ಮಹಲಿಂಗಪುರ

ವಿದೇಶ ಚಿಕಿತ್ಸೆಗಿಂತಲೂ ನಮ್ಮ ದೇಶದ ವೈದ್ಯಕೀಯ ಚಿಕಿತ್ಸೆ ಶ್ರೇಷ್ಠ: ಸಚಿವ ಎಚ್ ಕೆ ಪಾಟೀಲ

ವಿದೇಶ ಚಿಕಿತ್ಸೆಗಿಂತಲೂ ನಮ್ಮ ದೇಶದ ವೈದ್ಯಕೀಯ ಚಿಕಿತ್ಸೆ ಶ್ರೇಷ್ಠ: ಸಚಿವ ಎಚ್ ಕೆ ಪಾಟೀಲ

ಮಹಾಲಿಂಗಪುರ 31: ವಿದೇಶ ಚಿಕಿತ್ಸೆಗಿಂತಲೂ ನಮ್ಮ ದೇಶದ ವೈದ್ಯಕೀಯ ಚಿಕಿತ್ಸೆ ಶ್ರೇಷ್ಠ ಎಂದು ಕಾನೂನು, ಸಂಸದೀಯ ಮತ್ತು ಪ್ರವಾಸೋದ್ಯಮ ಸಚಿವರಾದ ಎಚ್‌.ಕೆ.ಪಾಟೀಲ್ ಹೇಳಿದರು. 

ಬೆಂಗಳೂರು ನಾರಾಯಣ ಹೆಲ್ತ್‌ ಸಹಯೋಗದೊಂದಿಗೆ ರವಿವಾರ ಪಟ್ಟಣದ ಖ್ಯಾತ ವೆಂಕಟೇಶ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಅಗತ್ಯ ಕಾರ್ಡಿಯೋ ಥೋರಾಸಿಕ್, ವ್ಯಾಸ್ಕ್ಯುಲರ್ ಸರ್ಜರಿ ಆಪರೇಷನ್ ಥಿಯಟರ್, ಕಾರ್ಡಿಯಾಕ ಕ್ಯಾಥ್ ಲ್ಯಾಬ್ ಮತ್ತು ಡಾ. ವಿ.ಪಿ ಕನಕರಡ್ಡಿ ಮೆಮೋರಿಯಲ್ ಕಾಲೇಜ್ ಆಫ್ ನಸಿಂರ್ಗ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 

ಮಹಾನಗರಗಳಲ್ಲಿ ವೈದ್ಯರು ಹೃದ್ರೋಗಿಗಳು ಮತ್ತು ಇತರೆ ರೋಗಿಗಳಿಗೆ (ಗೋಲ್ಡನ್ ಹವರ್) ತುರ್ತು ವೈದ್ಯಕೀಯ ಸೇವೆ ನೀಡಿ ಅಮೂಲ್ಯ ಪ್ರಾಣವನ್ನು ಉಳಿಸಲು ದುಬಾರಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅದಕ್ಕೆ ಪೂರಕವಾದ ಯಂತ್ರೋಪಕರಣಗಳನ್ನು ಬಳಸುತ್ತಾರೆ.ಇದು ಅಲ್ಲಿ ಸಾಧ್ಯ ಏಕೆಂದರೆ ಹೆಚ್ಚಿನ ಗಳಿಕೆಯಿಂದ ಅವರ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. 

ಎಂತಹ ಬೇಕೆಂದರೂ ಯಂತ್ರಗಳನ್ನು ಅಳವಡಿಸಬಹುದು.ಗ್ರಾಮೀಣ ಪ್ರದೇಶದಲ್ಲಿ ಇದೆಲ್ಲ ಅಸಾಧ್ಯ.ಇಂತಹದರಲ್ಲಿ ಸ್ಥಳೀಯ ವೆಂಕಟೇಶ್ ಆಸ್ಪತ್ರೆಯ ವೈದ್ಯರಾದ ಅಜೀತ ಕನಕರೆಡ್ಡಿ ಅವರು ನುರಿತ ವೈದ್ಯರನ್ನೊಳಗೊಂಡು ತೆರೆದ ಹೃದಯದ ಚಿಕಿತ್ಸೆಗೆ ಅಡಿ ಇಟ್ಟಿರುವುದು ಶ್ಲ್ಯಾಘನೀಯ ಕಾರ್ಯ. ತಂದೆ ಹಾಕಿ ಕೊಟ್ಟಿರುವ ಬಡವರ ಸೇವಾ ಮಾರ್ಗದಲ್ಲಿ ನಡೆದಿದ್ದೇ ಆದರೆ, ಭವಿಷ್ಯದಲ್ಲಿ ತಮ್ಮ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತದೆ ಎಂದು ಹಾರೈಸಿದರು. 

ಉಸ್ತುವಾರಿ ಸಚಿವ ಆರ್‌. ಬಿ. ತಿಮ್ಮಾಪುರ ಮಾತನಾಡಿ, ನಿದ್ರೆ,ನೀರಡಿಕೆ ಮನಸಿನ ನೆಮ್ಮದಿಯನ್ನೂ ಬದಿಗಿಟ್ಟು ಹಗಲು, ರಾತ್ರಿ ಎನ್ನದೆ 24 ಗಂಟೆಯೂ ಪರರ ಆರೋಗ್ಯದ ಕಡೆಗೆ ಗಮನ ನೀಡುವ ವರ್ಗ ಯಾವುದಾದರೂ ಇದ್ದರೆ ಅದು ವೈದ್ಯರ ವರ್ಗ.ವೆಂಕಟೇಶ ಆಸ್ಪತ್ರೆಯಲ್ಲಿ ಉನ್ನತ ದರ್ಜೆಯ ಮಶೀನ್ ಅಳವಡಿಸಿರುವುದು ಈ ಭಾಗದ ಜನರಿಗೆ ವರದಾನ ಎಂದರು. 

ಸಚಿವರಾದ ಎಂ.ಬಿ.ಪಾಟೀಲ್ ಮಾತನಾಡಿ, ನಸಿಂರ್ಗ್ ಕಾಲೇಜು ಮಾಡಿದರೆ ಅದಕ್ಕೆ ಪೂರಕವಾಗಿ ಜೊತೆಯಲ್ಲಿಯೆ ಆಸ್ಪತ್ರೆ ಕೂಡ ಇರಬೇಕು.ಇಲ್ಲದೆ ಹೋದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ನಸಿಂರ್ಗ್ ಕೋರ್ಸ್‌ ಬಗ್ಗೆ ಜ್ಞಾನವೇ ಸಿಗುವುದಿಲ್ಲ.ಈ ವೆಂಕಟೇಶ್ ಆಸ್ಪತ್ರೆಯಲ್ಲಿ ಎಲ್ಲವೂ ಸುಸಜ್ಜಿತ ಮತ್ತು ನುರಿತ ವೈದ್ಯರಿದ್ದಾರೆ ಎಂದರು. 

ಡಾ.ಅಜೀತ ಕನಕರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು.ಸಂಸದ ಪಿ.ಸಿ.ಗದ್ದಿಗೌಡರ್, ಚಿನ್ನದ ಗಣಿ ಅಧ್ಯಕ್ಷರಾದ ಜೆ.ಟಿ.ಪಾಟೀಲ್, ಡಾ.ಅಜೀತ ಕನಕರೆಡ್ಡಿ, ಡಾ.ಆರ್‌.ಟಿ.ಪಾಟೀಲ್, ಡಾ. ಸುರೇಶ್ ದುಗ್ಗಾನಿ, ಡಾ.ರವಿವರ್ಮ ಪಾಟೀಲ್, ಡಾ.ವಿಠ್ಠಲ್ ಬಾಗಿ ಮಾತನಾಡಿದರು. 

ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿ ಕ್ಯಾತಲ್ಯಾಬ್ ಯಂತ್ರಕ್ಕೆ ಪೂಜೆ ನಡೆಸಿದರು. ಡಾ.ಶರ್ವಾಣಿ ಕನಕರೆಡ್ಡಿ ಗಣ್ಯರನ್ನು ಸನ್ಮಾನಿಸಿದರು. ವೇದಿಕೆ ಗಣ್ಯರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕ ಸಿದ್ದು ಸವದಿ,ಸಿದ್ದು ಕೊಣ್ಣೂರ, ಯಲ್ಲನ್ನಗೌಡ ಪಾಟೀಲ್, ದೇವಳ ದೇಸಾಯಿ, ಮಹಾಲಿಂಗಪ್ಪ ಕೋಳಿಗುಡ್ಡ, ಭೀಮಶಿ ಹೊಸೂರು, ಮಲ್ಲಪ್ಪ ಸಿಂಗಾಡಿ, ರವಿ ಜವಳಗಿ, ಉಪಸ್ಥಿತರಿದ್ದರು.ಸ್ವಾಗತ ಗೀತೆ ಗೀತಾ ಕೋಲಕಾರ, ಪತ್ರಕರ್ತರಾದ ಜಯರಾಮ ಶೆಟ್ಟಿ, ವಿಭಯಾ ಜಿಗಜಿಣಗಿ ಮತ್ತು ಸುಮಲತಾ ಕೊಲ್ಲೂರ ಕಾರ್ಯಕ್ರಮ ನಿರೂಪಿಸಿ, ವೆಂಕಟೇಶ್ ಅಜೀತ ಕನಕರೆಡ್ಡಿ ವಂದಿಸಿದರು. 


ಸುದ್ದಿ ಓದಿ