ಬೈಲಹೊಂಗಲ

ಗ್ರಾಮದ ಸವಾರ್ಂಗೀಣ ಪ್ರಗತಿಗೆ ಸದಸ್ಯರು ಪ್ರಯತ್ನಿಸಬೇಕು: ಚವರದ

ಗ್ರಾಮದ ಸವಾರ್ಂಗೀಣ ಪ್ರಗತಿಗೆ ಸದಸ್ಯರು ಪ್ರಯತ್ನಿಸಬೇಕು: ಚವರದ
ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದ ಜೂನ್ನೂರೇಶ್ವರ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂಗೆ ಆಯ್ಕೆಯಾದ ಅಧ್

ಬೈಲಹೊಂಗಲ06: ಗ್ರಾಮದ ಸವಾರ್ಂಗೀಣ ಪ್ರಗತಿಗೆ ಗ್ರಾ.ಪಂ ಸದಸ್ಯರು ಪ್ರಯತ್ನಿಸಬೇಕೆಂದು ನಿವೃತ್ತ ಡಿಎಚ್‍ಓ ಡಾ.ಎಸ್.ಎಫ್.ಚವರದ ಹೇಳಿದರು.

ತಾಲೂಕಿನ ನೇಸರಗಿ ಗ್ರಾಮದ ಜೂನ್ನೂರೇಶ್ವರ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂಗೆ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರನ್ನು ಸತ್ಕರಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿಯ ಮೂಲಭೂತ ಸೌಕರ್ಯಗಳು, ನಾಗರಿಕರ ಸಾಕಷ್ಟು ಸಮಸ್ಯೆಗಳ ಬಗ್ಗೆ ಸದಸ್ಯರು ಗಮನಹರಿಸಬೇಕು. ಸರಕಾರದಿಂದ ಬಂದ ಅನುದಾನದಲ್ಲಿ ಮಾದರಿ ಗ್ರಾಮವನ್ನಾಗಿ ರೂಪಿಸಲು ಪಣತೊಡಬೇಕೆಂದರು.ಗ್ರಾ.ಪಂ ಅಧ್ಯಕ್ಷೆ ಶೋಭಾ ಮೂಲಿಮನಿ, ಉಪಾಧ್ಯಕ್ಷ ನಿಂಗಪ್ಪ ಮಾಳನ್ನವರ, ಶಂಕರ ತಿಗಡಿ,ಆಯ.ಪಿ.ಯತ್ತಿನಮನಿ, ಮಲ್ಲಿಕಾರ್ಜುನ ಕಲ್ಲೋಳಿ, ಡಾ.ಸಂಗ್ರಾಮಸಿಂಗ ರಜಪೂತ, ಗೋಪಾಲ ಕಾರಿ,ಸಿದ್ದಪ್ಪ ಮದವಾಲ,ಸುರೇಶ ನಾವಲಗಟ್ಟಿ, ಸುರೇಶ ಖಂಡ್ರಿ,ರಾವ ಬದ್ದೂರ ಕಡಬಿ, ಪ್ರಕಾಶ ತೋಟಗಿ, ಮಹಾಂತೇಶ ಸತ್ತಿಗೇರಿ,ಶ್ರೀನಿವಾಸ ಹಮ್ಮನ್ನವರ, ಸರ್ವ ಸದಸ್ಯರು ಇದ್ದರು.


ಸುದ್ದಿ ಓದಿ