ಕಾಗವಾಡ

ಪ್ರಸಕ್ತ ಸಾಲಿನಲ್ಲಿ 28.76 ಲಕ್ಷ ನಿವ್ಹಳ ಲಾಭ: ಸುಭಾಷ ಕುಂಬಾರ..!

ಪ್ರಸಕ್ತ ಸಾಲಿನಲ್ಲಿ 28.76 ಲಕ್ಷ ನಿವ್ಹಳ ಲಾಭ: ಸುಭಾಷ ಕುಂಬಾರ..!

ಭಕ್ತ ಕುಂಬಾರ ಪಟ್ಟಣ ಪತ್ತಿನ ಸಹಕಾರಿ ಸಂಘದ ಸಭೆ; 

ಕಾಗವಾಡ 21: ತಾಲೂಕಿನ ಉಗಾರ ಖುರ್ದ ಪಟ್ಟಣದ ಭಕ್ತ ಕುಂಬಾರ ಪಟ್ಟಣ ಪತ್ತಿನ ಸಹಕಾರಿ ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ 28 ಲಕ್ಷ 27 ಸಾವಿರದ 446 ರೂ. ನಿವ್ಹಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುಭಾಷ ಕುಂಬಾರ ತಿಳಿಸಿದ್ದಾರೆ. 

ಅವರು, ಶನಿವಾರ ದಿ. 20 ರಂದು ಉಗಾರ ಪಟ್ಟಣದ ಸಂಘದ ಕಚೇರಿಯಲ್ಲಿ ನಡೆದ 3ನೇ ವಾರ್ಷಿಕ ಸರ್ವ ಸಾಧಾರಣೆ ಸಭೆಯಲ್ಲಿ ಮಾತನಾಡುತ್ತಿದ್ದರು. ಸಂಘದ ಆಡಳಿತ ಮಂಡಳಿಯ ಸದಸ್ಯ ಆನಂದ ಕುಂಬಾರ ಮಾತನಾಡಿ, ಸನ್ 2024-25 ನೇ ಆರ್ಥಿಕ ವರ್ಷದ ಕೊನೆಗೆ ಸಂಘದಲ್ಲಿ ಒಟ್ಟು 1083 ಸದಸ್ಯರಿದ್ದು, 8.83 ಕೋಟಿ ಠೇವಣಿಗಳನ್ನು ಹೊಂದಿದೆ. ಇನ್ನೂ 1.85 ಕೋಟಿ ನಿಧಿಗಳನ್ನು ಹೊಂದಿದ್ದು, 7.81 ಕೋಟಿ ರೂ.ಗಳಷ್ಟು ಸಾಲ ವಿತರಿಸಲಾಗಿದೆ. ಮತ್ತು ಸದಸ್ಯರಿಗೆ ಶೇ. 20 ರಷ್ಟು ಲಾಭಾಂಶ ವಿತರಿಸಲಾಗುವುದು ಎಂದರು. 

ಈ ಸಮಯದಲ್ಲಿ ಸಂಘದ ಅಧ್ಯಕ್ಷ ಸುಭಾಷ ಕುಂಬಾರ, ಉಪಾಧ್ಯಕ್ಷ ಅಣ್ಣಾಸಾಬ ಕುಂಬಾರ, ನಿರ್ದೇಶಕರಾದ ಯೋಗೇಶ ಕುಂಬಾರ, ಅರುಣ ಕುಂಬಾರ, ದತ್ತಾ ಕುಂಬಾರ, ಆನಂದ ಕುಮಾರ, ಯಶವಂತ ಕುಂಬಾರ, ಶಿವಶಂಕರ ಕುಂಬಾರ, ವೀರಭದ್ರ ಕುಂಬಾರ, ಕಸ್ತೂರಿ ಕುಂಬಾರ, ಸೌ. ಪುಷ್ಪಾ ಕುಂಬಾರ, ಹಣಮಂತ ನಾಯಿಕ, ಶಂಕರ ನಡೋಣಿ ಸೇರಿದಂತೆ ಪ್ರಧಾನ ಕಾರ್ಯದರ್ಶಿ ಕು. ಸುಜಾತಾ ಕುಂಬಾರ, ಸಿಬ್ಬಂದಿಗಳಾದ ಚನಬಸು ಪರುತಗಲ್ಲೆ, ನೂರುದ್ದಿನ ಜಮಾದಾರ, ಸಂಜಯ ಬಿರಾದರ, ವಿವೇಕ ಕಾವೇರಿ, ವಿಶಾಲ ಕಮತೆ, ಕುಮಾರ ಶಿಂಧೆ ಸೇರಿದಂತೆ ಸಂಘದ ಎಲ್ಲ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ