ವಿವಿಧೆಡೆ ಕಾಂಗ್ರೆಸ್ ಅಭಿವೃದ್ಧಿ ಕುರಿತು ಸಭೆ
ಲೋಕದರ್ಶನ ವರದಿ
ಹೊಸಪೇಟೆ (ವಿಜಯನಗರ) 10: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎನ್. ಮೊಹಮ್ಮದ್ ಇಮಾಮ ನಿಯಾಜಿ ರವರ ಅಧ್ಯಕ್ಷತೆಯಲ್ಲಿ 13-14 ಹಾಗೂ 30ನೇ ವಾರ್ಡ ಟಿ.ಬಿ ಡ್ಯಾಂನ ವೆಂಕಯ್ಯ ಕ್ಯಾಂಪ್ ಎಚ್‌ಇಎಸ್ ಕಾಲೋನಿ. ನಿಶಾನಿ ಕ್ಯಾಂಪ್, ಡ್ರೆಸಸ್ ಕ್ಯಾಂಪ್ ಇಗಿ ಕ್ಯಾಂಪ್ ಓಲ್ಡ್ ಪಿಎಲ್‌ಸಿ ಮುಂತಾದ ಸ್ಥಳಗಳಲ್ಲಿ ಪಕ್ಷ ಸಂಘಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್. ಎನ್. ಮೊಹಮ್ಮದ್ ಇಮಾಮ್ ನಿಯಾಜಿರವರು ಮಾತನಾಡಿ ಬಿ.ಜೆ.ಪಿ.ಪಕ್ಷದ ವೈಫಲ್ಯಗಳನ್ನು ಜನರಿಗೆ ತಿಳಿಸುತ್ತಾ ಜನರ ಅತ್ಯಾವಶ್ಯಕ ವಸ್ತುಗಳಾದ ಗ್ಯಾಸ್, ಪೆಟ್ರೋಲ್, ಡೀಸೆಲ್ ಆಹಾರ ಧಾನ್ಯಗಳು ದಿನಸಿ ವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸಿ ಬಡ ಹಾಗು ಮಧ್ಯಮ ವರ್ಗದ ಜನರನ್ನು ಬೀದಿಗೆ ತರುವಂತಹ ಕೆಲಸವನ್ನು ಮಾಡಿ ಕೇವಲ ಅಂಬಾನಿ ಅದಾನಿಗಳನ್ನು ಸಿರಿವಂತರನ್ನಾಗಿಸುತ್ತಿದ್ದಾರೆ. ಆದ್ದರಿಂದ ನಾವೆಲ್ಲರು ಸೇರಿ ಪಕ್ಷ ಸಂಘಟನೆಯನ್ನು ಮಾಡುತ್ತ ಹಾಗೂ ಕಾಂಗ್ರೆಸ್ ಪಕ್ಷ ವನ್ನು ಬಲಿಷ್ಟ ಗೊಳಿಸುವದರ ಮೂಲಕ ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಕರೆ ನೀಡಿದರು. ನಂತರ ವಾರ್ಡ್ ಮುಖಂಡರ ಮನೆ ಗಳಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ದೀಪಕ್ ಸಿಂಗ್, ವೆಂಕೊಬಣ್ಣ, ಬಿ. ಮಾರಣ್ಣ, ಗುಜ್ಜಲ್ ರಾಘವೇಂದ್ರ, ರಮೇಶ್, ಅಣ್ಣಮಲೈ, ಎಸ್.ಟಿ. ಮಂಜುನಾಥ, ಆಲಂಭಾಷ, ಭರತ್ ಕುಮಾರ್ ಕೇಶವ, ನಬಿಸಾಬ್, ಮೂರ್ತಿ, ಕುಮಾರ್, ನಟೇಶ್, ಪಿ.ಇಂದುಮತಿ, ಗಂಗಮ್ಮ, ಮಂಜುಳ, ಕವಿತ, ರಾಧ, ಕುಬೇರ, ಪುರುಷೊತ್ತಮ, ಖಾದರ್ ಭಾಷಾ, ವಿನಾಯಕ ರಾಜೇಶ, ಸುಹೇಲ್ , ವೆಂಕಟೇಶ, ರಾಜೇಂದ್ರ, ಆರುಮುಗಮ್, ಮೌಲ, ಅಮಿತ್, ಕೃಷ್ಣ, ಯರಿಸ್ವಾಮಿ, ಹಮೀದ್, ಜಾಫರ್, ಚಾಂದ್, ಚಂದ್ರ, ಸೀನಾ, ಅರುಣ್, ರಾಕಿ ಹಾಗು ಕಾರ್ಯಕರ್ತರು, ಅಭಿಮಾನಿಗಳು, ಹಾಗು ಸಾರ್ವಜನಿಕರು, ಭಾಗವಹಿಸಿದ್ದರು.