ರಾಣೆಬೆನ್ನೂರ

ಸುಣಕಲ್ಲಬಿದರಿ ಗ್ರಾಮದಲ್ಲಿ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ

ಸುಣಕಲ್ಲಬಿದರಿ ಗ್ರಾಮದಲ್ಲಿ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ

ರಾಣಿಬೆನ್ನೂರ 18: ಮಕ್ಕಳು ಬಾಲ್ಯಾವ್ಯವಸ್ಥೆಯ ಸುಮಧುರ ಕ್ಷಣಗಳನ್ನು ಕಳೆಯುವಾಗ ಪಾಲಕರು ಅತ್ಯಂತ ಜಾಗ್ರತೆ ವಹಿಸುವುದರ ಜೋತೆಗೆ ಅವರಿಗೆ ಸರಿಯಾದ ರೀತಿಯಲ್ಲಿ ತಿಳುವಳಿಕೆ ನೀಡಿದಾಗ ಅವರು ಸಮಾಜದಲ್ಲಿ ಶಿಕ್ಷಣವಂತರಾಗಿ ಮತ್ತು ಪ್ರಭುದ್ದರಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಮನೋವೈಧ್ಯ ಡಾ.ವಿಜಯಕುಮಾರ ಬಳಿಗಾರ ಹೇಳಿದರು. 

ಅವರು ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶಿವಾನಂದ ಸಂಯುಕ್ತ ಪಪೂ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗವು ಆಯೋಜಿಸಿದ್ದ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

ವಿದ್ಯಾರ್ಥಿಗಳಿಗೆ ಮಾನಸಿಕ ಕಾಯಿಲೆ ಮತ್ತು ಜೀವನ ಕೌಶಲ್ಯ ಕುರಿತು ಮಾಹಿತಿ ನೀಡುವುದು  ಇಂದಿನ ಬಹು ಅಗತ್ಯವಿದ್ದು. ಮಧ್ಯಪಾನ, ಗುಟುಕ ಸೇವೆನೆಯಿಂದ ಆಗುವ ಪರಿಣಾಮಗಳು ಕುರಿತು ಜಾಗ್ರತಿಗೂಳಿಸಬೇಕಾಗಿದೆ. ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಪಡೆದುಕೊಳ್ಳುವ ಗುರಿಯನ್ನು ಇಟ್ಟುಕೊಳ್ಳದೆ ಉತ್ತಮ ಜೀವನವನ್ನು  ಕಟ್ಟಿಕೊಂಡು ಸಂಸ್ಕಾರವನ್ನು ಬದುಕಿನಲ್ಲಿ ಅಳವಡಿಸಿಕೂಳ್ಳಬೇಕು. ಮತ್ತು ಶಿಸ್ತನ್ನು ರೂಡಿಸಿಕೊಂಡು ಉಪನ್ಯಾಸಕರೊಂದಿಗೆ ಪರಸ್ಪರ ಸಮಾಲೋಚನೆ ನೆಡೆಸಿ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಲು ಮುಂದಾಗಬೇಕು ಎಂದು ಕರೆ ನೀಡಿದರು. 

ಕಾಲೇಜು ಪ್ರಾಚಾರ್ಯ ಪಿ.ಮುನಿಯಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಎಮ್ ಶಿವಕುಮಾರ್, ವಿನಾಯಕ ಬೆನಕನಕೊಂಡ,  ಯೋಜನಾಧಿಕಾರಿ ಎಚ್ ಶಿವಾನಂದ, ಆರೋಗ್ಯ ಇಲಾಖೆಯ ಯಲ್ಲಪ್ಪ ಓಬಣ್ಣನವರ, ಲಕ್ಷ್ಮೀ.ಕೆ, ಮಂಜವ್ವ ಕತ್ತೆಬೇನ್ನೂರು ಸೇರಿದಂತೆ ಮತ್ತಿತರ ಗಣ್ಯರು ಗ್ರಾಮದ ಮುಖಂಡರು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.  

ವಿದ್ಯಾರ್ಥಿಗಳಿಂದ ಮಾನಸಿಕ ಕಾಯಿಲೆಯ ವಿಷಯ  ಕುರಿತು ನಡೆದ ಭಾಷಣ ಸ್ಪರ್ಧೆಯಲ್ಲಿ ವಿಜೆತರಾದ ರಂಜಿತಾ ಬಿದರಿ,(ಪ್ರಥಮ) ರಂಜಿತಾ ಕೋಲಕಾರ(ದ್ವಿತೀಯ) ಮತ್ತ್ನು ಜ್ಯೋತಿ ಒಗ್ಗರಣಿ(ತೃತೀಯ) ಬಹುಮಾನ ಪಡೆದ ವಿಧ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಗೌರವಿಸಲಾಯಿತು. 


ಸುದ್ದಿ ಓದಿ