ರಾಣೆಬೆನ್ನೂರ

ವಿಧಾನಪರಿಷತ್ ಚುನಾವಣೆ : ಬಿಜೆಪಿ ಪರ ಸಂತೋಷ ಪಾಟೀಲ ಮತಯಾಚನೆ

ವಿಧಾನಪರಿಷತ್ ಚುನಾವಣೆ : ಬಿಜೆಪಿ ಪರ ಸಂತೋಷ ಪಾಟೀಲ ಮತಯಾಚನೆ

ಲೋಕದರ್ಶನ ವರದಿ 


ರಾಣಿಬೆನ್ನೂರ 08:  ತಾಲೂಕಿನ ಕುಪ್ಪೆಲೂರ ಗ್ರಾಮದಲ್ಲಿ ವಿಧಾನ ಪರಿಷತ್ತ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ ಪರವಾಗಿ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರೊಂದಿಗೆ ವಾಯುವ್ಯ ಕರ್ನಾಟ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ಸಂತೋಷಕುಮಾರ ಪಾಟೀಲ ಮತಯಾಚಿಸಿದರು. 

  ಈ ಸಂಧರ್ಭದಲ್ಲಿ ಮಾತನಾಡಿದ ಅವರು,  ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದು, ರಾಜ್ಯದ ಅಭಿವೃದ್ಧಿಗೆ ಬಿಜೆಪಿಯನ್ನು ಬೆಂಬಲಿಸಬೇಕು. ಜನರ ಕ್ಷೇಮಾಭಿವೃದ್ಧಿಗೆ ವಿಧಾನಸಭೆಯಲ್ಲಿ ಅಂಗೀಕಾರವಾದ ಶಾಸನಗಳು ವಿಧಾನ ಪರಿಷತ್ತಿನಲ್ಲಿ ಪಾಸಾಗಲು ಅಲ್ಲಿ ಬಹುತದ ಅವಶ್ಯಕತೆ ಇದ್ದ ಕಾರಣ ನನಗೆ ಪ್ರಥಮ ಪ್ರಾಸ್ಯಸ್ತ ಮತ ನೀಡಬೇಕು ಎಂದರು. 

   ವಿಪ ಸದಸ್ಯ ಆರ್‌.ಶಂಕರ, ವಾಯುವ್ಯ ಕರ್ನಾಟ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ರಾಜು ಅಡಿವೆಪ್ಪನವರ, ಗ್ರಾಮೀನ ಅಧ್ಯಕ್ಷ ಬಸವರಾಜ ಕೇಲಗಾರ, ನಗರಾಧ್ಯಕ್ಷ ದಿಪಕ ಹರಪನಹಳ್ಳಿ ಸೇರಿದಂತೆ  ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ