ಲೇಖನಗಳು

ಚುಟುಕು ಕಾವ್ಯದ ಸರದಾರ ಜಿನದತ್ತ ದೇಸಾಯರು

ಚುಟುಕು ಕಾವ್ಯದ ಸರದಾರ ಜಿನದತ್ತ ದೇಸಾಯರು

ಕನ್ನಡದ ಚುಟುಕು ಕವಿಗಳಲ್ಲಿ ಹೆಸರಾದವರು ಜಿನದತ್ತ ದೇಸಾಯರು. ಆಧುನಿಕ ಕನ್ನಡ ಕಾವ್ಯ ಕಂಡಂತೆ ಅವರು  ಕನ್ನಡದ ಏಕಮಾತ್ರ ನ್ಯಾಯಾಧೀಶ ಕವಿಗಳು. ನ್ಯಾಯಾಧೀಶರಾಗಿರುವ ಮುವತ್ತು ವರುಷಗಳ ಕಾಲವೂ ತಮ್ಮ ಕಾವ್ಯ ಅಭಿವ್ಯಕ್ತಿಯನ್ನು ಅತೀ ಎಚ್ಚರಿಕೆಯಿಂದ ಕಾಪಿಟ್ಟುಕೊಂಡು ಅಧಿಕಾರದಿಂದ ನಿವೃತ್ತರಾಗುವದೇ ತಡ ಮತ್ತೆ ಬಂದಿದ್ದೇನೆ ಎಂದು ಘೋಷಿಸುತ್ತಲೇ ಕಾವ್ಯಕೃಷಿಗಿಳಿದವರು.ಸಾಲು ಸಾಲು ದೀಪ ಹಚ್ಚಿದವರು. ಅವರ ಸಾವಿರದ ಸಾವಿರಾರು ಚುಟುಕುಗಳ ಸಮಗ್ರ ಸಂಕಲನವೇ ಬಂದಿದೆ.

ಗಾಂಧಿನಗರ ಅವರ ಆಯ್ದ ಚುಟುಕುಗಳಸಂಕಲನ. ಮೈಸೂರಿನ ವೈದ್ಯ ವಾತರ್ಾ ಪ್ರಕಾಶನದಿಂದ ಎಂ.ಜಿ .ಆರ್. ಅರಸ್ ಅವರು ಸಂಪಾದಿಸಿದ್ದಾರೆ.2013 ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿದೆ. ಈನದತ್ತ ದೇಸಾಯರು ಬರೆದ ಸಾವಿರಾರು ಚುಟುಕುಗಳಲ್ಲಿ ಕೇವಲ ಐವತ್ತನ್ನು ಆರಿಸಿ 'ಗಾಂಧಿನಗರ ' ಎಂದು ಹೆಸರಿಟ್ಟು ಸಮಕಲನವಾಗಿಸಿದ್ದಾರೆ. 

ಮೊದಲನೆಯದಾಗಿ ಇವು ಕಿರುಗವಿತೆಗಳ ಮಾದಿರಿಗಳ ಚುಟುಕುಗಳು ಎಲ್ಲ ಐವತ್ತು ಚುಟುಕುಗಳ ವ್ಯಾಪ್ತಿ ಹತ್ತು ಹನ್ನೆರಡು ಸಾಲಿನದ್ದು. ಚುಟುಕು ಎಷ್ಟು ಸಾಲಿನವು ಇರಬೇಕು? ಎಂಬ ಪ್ರಶ್ನೆಗೆ ಇನ್ನೂ ಯಾರೂ ನಿಖರವಾದ ಉತ್ತರ ಕೊಟ್ಟಿಲ್ಲ.ಅದೇನೆ ಇರಲಿ ಈ ಚುಟುಕುಗಳಂತೂ ಕಿರುಗವಿತೆಗಳಂತಿವೆ. ಉದಾ ಮೊದಲ ಚುಟುಕು ಕವನವನ್ನೇ ನೋಡುವದಾದರೆ

ಹೆಸರೇ ಗಾಂದಿನಗರ 

ಹೆಜ್ಜೆಗೊಂದು ಬಾರು

ಬೀರು ವಿಸ್ಕಿ ಬ್ರಾಂದಿ

ನಂಜಿಕೊಳ್ಳುವದಕ್ಕೆ ಸುಟ್ಟ ಕೋಳಿಯ ಕಾಲು

ಅದರದೆ ಒಂದಿಷ್ಟು ಸಾರು

ಗಾಂಧಿನಗರ 

ಯಾವನೋ ಅವನು

ಹೆಸರಿಟ್ಟ ಪುಣ್ಯಾತ್ಮ

ಯಾರೋ ಹೆಸರಿಟ್ಟ ತಪ್ಪಿಗೆ

ನಾನು ಹೇಳುತ್ತೇನೆ

ಗಾಂಧಿನಗರ 

ಹೇಳಿದಾಗೊಮ್ಮೆ ಕಿವುಚುತ್ತ ಕರುಳು

ಹೀಗೆ ತುಸು ದೀರ್ಘವಾಗಿಯೆ ಇರುವ ಚುಟುಕು ಗಾಂಧಿ ಎಂಬ ಹೆಸರು ಈ ದೇಶದಲ್ಲಿ ಹಿಡಿದಿರುವ ದುರ್ಗತಿಯನ್ನು ವಿವರಿಸುತ್ತದೆ ಆ ಪುಣ್ಯಾತ್ಮ ತಂದು ಕೊಟ್ಟ ಸ್ವಾತಂತ್ರ್ಯವನ್ನು ಇಂದಿನ ನಾವು ಏತಕ್ಕೆ ಬಳಸಿಕೊಳ್ಳುತ್ತಿದ್ದೇವೆಎಂಬುದನ್ನು ಕವಿತೆ ವಿಡಂಬಿಸಿದೆ. ಹೆಜ್ಜೆಗೊಂದು ಬಾರು ಇರುವ ಇಂತಹ ಸ್ಥಳಕ್ಕೆ ಗಾಂಧಿನಗರ ಎನ್ನುವಾಗಲೆಲ್ಲ ಸೂಕ್ಷ್ಮ  ಮನಸ್ಸಿನ ಕವಿಗೆ ಹೊಟ್ಟೆ ಕಿವುಚಿದಂತಾಗುತ್ತದೆ. ಇಂದು ಮಾನವೀಯತೆ ಮರೆಯಾಗಿ ಮೌಲ್ಯಗಳು ಧೂಳಿಪಟವಾಗಿರುವದುಕವಿಗೆ ಆತಂಕ ಮೂಡಿಸಿದೆ. ಇರಲೊಂದು ಸ್ವಂತ ಮನೆಯಿಲ್ಲದ ಪ್ರದಾನಿಗಳು, ಬೀದಿ ದೀಪದ ಬೆಳಕಿನಲ್ಲಿ ಓದಿ ಸಂವಿಧಾನವನ್ನೇ ರಚಿಸಿದ ಪ್ರತಿಭಾಶಾಲಿಗಳು, ಎಲ್ಲರೊಂದೇ ಎಂದ ಮನವೀಯ ವ್ಯಕ್ತಿಗಳು, ಅವರೆಲ್ಲ ಎಲ್ಲಿ ಹೋದರು? ಗಾಂಧಿ ಹಿಂದೆಯೇ ಹೊರಟು ಹೋಗಿರಬಹುದೇ? ಎಂಬ ಚಿಂತೆಯೂ ಕಾಡಿದೆ. ಒಳ್ಳೆಯದು ಮಾಡುವದನ್ನು ದೇವರ ಮೇಲೆ ಭಾರ ಹಾಕಿ ತನ್ನದೇನೂ ಇಲ್ಲ ಎಂದು ಕೈತೊಳೆದುಕೊಳ್ಳುವ ಜನರಿಗೆ ಕವಿ ಒಂದು ಚುಟುಕಿನಲ್ಲಿ ಎಚ್ಚಿರಿಕೆ ನೀಡುತ್ತಾನೆ. 'ನಡಿಗೆ ' ಎಂಬ ಚುಟುಕು ಕೇವಲ ನಡಿಗೆಯ ಬಗ್ಗೆ ಮಾತ್ರ ಹೇಳದೇ ಹೊಸದೊಂದು ಅರ್ಥವನ್ನೇ ಸೂಚಿಸುತ್ತದೆ. 

ಕಲಿರುವ ತನಕ 

ಉಸಿರರುವ ತನಕ

ನಿಂತರೆ ನರಕ

ನಡೆದರೆ ನಾಕ

ಪ್ರಶ್ನೆ ಬರೀ ನಡಿಗೆಯದಷ್ಟೇ ಅಲ್ಲ ಎನ್ನುವದು ಕವಿತೆ ಓದಿದವರಿಗೆ ಹೊಳೆಯುತ್ತದೆ. 'ಚಿಲ್ಲರೆ' ಎಂಬ ಸಾಮಾನ್ಯ ಪದ ನಾಣ್ಯ ಎಂಬಂರ್ಥದಿಂದ ಎಲ್ಲೆಲ್ಲೋ ಹೋಗಿ ವಿಶೆಷಾರ್ಥ ಸೂಚಿಸುತ್ತದೆ. ಅಂಗಡಿಗಳಲ್ಲಿ , ಬಸ್ ಕಂಡಕ್ಟರರ ಹತ್ತಿರ ಚಿಲ್ಲರೆಯ ಕೊರತೆ. ಆದರೆ ಸಮಾಜದತುಂಬಾ ಚಿಲ್ಲರೆ ಜನರೇ ತುಂಬಿದ್ದಾರೆ ಎಂದು ವ್ಯಂಗ್ಯವಾಡುತ್ತದೆ. 

ತಮ್ಮ ಕವಿತೆಗಳಲ್ಲಿ ಕೆಲವು ನಿಸರ್ಗಮುಖಿ ಎನ್ನವು ಕವಿಗಳು ನಕ್ಷತ್ರಗಳನ್ನು ಕನ್ಯೆಯರಿಗೆ ಹೋಲಿಸಿ ರಾತ್ರಿಯಲ್ಲಿ ಮೆರೆಯುವ ಈ ನಕ್ಷತ್ರ ಕನ್ಯೆಯರು 

ಒಂದೆಡೆ ಗುಮಪಾಗಿ

ಇನ್ನೊಂದೆಡೆ ಒಂಟಡಿಯಾಗಿ

ಇರುಳೆಲ್ಲ

ಬನೆಲ್ಲ ಸುತ್ತುವೀ

ಬೆಳಗಾಗುತ್ತಲೇ

ಅದೆಲ್ಲಿ ಮಾಯವಾಗುವರು !

ಈ ನಕ್ಷತ್ರ ಕನ್ಯೆಯರು ಎಂದು ಅಚ್ಚರಿ ಪಡುತ್ತಾರೆ. 

ಸದಾ ಸಮಾಜಮುಖಿಯಾಗಿಯೇ ಚಿಂತಿಸಿದ್ದು ಜಿನದತ್ತ ದೇಸಾಯರ ಕವ್ಯ. ಅವರ ಸಮಾಜಮುಖಿ ಕವಿತೆಗಳಿಗೆ 'ನಂಬಿದರೆ ನರಕ' ಇಂತಹ ಚುಟುಕುಗಳನ್ನು ಉದಾಹರಿಸಬಹುದು. ಸಮಾಜದಲ್ಲಿರುವ ಜನರಲ್ಲಿ ಮಿತ್ರೂ ಇಲ್ಲ, ಶತ್ರುಗಳೂ ಇಲ್ಲ ಎನ್ನುವ ಅವರೇ ಇರುವವರೆಲ್ಲ ಅವಕಾಶವಾದಿಗಳು ಎಂದಿರುವದು ಅವರ ನ್ಯಾಯಾಧೀಶ ದೃಷ್ಟಿಕೋನದ ಪ್ರತೀಕವಾಗಿದೆ.  ಕಾಲೆಳೆಯುವವರು ಎಲ್ಲಿಲ್ಲ.?ಎಲ್ಲ ಕಡೆಗೆ ಇದ್ದಾರೆ. ಆದರೆ ಎಳೆಯುವವರು ಎಳೆಯುತ್ತಲೇ ಇರಲಿ, ನಡೆಯುವವರು ನಡೆಯುತ್ತಲೇ ಇರಬೇಕು, ಅವಕಾಶ ಇಬ್ಬರಿಗೂ ಇದ್ದೇ ಇದೆ ಎನ್ನುತ್ತದೆ ಒಂದು ಚುಟುಕು. ಊರಿಗೆಲ್ಲ ಕಾಟ ಕೊಟ್ಟ ಪುಡಾರಿ ಸತ್ತಾಗ ಊರ ಜನ ಸಂತಾಪ ಏರ್ಪಡಿಸುತ್ತಾರೆ. ಕವಿ ಅದನ್ನು ವ್ಯಂಗ್ಯವಾಡುವದು ಹೀಗೆ

ಈ ಊರಲ್ಲಿ ಸಂತೋಷಕ್ಕೆ 

ಸಂತಾಪ ಎಂದು ಅರ್ಥವೇ?

ವಾಸ್ತವವಾಗಿ ಜನರಿಗಾಗಿರುವದು ಸಂತೋಷ. ಊರಿಗೂರನ್ನೇ ಕಡುವ ಪೀಡೆ ಸತ್ತಿತಲ್ಲ ಎಂದು ಅವರಿಗೆ ಸಂತೋಷವಾಗಿದೆ. ಆದರೆ ಅವರು ಅದನ್ನೇ ಸಂತಾಪ ಎಂದು ಆಚರಿಸುತ್ತಾದ್ದಾರೆ ಎಂದು ವ್ಯಂಗ್ಯ ಸೂಚಿಸುತ್ತದೆ.  

ಜಿನದತ್ತರು ತಮ್ಮ ಕಾವ್ಯದ ಹಾದಿ ಬಸವಣ್ಣನವರ ಹಾದಿ ಎಂದು ನಂಬಿದವರು. ಬಸವಣ್ಣಣವರೇ ಆದ್ಯ ವಚನಗಳಿರಲು ಬೇರೆ ಸಾಹಿತ್ಯವನ್ನು ಓದುವದು , ಸಿಹಿ ನೀರು ಇರಲಿಕ್ಕಾಗಿ 'ಬೇರೆ ಭಾವಿಯ ತೋಡಿ ಉಪ್ಪು ನೀರುಂಬವನ ಪರಿಯಾಯಿತು'ಎಂದು ತಮ್ಮನ್ನೇ ತಾವು ಟೀಕಿಸಿಕೊಂಡಿದ್ದಾರೆ. ದೇಸಾಯರೂ ಅದೇಅರ್ಥವನ್ನು ಕೊಡುವ ಒಂದು ಚುಟುಕಿನಲ್ಲಿ ತನ್ನ ಕಾವ್ಯದ ಮಾದರಿಯನ್ನು ವಿವರಿಸುತ್ತಾ

ವೇದವನೋದಲಿಲ್ಲ

ಪುರಾಣಗಳ ಗಂಟು ಬಿಚ್ಚಲಿಲ್ಲ

ಉಪನಿಷತ್ತಿನ ಪುಟಗಳನೆನಿಸಲಿಲ್ಲ

ಆಗಮಗಳ ನೋಡಲಿಲ್ಲ

ಬಸವಣ್ಣ

ನಿನ್ನ ವಚನವನೋದಿದ ಬಳಿಕ

ದಾರಿ ನಿಚ್ಚಳವಾಯಿತು 

ನಾನೇಕೆ

ಗೊಂಡಾರಣ್ಯದಲ್ಲಿ ಹೋಗಲಿ.

ಬಟ್ಟೆಗೆಟ್ಟಲೆಯಲಿ

ಎಂದು ವಚನ ಸಾಹಿತ್ಯದ ಮಹತ್ವನ್ನು ಸಾರುತ್ತರೆ. ತನ್ನದು ಶರಣರ ಹಾದಿ ಎಂದು ಸ್ಪಷ್ಟ ಪಡಿಸುತ್ತಾರೆ. 

ಲಂಚಕೋರರನ್ನು 'ಗೊಬ್ಬರವ ಹೊಡೆದವರು' ಎನ್ನುವ ಕವಿ ಅವು ಇಲಿ ಹೆಗ್ಗಣಗಳ ಜಾತಿಗೆ ಸೇರಿದವು, ಆ ಸಂತತಿಗೆ ಸಾವಿಲ್ಲಎಂದು ಖಾರವಾಗಿಯೇ ಟೀಕಿಸುತ್ತಾರೆ. ಕೋಳಿ ಶೀಲವಂತರ ಓಣಿಯ ಲ್ಲಿಯೇ ಮಾಯವಾಗಿದೆ ಎನ್ನವು ಚುಟುಕು ಸಧ್ಯದ ಭಾರತದ ಮೌಲ್ಯಗಳ ಅದ:ಪತನವನ್ನು ಸೂಕ್ಷ್ಮವಾಗಿ ವ್ಯಂಗ್ಯವಾಡಿದೆ. ಯಾವು ಹೂವಾದರೇನು ಅದರ ಪೂವಾಪರಗಳ ಬಗೆಗೆ ಚಿಂತಿಸದೇ ಅದರ ಸುಗಂಧವನ್ನು ಸವಿಯಬೇಕು ಅದನ್ನು ಬಿಟ್ಟು ಹೂವು ಯಾವ ಗಿಡದ್ದು ಯಾವ ಜಾತಿ ಎಂದು ಕೇಳುವದರಲ್ಲಿ ಅರ್ಥವಿಲ್ಲ. ಅವರ ಈ ಬಗೆಯ ಚುಟುಕುಗಳು ಜಿಡ್ಡುಗಟ್ಟಿದ ಸಮಾಜಕ್ಕೆ ಚಾಟಿಯೇಟುಗಳಂತಿವೆ. 

ಕವಿಗೆ ತನ್ನದ ಕಾವ್ಯದ್ದು ಯಾವ ಪಂಥಕ್ಕೆ ಸೇರಿದ ದಾರಿ ಎಂಬ ಪ್ರಶ್ನೆ ಕಾಡಿಲ್ಲ. ಆತ ಕಾವ್ಯಪಂಥದವನೇ ಹೊರತು ನವ್ಯ, ನವೋದಯಗಳ ಬಗೆಗೆತಲೆ ಕೆಡಿಸಿಕೊಂಡಿಲ್ಲ.ನವ್ಯವೋ?ನವೋದಯವೋ? ಏನಾದರೂ ಆಗಿರಲಿ, ಒಟ್ಟಿನಲ್ಲಿ ಕಾವ್ಯವಾದರೆ ಸಾಕು,  ಎಂಬುದು ಅವರ ಹಾರೈಕೆ. ಅಂತೆಯೇ ಕವಿ

ನನ್ನ ದಾರಿ ನನಗೆ

ನವೋದಯ ,ನವ್ಯ, ದಿವ್ಯ,

ಬಂಡಾಯ ಗಿಂಡಾಯ

ಅದೇನೇ ಇದ್ದರೂ

ಅದು ಅವರವರ ದಾರಿ

ನನಗೆ ನನ್ನದೇ ದಾರಿ

ಕನ್ನಡದಲ್ಲಿ 'ಆನೆ ನಡೆದುದೆ ದಾರಿ' ಎಂಬ ಒಂದು ಗಾದೆ ಮಾತಿದೆ. ಮಹಾಕವಿಗಳು ಯಾವಾಗಲೂ ತಮ್ಮದೇ ದಾರಿಯನ್ನು ನಿಮರ್ಿಸುತ್ತಾರೆ.. ಈ ಬಗೆಯ ವಿಚಾರದಲ್ಲಿ ನಂಬಿಕೆ ಇಟ್ಟವರು ಜಿನದತ್ತ ದೇಸಾಯರು. ಚುಟುಕು ಸಹಿತ್ಯ ತನ್ನ ಸೂಕ್ಷ್ಮ ವ್ಯಂಗ್ಯಕ್ಕೆ ಹೆಸರಾದುದು. 'ಸ್ವರ್ಗದ ಬಾಗಿಲು' ನಂತಹ ಚುಟುಕುಗಳು ಹೀಗೆ ಚೇಳಿನಂತೆ ಕುಟುಕುತ್ತವೆ. ಸ್ವರ್ಗಕ್ಕೆ ಹೋದವನೊಬ್ಬನನ್ನು ಸ್ವರ್ಗದಬಾಗಿಲಲ್ಲಿ ತಡೆಯುತ್ತರೆ. ಆತ ನಾನು ಇಂಥವನು ಎಂದು ಬಡಾಯಿ ಕೊಚ್ಚಲು ಮಠಾಧೀಶರು ಕೊಟ್ಟ ಶಿಫಾರಸು ಪತ್ರ ತೋರಿಸುತ್ತನೆ. ಆದರೆ ಸ್ವರ್ಗದ ಬಾಗಿಲು ತೆಗೆಯುವದಿಲ್ಲ. ಕೊನೆಗೆ ಒಬ್ಬ ಬಡ ಕುರುಡ ಹುಡುಗ ಬ್ರೈಲ್ ಲಿಪಿಯಲ್ಲಿ ಗೀಚಿದ ಚೀಟಿ ತೋರಿಸಿದೊಡನೆ ಬಾಗಿಲು ತೆರೆಯುತ್ತದೆ. ಇಡೀ ಚುಟುಕು ವ್ಯಂಗ್ಯದ ತಾಜಾತನದಿಂದ ಹೊಳೆಯುತ್ತದೆ. 

ಇಲ್ಲಿನ ಎಲ್ಲ ಐವತ್ತು ಚುಟುಕುಗಳೂ ವಿವರಣಾತ್ಮಕವಾಗಿವೆ. ಸಂಕ್ಷಿಪ್ತತೆ , ಸ್ಪೋಟಕ ಗುಣ ಇವುಗಳ ಲಕ್ಷಣವಲ್ಲ. ಒಂದಿಷ್ಟು ಬಿಡಿಸಿ ಹೇಳುವ ಮಾದರಿ ಇಲ್ಲಿನದು.

ಸದಾ ಉದಾತ್ವಾಗಿ ಬಾಳಿದ, ಉದಾತ್ತವಾದುದನ್ನು ಚಿಂತಿಸಿದ ಶ್ರೀ ಜಿನದತ್ತ ದೇಸಾಯರು ನೀಡಿದ ಈ ಚುಟುಕುಗಳು ನಮಗೆ ಕೈದಿವಿಗೆಯಂತಿವೆ. ಉತ್ತಮ ಸಾಹಿತ್ಯವನ್ನು ಓದುವದು ಇಂದಿನ ಅಗತ್ಯವಾಗಿದೆ.  

ಡಾ.ವೈ.ಎಂ. ಯಾಕೊಳ್ಳಿ 

    ಮೊ: 9731970857

 

ಸುದ್ದಿ ಓದಿ