ಸಚಿವ ಪ್ರಹ್ಲಾದ ಜೋಶಿಯವರಿಗೆ ಸನ್ಮಾನ
ಲೋಕದರ್ಶನ ವರದಿ
ಶಿಗ್ಗಾವಿ : ಪಟ್ಟಣದ ವಿರಕ್ತಮಠದಲ್ಲಿ ಹಮ್ಮಿಕೊಂಡ 29 ನೇ ಶರಣ ಸಂಸ್ಕೃತಿ ಉತ್ಸವದ ಮೂರನೇಯ ದಿನದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀಗಳಾದ ಸಂಗನಬಸವ ಮಹಾಸ್ವಾಮಿಗಳು, ಅಗಡಿ ಅಕ್ಕಿಮಠದ ಗುರುಲಿಂಗ ಮಹಾಸ್ವಾಮಿಗಳು, ಖ್ಯಾತ ಪ್ರವಚನಕಾರ ಡಾ. ಮಹಾಂತದೇವರು, ಡಾ. ಎ ಸಿ ವಾಲಿ ಇವರೆಲ್ಲರನ್ನು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿಯವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಶಿವಾನಂದ ರಾಣೆ, ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೋಪ್ಪ, ಶಿವಾನಂದ ಮ್ಯಾಗೇರಿ, ಸುಭಾಸ ಚವ್ಹಾಣ, ರಮೇಶ ವನಹಳ್ಳಿ, ದಯಾನಂದ ಅಕ್ಕಿ, ಶ್ರೀಕಾಂತ ಬುಳ್ಳಕ್ಕನವರ, ಅರ್ಜುನ ಹಂಚಿನಮನಿ, ಸೇರಿದಂತೆ ಇತರರು ಇದ್ದರು.