ಮನರಂಜನೆ

ಚಿರು ಪುತ್ರ, ಮೇಘನಾಗೂ ಕೊರೋನಾ ಸೋಂಕು : ಮನೆಯಲ್ಲೇ ಕ್ವಾರಂಟೈನ್

ಚಿರು ಪುತ್ರ, ಮೇಘನಾಗೂ ಕೊರೋನಾ ಸೋಂಕು : ಮನೆಯಲ್ಲೇ ಕ್ವಾರಂಟೈನ್

ಬೆಂಗಳೂರು, ಡಿಸೆಂಬರ್ 08: ಇತ್ತೀಚೆಗಷ್ಟೇ ತೊಟ್ಟಿಲ ಶಾಸ್ತ್ರ ಮುಗಿಸಿ ನಿರುಮ್ಮಳವಾಗಿದ್ದ ಮೇಘನಾ ಹಾಗೂ ಅವರ ಪೋಷಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಮೇಘನಾ ತಂದೆ, ನಟ ಸುಂದರರಾಜ್, ತಾಯಿ ಪ್ರಮೀಳಾ ಜೋಷಾಯ್, ಜ್ಯೂನಿಯರ್ ಚಿರು ಹಾಗೂ ಸ್ವತಃ ಮೇಘನಾ ಅವರಲ್ಲಿಯೂ ಸೋಂಕು ದೃಢಪಟ್ಟಿದೆ.

“ಕಳೆದ 10 ದಿನಗಳ ಹಿಂದೆಯೇ ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದೆವು.  ಪ್ರಮೀಳಾ ಎರಡು ದಿನಗಳ ಹಿಂದೆ ಕೋವಿಡ್ ಚಿಕಿತ್ಸೆಗಾಗಿಯೇ ಇರುವ ಎಕ್ಸೆಲ್ ಕೇರ್ ಆಸ್ಪತ್ರೆಗೆ ದಾಖಲಾದರು.  ನಾನು ಇಂದು ದಾಖಲಾಗಿದ್ದೇನೆ.  ಮೇಘನಾ ಮತ್ತು ಮಗು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದಾರೆ” ಎಂದು ನಟ ಸುಂದರರಾಜ್ ಯುಎನ್‍ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

“ಪುಟ್ಟ ಮಗು ಹಾಗೂ ಮೇಘನಾ ಆಸ್ಪತ್ರೆಗೆ ದಾಖಲಾಗುವ ಅಗತ್ಯವೇನೂ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.  ಆದರೆ ಪತ್ನಿ ಪ್ರಮೀಳಾ ಜೋಷಾಯ್ ಮನಃಸ್ಥಿತಿ ಬಹಳ ಸೂಕ್ಷ್ಮ.  ಹೀಗಾಗಿ ಸ್ವಲ್ಪ ಆತಂಕಗೊಂಡಿದ್ದಾರೆ.  ಯಾವುದೇ ಕಾರಣಕ್ಕೂ ಕೊರೋನಾ ಸೋಂಕು ತಗುಲಿದವರು ಭಯ ಪಡುವುದು ಬೇಡ.  ಇದೇನೂ ರೋಗವಲ್ಲ” ಎಂದು ಸುಂದರ ರಾಜ್‍ ವಿಶ್ವಾಸಪೂರ್ವಕ ಹೇಳಿಕೆ ನೀಡಿದ್ದು, ಇತರ ಸೋಂಕಿತರಿಗೆ ಧೈರ್ಯ ನೀಡಿದ್ದಾರೆ.

ಕೋವಿಡ್ ಸೋಂಕಿನಿಂದಾಗ ಬಿಟ್ಟು ಬಿಟ್ಟು ಜ್ವರ ಬರುತ್ತಿದೆ.  ಸುಸ್ತು, ಬಳಲಿಕೆಯಿದ್ದು, ಆಕ್ಸಿಜನ್ ಲೆವೆಲ್ ನಲ್ಲಿ ಕೊರತೆ ಉಂಟಾಗುತ್ತದೆ.  ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಾ ಉಪಚರಿಸುತ್ತಿದ್ದಾರೆ ಎಂದು ಮಾಹಿತಿಯಿತ್ತಿದ್ದಾರೆ.

ಈ ಹಿಂದೆ ಮೇಘನಾ ರಾಜ್ ಮೈದುನ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಅವರಿಗೆ ಕೊರೊನಾ ಪಾಟಿಸಿಟ್ ಬಂದಿತ್ತು. ನಂತರ ಸೋಂಕಿನಿಂದ ಚೇತರಿಸಿಕೊಂಡಿದ್ದರು.

ಸುದ್ದಿ ಓದಿ