ರಾಯಣ್ಣನ ಶೌರ್ಯ, ಸಾಹಸವನ್ನು ಯುವಜನ ಅಳವಡಿಸಿಕೊಳ್ಳಲಿ
ಶಾಸಕ ಮಹಾಂತೇಶ ಕೌಜಲಗಿ ಕರೆ: ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಉತ್ಸವದ ವೀರಜ್ಯೋತಿಗೆ ಸ್ವಾಗತ
ಬೈಲಹೊಂಗಲ 12: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಬಲಿದಾನಗೈದ ವೀರರ ಸವಿನೆನಪಿಗಾಗಿ ಸರ್ಕಾರ ಕೋಟ್ಯಾಂತರ ರೂ.ವೆಚ್ಚ ಮಾಡಿ ಅವರ ಹೆಸರಿನಲ್ಲಿ ರಾಯಣ್ಣ ಸೈನಿಕ ಶಾಲೆ, ರಾಕ್ ಗಾರ್ಡನ ನಿರ್ಮಾಣ ಕಾಮಗಾರಿ ಕಾರ್ಯ ಪ್ರಗತಿ ಹಂತದಲ್ಲಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಅವರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಬುಧವಾರ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಉತ್ಸವ-2022 ವೀರಜ್ಯೋತಿ ಕಾರ್ಯಕ್ರಮ ಬರಮಾಡಿಕೊಂಡು ಮಾತನಾಡಿ, ರಾಯಣ್ಣ ಒಬ್ಬ ಅಪ್ಪಟ್ಟ ದೇಶ ಭಕ್ತರಾಗಿದ್ದರು. ಅವರ ಶೌರ್ಯ, ಸಾಹಸವನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಂಡು ಬಲಿಷ್ಟ ರಾಷ್ಟ್ರ ನಿರ್ಮಾಣ ಮಾಡಲು ಸಂಕಲ್ಪ ಮಾಡಬೇಕೆಂದರು.
ಈಗಾಗಲೇ ಸಂಗೊಳ್ಳಿಯಲ್ಲಿ 100 ಏಕರೆ ಪ್ರದೇಶದಲ್ಲಿ 165 ಕೋಟಿ ರೂ.ದಲ್ಲಿ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಸೈನಿಕ ಶಾಲೆ ನಿರ್ಮಾಣದ ಕಾರ್ಯ ಪ್ರಗತಿ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಲೋಕಾರೆ್ಣಗೊಳ್ಳಲಿದೆ.. 15 ಏಕರೆ ಜಾಗೆಯಲ್ಲಿ 12 ಕೋಟಿ ರೂ.ಗಳಲ್ಲಿ ರಾಕ್ ಗಾರ್ಡನ್ ನಿರ್ಮಾಣ ಕಿತ್ತೂರು ಚನ್ನಮ್ಮ, ರಾಯಣ್ಣ ಅವರ ಬಾಲ್ಯ, ಯವ್ವನ, ಹೋರಾಟ, ಬ್ರಿಟೀಷರ ಜೊತೆಗೆ ಯುದ್ದ ಮಾಡಿದ ಸನ್ನೀವೇಶದ ಚಿತ್ರಣಗಳ ವೈಭವ ಮೂಡಿಬರಲಿದೆ. 70 ಕೋಟಿ ರೂ.ವೆಚ್ಚದಲ್ಲಿ ನಂದಗಡದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಅಂತರಾಷ್ಟ್ರೀಯ ಮಟ್ಟದ ರಾಯಣ್ಣನ ಇತಿಹಾಸವನ್ನು ಬಿಂಬಿಸುವ ಮ್ಯೂಜಿಯಂಗಳನ್ನು ಶೀಘ್ರದಲ್ಲಿ ಲೋಕಾರೆ್ಣ ಆಗಲಿದೆ ಎಂದರು.
ಬೆಳಗಾವಿ ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ರಾಯಣ್ಣ ಪುತ್ಥಳಿಗೆ ಗೌರವ ಸಮರ್ಿಸಿ ಮಾತನಾಡಿ, ಕಿತ್ತೂರ ಚನ್ನಮ್ಮಾಜೀಯ ಬಲಗೈ ಬಂಟ ರಾಯಣ್ಣ ದೇಶ ಕಂಡ ಅಪ್ರತಿಮ ಹೋರಾಟಗಾರರಾಗಿದ್ದರು. ಇವರ ಹೆಸರಿನಲ್ಲಿ ಸರಕಾರ ಅಂತರಾಷ್ಟ್ರೀಯ ಮಟ್ಟದ ಸೈನಿಕ ಶಾಲೆ, ರಾಕ್ ಗಾರ್ಡನ್, ಇತಿಹಾಸ ಸಾರುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿರುವದು ಶ್ಲಾಘನೀಯವಾಗಿದೆ ಎಂದರು
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಕಿತ್ತೂರು ಸಂಸ್ಥಾನದ ನಂದಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಕಿತ್ತೂರು ಸಾಮ್ರಾಜ್ಯದ ಕೀರ್ತಿಯನ್ನು ಬೆಳಗಿಸುವಲ್ಲಿ ಸಂಗೊಳ್ಳಿ ರಾಯಣ್ಣ ಅವರು ಕೊಡುಗೆ ಅಪಾರವಾಗಿದೆ. ಯುವ ಪೀಳಿಗೆಗೆ ಅವರ ತ್ಯಾಗ ಬಲಿದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತಿದೆ. ಪ್ರತಿಯೊಂದು ಮನೆಯಲ್ಲಿ ಸಂಗೊಳ್ಳಿ ರಾಯಣ್ಣನಂತಹ ಮಕ್ಕಳು ಹುಟ್ಟಲಿ ಎಂದು ಆಶಿಸಿ, ಈ ಬಾರೀ ಕರೋನಾ ಮತ್ತು ಓಮಿಕ್ರಾನ ಹಿನ್ನಲೆಯಲ್ಲಿ ಸರಕಾರ ಸಾಂಕೇತಿಕವಾಗಿ ಉತ್ಸವವನ್ನು ಆಚರಿಸುತ್ತಿದೆ ಎಂದರು.
ಸಂಗೊಳ್ಳಿಯ ಗುರು ಸಿದ್ಧಲಿಂಗೇಶ್ವರ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಎಸಿ ಡಾ.ಶಶಿಧರ ಬಗಲಿ, ತಹಶೀಲ್ದಾರ ಬಸವರಾಜ ನಾಗರಾಳ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ದಿವೈಎಸಪಿ ಶಿವಾನಂದ ಕಟಗಿ, ಸಿಪಿಐ ಉಳವಪ್ಪ ಸಾತೇನಹಳ್ಳಿ, ತಾಪಂ ಇಓ ಸುಭಾಷ ಸಂಪಗಾಂವಿ,ತಾಲೂಕಾ ಆರೋಗ್ಯ ಅಧಿಕಾರಿ ಎಸ್.ಎಸ್. ಸಿದ್ದನ್ನವರ, ಕಂದಾಯ ನೀರಿಕ್ಷಕ ಸುರೇಶ ಮಾಳಗಿ, ಪ್ರಶಾಂತ ಕೇಳಗೇರಿಮಠ, ಗ್ರಾಪಂ. ಅಧ್ಯಕ್ಷ ಫಕೀರ್ಪ ಕುರಿ ಉಪಾಧ್ಯಕ್ಷೆ ರತ್ನಾ ಆನೆಮಠ, ಸದಸ್ಯರಾದ ಬಸವರಾಜ ಕೊಡ್ಲಿ, ಶಿವಕುಮಾರ ಪೂಜೇರ, ವಿರೇಶ ಹಳೇಮನಿ, ಇಮಾಮಹುಸೇನ ಖುದ್ದನ್ನವರ, ಸಾಹಿತಿ ಬಸವರಾಜ ಕಮತ, ನ್ಯಾಯವಾದಿ ಉಮೇಶ ಲಾಳ, ಐ.ಎಸ್.ಪಾಟೀಲ, ಅರುಣ ಯಲಿಗಾರ, ಚನ್ನಪ್ಪ ಹೊಳೆಪ್ಪನವರ, ಮಲ್ಲಿಕಾರ್ಜುನ ಕುಡೋಳ್ಳಿ, ರಾಯಪ್ಪ ಹೆಗಡೆ, ಮಲ್ಲಿಕಾರ್ಜುನ ಚನ್ನಕ್ಕನವರ, ಸುಪ್ರಿತ ತಿಗಡಿ, ಸುನಿಲ ಕುಲಕರ್ಣಿ, ಮಡಿವಾಳಪ್ಪ ಹಕ್ಕಿ, ಸುರೇಶ ಕುರಿ, ಪುಂಡಲೀಕ ಅಂಬಿಗೇರ, ಈರಣಗೌಡ ಪಾಟೀಲ, ಮಹಾರುದ್ರಯ್ಯ ವಕ್ಕುಂದಮಠ, ಭೀಮಪ್ಪ ಆನಿಗೋಳ, ಎಸ್.ಎ.ಪೆಂಡಾರಿ, ಪಿಡಿಓ ಮಮತಾಜ ಛಬ್ಬಿ ಗ್ರಾಮಸ್ಥರು ಇದ್ದರು.
ಪ್ರಾತ: ಕಾಲದಲ್ಲಿ ಅರ್ಚಕ ಬಸವರಾಜ ಡೊಳ್ಳಿನ ಸಂಗಡಿಗರು ರಾಯಣ್ಣನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಕಲಾತಂಡಗಳ ಬೀರಲಿಂಗೇಶ್ವರ ಡೊಳ್ಳು ಕುಣಿತ, ಸಂಗೊಳ್ಳಿ ಮರಿಯಮ್ಮದೇವಿ ಕರಡಿ ಮಜಲು, ಶಕ್ತಿ ಗೊಂಬೆ ಕುಣಿತ, ಸಾರವಾಡ, ಗದ್ದಿಕರವಿನಕೊಪ್ಪದ ಡೊಳ್ಳು ಮಜಲು ಪಾಲ್ಗೊಂಡು ಉತ್ಸವಕ್ಕೆ ಮೆರಗು ತಂದಿತು.