ಪೂಂಚ್ : ಗ್ರೆನೇಡ್ ಸ್ಫೋಟ, ಸೇನಾ ಅಧಿಕಾರಿಗೆ ಗಾಯ
ಜಮ್ಮು, 18: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ
ನಿಯಂತ್ರಣ ರೇಖೆಯ ಬಳಿಯ ಬಾಲಕೋಟೆ ಸೆಕ್ಟರ್‌ನಲ್ಲಿ ಅಚಾನಕ್ಕಾಗಿ ಗ್ರೆನೇಡ್ ಸ್ಫೋಟಗೊಂಡು ಸೇನಾ ಅಧಿಕಾರಿಯೊಬ್ಬರು
ಗಾಯಗೊಂಡಿದ್ದಾರೆ
ಸೈನ್ಯದ ಕ್ಯಾಪ್ಟನ್ ಗ್ರೆನೇಡ್ ಅನ್ನು ನಿರ್ವಹಿಸುತ್ತಿದ್ದರು. ಮಂಗಳವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಇದರಲ್ಲಿ ಕ್ಯಾಪ್ಟನ್ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಾಯಗೊಂಡಿರುವ ಅಧಿಕಾರಿಯನ್ನು ಚಿಕಿತ್ಸೆಗಾಗಿ ರಜೌರಿಯ ಆರ್ಮಿ ಆಸ್ಪತ್ರೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.