ಬೈಲಹೊಂಗಲ

ಹಾಲಿನ ವಾಹನ ಪಲ್ಟಿ : ಇಬ್ಬರಿಗೆ ಗಾಯ

ಹಾಲಿನ ವಾಹನ ಪಲ್ಟಿ : ಇಬ್ಬರಿಗೆ ಗಾಯ

ಬೈಲಹೊಂಗಲ 23: ಹಾಲಿನ ವಾಹನವೊಂದರ ಟಾಯರ್ ಬ್ಲಾಸ್ಟ್‌ಗೊಂಡು, ಪಲ್ಟಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡು, ಹಾಲಿನ್ ಪಾಕೇಟ್‌ಗಳು ಚಿಲ್ಲಾಪಿಲ್ಲಿ ಆದ ಘಟನೆ ತಾಲೂಕಿನ ಜಾಲಿಕೊಪ್ಪ ಗ್ರಾಮದ ಬಸ್ ನಿಲ್ದಾಣ ಬಳಿ ಬುಧವಾರ ಸಂಜೆ ನಡೆದಿದೆ.  

ವಾಹನದಲ್ಲಿದ್ದ ಇಬ್ಬರು ಗಾಯಗೊಂಡ ಪರಿಣಾಮ ಅವರನ್ನು ಗ್ರಾಮಸ್ಥರು ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದು ಬಂದಿದೆ. 

ಚನ್ನಮ್ಮನ ಕಿತ್ತೂರು ತಾಲೂಕಿನಿಂದ ಬೈಲಹೊಂಗಲ ಪಟ್ಟಣಕ್ಕೆ ಬರುವ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ. 


ಸುದ್ದಿ ಓದಿ