ಕಾರವಾರ

ಬಾಲಮಂದಿರ ನರ್ಸರಿಯಲ್ಲಿ ಅರ್ಥಪೂರ್ಣ ವಿದ್ಯಾಪ್ರವೇಶ ಕಾರ್ಯಕ್ರಮ

ಬಾಲಮಂದಿರ ನರ್ಸರಿಯಲ್ಲಿ ಅರ್ಥಪೂರ್ಣ ವಿದ್ಯಾಪ್ರವೇಶ ಕಾರ್ಯಕ್ರಮ

ಲೋಕದರ್ಶನ ವರದಿ 

ಕಾರವಾರ 13 : ಎಜ್ಯುಕೇಶನ್ ಸೊಸೈಟಿಯ ಬಾಲಮಂದಿರ ನರ್ಸರಿ ಶಾಲೆಯಲ್ಲಿ ಪುಟಾಣಿಗಳಿಗಾಗಿ ಆಯೋಜಿಸಲಾದ ವಿದ್ಯಾಪ್ರವೇಶ ಕಾರ್ಯಕ್ರಮವು ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರವಾರ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಎಸ್‌.ಪಿ ಕಾಮತ್ ಮಾತನಾಡಿ, “ಮಕ್ಕಳಿಗೆ ಓಂಕಾರ ಹೇಳಿಕೊಡಬೇಕು. ಝೇಂಕಾರ ಸಹ ಮಕ್ಕಳಲ್ಲಿ ಬದಲಾವಣೆತರಲಿದೆಎಂದು ಹೇಳಿದರು. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಿದೆ.ಬಾಲಮಂದಿರ ಶಾಲೆ ನಿಮ್ಮಮಕ್ಕಳ ಭವಿಷ್ಯರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ”ಎಂದು ತಿಳಿಸಿದರು. 

“ಮಕ್ಕಳಲ್ಲಿ ದೇವರನ್ನ ಕಾಣಬೇಕು ಎಮ್ನುವುದು ಯಾಕೆ ಅಂದ್ರೆ, ಮಕ್ಕಳಿಗೆ ಒಳ್ಳೆಯದು ಕೆಟ್ಟದ್ದು ತಿಳಿಯುವುದಿಲ್ಲ. ಹೀಗಾಗಿ ಮಕ್ಕಳನ್ನ ದೇವರನ್ನ ಕಾಣುತ್ತೇವೆ. ಮಕ್ಕಳನ್ನು ಮೊಬೈಲ್ ಸ್ಕ್ರೀನ್‌ನಿಂದ ದೂರವಿರಿಸಿ, ಉತ್ತಮ ಸಂಸ್ಕಾರಗಳನ್ನು ನೀಡುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ” ಎಂದು ಕಾರವಾರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಅನಿರುದ್ಧ್‌ ಹಳದಿಪುರಕರ್ ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾರವಾರ ಶಿಕ್ಷಣ ಸಂಸ್ಥೆಯಆಡಳಿತಾಧಿಕಾರಿ ಹಾಗೂ ಹೆಚ್ಚುವರಿ ಕಾರ್ಯದರ್ಶಿ ಜಿ.ಪಿ ಕಾಮತ್ ಮಾತನಾಡಿ, “ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣ ಕಲಿಸುವುದು ಮುಖ್ಯ ಎಂದರು. ಪುಟಾಣಿ ಮಕ್ಕಳ ಮನಸ್ಸುತುಂಬಾ ಮೃದುವಾದದ್ದು, ಅವರಿಗೆ ಏನು ಕಲಿಸಬೇಕು. ಕಲಿಸಬಾರದೆಂಬುದು ಸಹ ಬಹಳ ಮಹತ್ವದು”್ದ ಎಂದರು. 

ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಎಲ್ಲರನ್ನು ಸ್ವಾಗತಿಸಿದರು. ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಧ್ಯಾನ, ಗಣೇಶ ಸ್ತುತಿ, ತಿಲಕಧಾರಣೆ, ಮಾಲಾರೆ​‍್ಣ, ಪುಷ್ಪಾರ್ಚನೆ, ಸಿಹಿ ವಿತರಣೆ, ಸರಸ್ವತಿ ಸ್ತುತಿ, ಅಕ್ಕಿಯ ಮೇಲೆ ‘ಶ್ರೀ’ ಬರವಣಿಗೆ, ಆರತಿ ಹಾಗೂ ಪ್ರಸಾದ ವಿತರಣೆಯಂತಹ ವಿವಿಧ ಸಂಸ್ಕಾರ ಪೂರ್ಣ ವಿಧಿವಿಧಾನಗಳು ನೆರವೇರಿದವು. ಕಾರ್ಯಕ್ರಮದಲ್ಲಿ ನಜಿರುದ್ಧೀನ್ ಸೈಯದ್, ಗೀತಾಐಸಾಕ್, ಸಂತೋಷ ಶೇಟ್, ಮಾಧುರಿ ನಾಯ್ಕ ಸೇರಿದಂತೆ ಶಿಕ್ಷಕಿಯರು ಉಪಸ್ಥಿತರಿದ್ದರು. ಶಿಕ್ಷಕಿ ನೀಫಾಡಿ’ ಕೊಸ್ಟಾ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ