿವ ಆರ್. ಶಂಕರ ಹೇಳಿದರು.
ಶನಿವಾರ ನಗರದ ಶ್ರೀ ಗಂಗಾ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಸಭಾಭವನದಲ್ಲಿ ರಾಣಿಬೆನ್ನೂರಿನ ವಿವಿಧ ಸಂಘ ಸಂಸ್ಥೆಗಳಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಆನೆಯ ಮೂರ್ತಿಯ ಉಡುಗೋರೆ ನೀಡಿ ನನ್ನ ವಿರುದ್ಧ ಮಾಡಿರುವ ಪಿತೂರಿ ಮಾತುಗಳಿಗೆ ನಗರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ತಕ್ಕ ಉತ್ತರ ನೀಡಿದ್ದೀರಿ ಎಂದರು.
ಆನೆ ದಾರಿಯಲ್ಲಿ ಸಾಗುವಾಗ ಶ್ವಾನಗಳು ಬೊಗಳುತ್ತಿರುತ್ತವೆ. ಆಗ ಬೊಗಳುತ್ತಿರುವ ನಾಯಿಗಳನ್ನು ಆನೆ ಎಂದೂ ಹಿಂದಿರಿಗಿ ನೋಡದೆ ತನ್ನ ಗಂಭೀರವಾದ ಹೆಜ್ಜೆಗಳನ್ನು ಹಾಕುತ್ತಿರುತ್ತದೆ. ಹಾಗೇಯೇ ಈ ನಿಮ್ಮ ಶಂಕರನ ಹೆಜ್ಜೆಯಾಗಿದೆ. ತಾಲೂಕಿನ ಜನರು ಯಾರ ಮಾತಿಗೂ ಕಿವಿಗೊಡಬೇಡಿ. ನನ್ನ ಕೊನೆಯುಸಿರು ಇರುವವರೆಗೆ ರಾಣಿಬೆನ್ನೂರ ಬಿಟ್ಟು ಹೋಗದೆ ನಿಮ್ಮ ಸೇವೆ ಮಾಡುತ್ತೇನೆ ಎಂದು ಶಂಕರ ಭರವಸೆ ನೀಡಿದರು.
ಶ್ರೀ ಚನ್ನೇಶ ಸಹಕಾರಿ ಸಂಘದ ಅಧ್ಯಕ್ಷ ಕೆ. ಶಿವಲಿಂಗಪ್ಪ, ತುಂಗಭದ್ರಾ ನೂಲಿನ ಗಿರಣಿ ಅಧ್ಯಕ್ಷ ಕರಬಸಪ್ಪ ಮಾಕನೂರ, ಶ್ರೀ ಗಂಗಾ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ರತ್ನಾಕರ ಕುಂದಾಪುರ, ಡಾ| ನಾಗರಾಜ ದೊಡ್ಮನಿ ಮಾತನಾಡಿದರು.
ಮಹಿಸಾರ ಮರ್ಧನಿ ಅಧ್ಯಕ್ಷೆ ಶಶಿಕಲಾ ಕುಂದಾಪುರ, ಧನಲಕ್ಷ್ಮಿ ಶಂಕರ್, ಸಾದಿಕ್ ಪಾಟೀಲ, ಕೃಷ್ಣಮೂರ್ತಿ ಸ್ಮಣಗಾರ, ವೀರಣ್ಣ ಬಾರ್ಕಿ, ನಾಗರಾಜ ದಿಕ್ಷಿತ್, ಎಚ್.ಡಿ. ಬಡಕರಿಯಪ್ಪನವರ, ನಿತ್ಯಾನಂದ ಕುಂದಾಪುರ, ಲಕ್ಷ್ಮಣ ದಾಸರ, ಸಿದ್ದಪ್ಪ ಅಂಬಲಿ, ಹನುಮಂತಪ್ಪ ಕಬ್ಬಾರ, ರಾಜು ಅಡಿವೆಪ್ಪನವರ, ಜಗದೀಶ ಎಲಿಗಾರ, ವಾಸುದೇವ ಲದ್ವಾ, ಕೊಟ್ರೇಶಪ್ಪ ಎಮ್ಮಿ, ಅನ್ನಪೂರ್ಣ ಬಾರ್ಕಿ, ಆಂಜನೇಯ ಬಾಳಿಕಾಯಿ, ಶ್ರೀನಿವಾಸ ಗುಪ್ತಾ ಸೇರಿದಂತೆ ಮತ್ತಿತರರು ಇದ್ದರು.