ಸೌಂದತ್ತಿ

ಸಚಿವ ಸಿ.ಸಿ.ಪಾಟೀಲ, ಹಣ್ಣಿಕೇರಿ ಸ್ವಾಮೀಜಿ ಮಾಮನಿ ಕುಟುಂಬಕ್ಕೆ ಸಾಂತ್ವನ

ಸಚಿವ ಸಿ.ಸಿ.ಪಾಟೀಲ, ಹಣ್ಣಿಕೇರಿ ಸ್ವಾಮೀಜಿ ಮಾಮನಿ ಕುಟುಂಬಕ್ಕೆ ಸಾಂತ್ವನ

ಲೋಕದರ್ಶನ ವರದಿ 

ಸವದತ್ತಿ 27: ಬೆಳಗಾವಿ ಜಿಲ್ಲೆಗೆ ಒಂದು ಕೆಟ್ಟ ಗಳಿಗೆ ಬಂದಂತಾಗಿದ್ದು, ಬಿಜೆಪಿಯಲ್ಲಿನ ಸುರೇಶ ಅಂಗಡಿ, ಉಮೇಶ ಕತ್ತಿ ಸೇರಿದಂತೆ ಇಂದು ಆನಂದ ಮಾಮನಿಯಂಥ ಪ್ರಮುಖ ವ್ಯಕ್ತಿಗಳನ್ನು ನಾವು ಕಳೆದುಕೊಂಡು ಸಂಕಟ ಪಡುವಂತಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಸಂತಾಪ ವ್ಯಕ್ತಪಡಿಸಿದರು. 

ಪಟ್ಟಣದ ಆನಂದ ಮಾಮನಿಯವರ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ಅವರು ಮಾತೋಶ್ರೀ ಗಂಗಮ್ಮ ತಾಯಿ ಹಾಗೂ ಅವರು ಕುಟುಂಬದವರೊಂದಿಗೆ ಚರ್ಚಿಸಿ ಸಾಂತ್ವಾನ ಹೇಳಿದರು. 

ಆನಂದ ಮಾಮನಿ ಒಬ್ಬ ವಿಶಿಷ್ಠ ವ್ಯಕ್ತಿಯಾಗಿದ್ದು, ತಾಲೂಕಿನ ಅಭಿವೃದ್ದಿಯ ಕಡೆಗೆ ಹೆಚ್ಚಿನ ಆಸಕ್ತಿಯುಳ್ಳವರಾಗಿದ್ದರು ಎಂದರು. ಅವರ ಕಡೆಯ ದಿನಗಳಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಭೇಟಿಯಾದಾಗ ತಮ್ಮೊಂದಿಗೆ ಉತ್ತಮವಾಗಿ ಮಾತನಾಡಿ ಕ್ಷೇತ್ರದ ಬಗ್ಗೆ ತಾಲೂಕಿನ ರಸ್ತೆಯ ಬಗ್ಗೆಯೇ ಚಿಂತನೆ ಮಾಡಿದಂತ ವ್ಯಕ್ತಿ ಅವರು ಎಂದರು. ಆನಂದ ಮಾಮನಿಯವರ ಪತ್ನಿ ರತ್ನಾ ಮಾಮನಿ ಸೇರಿದಂತೆ ಮಾಮನಿ ಕುಟುಂಬ ಸದಸ್ಯರಿಗೆ ಧೈರ್ಯ ಹೇಳಿದರು. 

ಹಣ್ಣಿಕೇರಿಯ ಮಹಾಸ್ವಾಮೀಜಿ, ಜಗದೀಶ ಶಿಂತ್ರಿ, ವಿರುಪಾಕ್ಷ ಮಾಮನಿ, ಮಲ್ಲಿಕಾರ್ಜುನ ಮಾಮನಿ, ಚಿನ್ಮಯ ಮಾಮನಿ, ಕುಮಾರಸ್ವಾಮಿ ತಲ್ಲೂರಮಠ, ಬಿ.ವಿ.ಮಲಗೌಡರ ಉಪಸ್ಥಿತರಿದ್ದರು. 


ಸುದ್ದಿ ಓದಿ