ಬಳ್ಳಾರಿ

ಹೊಸಪೇಟೆ ಬಳಿ ಅಪಘಾತ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ ಸಚಿವ ಜಮೀರ್ ಅಹ್ಮದ್ ಖಾನ

ಹೊಸಪೇಟೆ ಬಳಿ ಅಪಘಾತ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ ಸಚಿವ ಜಮೀರ್ ಅಹ್ಮದ್ ಖಾನ

ಬಳ್ಳಾರಿ02:   ಹೊಸಪೇಟೆ ತಾಲೂಕಿನ ವಡ್ಡರಹಳ್ಳಿಯ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದ ಲಾರಿ ಮತ್ತು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಅಟೋಗಳ ಮದ್ಯೆ ನಡೆದ ಅಪಘಾತದಲ್ಲಿ 8 ಸಾವನ್ನಪ್ಪಿದ್ದು, 12 ಜನ ಗಂಭೀರ ಗಾಯಗೊಂಡು ಬಳ್ಳಾರಿ ವಿಮ್ಸ್ ಮತ್ತು ಟ್ರಾಮಾ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಿಎಂ ಸಿದ್ದರಾಮಯ್ಯರವರ ಆದೇಶದ ಮೇರೆಗೆ  ಗಾಯಾಳುಗಳನ್ನು ವಸತಿ ಮತ್ತು ವಕ್ಫ್ ಸಚಿವ ಬಿ.ಝಡ್ ಝಮೀರ್ ಅಹಮ್ಮದ್ ಖಾನ್ ರವರು ಶನಿವಾರ ಬಳ್ಳಾರಿ ನಗರದ ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ನಂತರ ಮೃತ ಮತ್ತು ಗಾಯಾಳುಗಳ ಕುಟುಂಬಸ್ಥರನ್ನು ಭೇಟಿ ಮಾಡಿ ಧೈರ್ಯ ತುಂಬಿ ಸಾಂತ್ವಾನ ಹೇಳಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ನಿನ್ನೆ ನಡೆದ ಅಪಘಾತದ ಘಟನೆ  ಈ ಘಟನೆ ನನಗೆ ವೈಯಕ್ತಿಕವಾಗಿ ಅತೀವ ದುಖಃ ತಂದಿದೆ ದೇವರು ಮೃತ ಕುಟುಂಬಸ್ಥರಿಗೆ ದುಖಃವನ್ನು ಭರಿಸುವ ಶಕ್ತಿ ಕೊಡಲಿ, ಹಾಗೂ ನಿನ್ನೆ ಮುಖ್ಯಮಂತ್ರಿಯವರು ಮೃತರ ಕುಟುಂಬಕ್ಕೆ ಎರಡು ಲಕ್ಷ ಮತ್ತು ಗಾಯಾಳುಗಳಿಗೆ ತಲಾ ಐವತ್ತು ಸಾವಿರ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ ಮತ್ತು ನಾನು ಮುಖ್ಯಮಂತ್ರಿಗಳ ಜೊತೆ ಚಚರ್ಿಸಿ ಅಲ್ಪ ಸಂಖ್ಯಾತ ಇಲಾಖೆಯಿಂದ ಮೃತರಿಗೆ ಒಂದು ಲಕ್ಷ ರೂಪಾಯಿಗಳ ಪರಿಹಾರವನ್ನು ದೊರಕಿಸಿಕೊಡುತ್ತೇನೆಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ವಿಜಯನಗರ ಶಾಸಕರಾದ ಎಚ್.ಆರ್ ಗವಿಯಪ್ಪ, ಬಳ್ಳಾರಿ ನಗರ ಶಾಸಕ ಎನ್ ಭರತ್ ರೆಡ್ಡಿ, ಕೆ.ಎಂ.ಎಫ್ ಅಧ್ಯಕ್ಷ ಭೀಮನಾಯಕ್ , ವಕ್ಫ್ ಬೋರ್ಡ್  ಅಧ್ಯಕ್ಷ ಹುಮಾಯೂನ್ ಖಾನ್, ಮಹಾನಗರ ಪಾಲಿಕೆ ಮಹಾಪೌರರಾದ ಡಿ ತ್ರೀವೇಣಿ, ಉಪ ಮಹಾ ಪೌರರಾದ ಜಾನಕಮ್ಮ, ಪಾಲಿಕೆ ಸದಸ್ಯರಾದ ಆಸೀಫ್, ರಾಮಾಂಜಿನಿ, ಕಾಂಗ್ರೆಸ್ ಮುಖಂಡರಾದ ವೆಂಕಟೇಶ್ ಪ್ರಸಾದ್, ಅಲ್ಲಾಬಕಾಷ್, ಬೆಣಕಲ್ ಬಸವರಾಜ್, ಅಸ್ಲಾಂ ಭಾಯ್, ಸುಬ್ಬರಾಯುಡು, ಖಾಝಾಖಾನ್ ಸೇರಿದಂತೆ ಪಕ್ಷದ ಹಲವಾರು ಮುಖಂಡರಿದ್ದರು 

ಸುದ್ದಿ ಓದಿ