120 ಜಂಬೋ ಆಕ್ಸಿಜನ್ ಉತ್ಪಾದಕ ಘಟಕಕ್ಕೆ ಸಚಿವೆ ಜೊಲ್ಲೆ ಚಾಲನೆ
ಚಿಕ್ಕೋಡಿ 13: ಆಕ್ಸಿಜನ್ ಕೊರತೆಯಿಂದ ಕೋವಿಡ್ ಎರಡನೆ ಅಲೆ ವ್ಯಾಪಕವಾಗಿ ಹರಡಿಕೊಂಡು ಜನರಿಗೆ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿಸಿದೆ. ಆಕ್ಸಿಜನ್ ಕೊರತೆಯಾಗದಂತೆ ಗಡಿ ಜನರಿಗೆ ಅನುಕೂಲವಾಗಲು ಜೊಲ್ಲೆ ಉದ್ಯೋಗ ಸಮೂಹ ಮೂಲಕ 60 ಲಕ್ಷ ರೂ ವೆಚ್ಚದಲ್ಲಿ ದಿನಕ್ಕೆ 120 ಜಂಬೋ ಸಿಲಿಂಡರ್ ಆಕ್ಸಿಜನ್ ಉತ್ಪಾಧಿಸುವ ಘಟಕ ಆರಂಭಿಸಲಾಗುತ್ತದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜ ಗ್ರಾಮದ ಮ್ಯಾಗನಮ್ಟಪ್ ಗ್ಲಾಸ್ ಕಾರ್ಖಾನೆ ಆವರಣದಲ್ಲಿ ದಿನಕ್ಕೆ 120 ಜಂಬೋ ಸಿಲಿಂಡರ್ ಆಕ್ಷಿಜನ್ ಉತ್ಪಾದಿಸುವ ಘಟಕದ ಕಾಮಗಾರಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಕೊರೊನಾ ಮೂರನೇ ಅಲೆಯಲ್ಲಿ ಆಕ್ಷಿಜನ ಕೊರತೆ ಉಂಟಾಗಬಾರದು ಎನ್ನುವ ಮುಂದಾಲೋಚನೆಯಿಂದ ತಮ್ಮದೇ ಒಡೆತನದ ಗ್ಲಾಸ ಕಾರ್ಖಾನೆಯ ಆವರಣದಲ್ಲಿ ಆಕ್ಸಿಜನ್ ಪ್ಲ್ಯಾಂಟ ಉತ್ಪಾದಿಸುವ ಘಟಕ ಆರಂಭಿಸಲಾಗಿದೆ. ಈ ಘಟಕದಲ್ಲಿ ದಿನಕ್ಕೆ 120 ಜಂಬೊ ಸಿಲಿಂಡರ್ ಆಕ್ಷಿಜನ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದರು.
ಎರಡನೆ ಅಲೆ ತೀವ್ರತೆ ಪಡೆದಾಗ ಸಾಕಷ್ಟು ಜನರು ಆಕ್ಸಿಜನ್ ಕೊರತೆಯಾಗಿ ಸಂಕಷ್ಟ ಅನುಭವಿಸಿದರು. ನಿಪ್ಪಾಣಿ ಹಾಗೂ ಪಟ್ಟಣಕೋಡಿ ಗ್ರಾಮದಲ್ಲಿ ಎರಡು ಕಡೆ ಆಕ್ಸಿಜನ್ ಘಟಕ ಇರುವುದರಿಂದ ಗಡಿ ಬಾಗದಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗಿದೆ. ಮೂನೆ ಅಲೆ ಬರುವುದು ತಜ್ಞರ ಅಭಿಪ್ರಾಯದಂತೆ ಗಡಿ ಭಾಗದಲ್ಲಿ ಎಲ್ಲ ರಈತಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮೂರು ಕಡೆ ಮಕ್ಕಳ ಕೋವಿಡ್ ಕೇರ್ ಸೆಂಟರ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮೀಸಿದ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಮಾತನಾಡಿ ಕೊರೋನಾ ನಿಯಂತ್ರಣಕ್ಕೆ ಜೊಲ್ಲೆ ಕುಟುಂಉತ್ತಮವಾಗಿ ಕೆಲಸ ಮಾಡಿದೆ. ಸದ್ಯ ಅವಶ್ಯಕವಾಗಿರುವ ಆಕ್ಷಿಜನ ಉತ್ಪಾದಿಸುವ ಘಟಕದ ಕಾಮಗಾರಿಗೆ ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಕೊರೊನಾ ಮೂರನೆ ಅಲೆಗೆ ಸಂಬಂಧಿಸಿದಂತೆ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಕೊರೊನಾ ಸೋಂಕಿತರಿಗೆ ಆಕ್ಷಿಜನ್ ಅನುಕೂಲವಾಗಲು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಬರುವ ಒಂದು ತಿಂಗಳ ಒಳಗಾಗಿ ಘಟಕದ ಕಾಮಗಾರಿ ಮುಕ್ತಾಯವಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ತಹಶಿಲ್ದಾರ ಪ್ರವೀಣ ಜೈನ,ಬಸವ ಜ್ಯೋತಿ ಯುಥ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಆಶಾ ಜ್ಯೋತಿ ಬುಧ್ದಿ ಮಂಧ್ಯ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ, ಡಿವೈಎಸ್ಪಿ ಮನೋಜಕುಮಾರ ನಾಯಿಕ,ಸಿಪಿಐ ಸಂಗಮೇಶ ಶಿವಯೊಗಿ, ಎಡಿಎಚ್ಒ ಡಾ:ಎಸ್.ಎಸ ಗಡೇದ. ಟಿಎಚ್ಒ ವಿಠ್ಠಲ ಶಿಂಧೆ,ಪಿಎಸಐ ಸುರೇಶ ಮಂಟೂರ,ನಿಪ್ಪಾಣಿ ನಗರಸಭೆಯ ಅಧ್ಯಕ್ಷರಾದ ಜಯವಂತ ಭಾಟಲೆ,ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಚಂದ್ರಕಾಂತ ಕೋಟಿವಾಲೆ,ಬಿರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಜಯಾನಂದ ಜಾಧವ, ಉಪಾಧ್ಯಕ್ಷ ಸಿದ್ರಾಮ ಗಡದೇ, ವಿಶ್ವನಾಥ ಕಮತೆ ಗೋಪಾಲ ನಾಯಿಕ, ಅಪ್ಪಾಸಾಬ ಜೊಲ್ಲೆ ಸೇರಿದಂತೆ ಮುಂತಾದವರು ಇದ್ದರು.