ರಾಣೆಬೆನ್ನೂರ

ಟೀಕೆ ಮಾಡುವವರಿಗೆ ಭಗವಂತ ಒಳ್ಳೆಯದು ಮಾಡಲಿ: ಪೂಜಾರ

ಟೀಕೆ ಮಾಡುವವರಿಗೆ ಭಗವಂತ ಒಳ್ಳೆಯದು ಮಾಡಲಿ: ಪೂಜಾರ

ರಾಣೇಬೆನ್ನೂರ 19:  ಈ ಕ್ಷೇತ್ರದ ಅಭಿವೃದ್ಧಿ ಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದು, ತಾಲೂಕಿ ನಾದ್ಯಂತ ನನ್ನ ಕಾರ್ಯವೈಖರಿಯ ಬಗ್ಗೆ ಕ್ಷೇತ್ರದ ಜನತೆ ವಿಶ್ವಾಸವನ್ನು ಹೊಂದಿ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಮೂಲಕ ಪ್ರೋತ್ಸಾಹ ವನ್ನು ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನನ್ನ ಘನತೆಗೆ ತೆಜೋವಧೆ ತರುವ ಸಲುವಾಗಿ ಕೆಲ ಮುಖಂಡರು ಇಲ್ಲಸಲ್ಲದ ಟೀಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವುದು ವಿಷಾಧದ ಸಂಗತಿಯಾಗಿದೆಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. 

ಶುಕ್ರವಾರದಂದು ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ತಾಲೂಕಿನ ಜನತೆಯ ಹಿತದೃಷ್ಠಿಯಿಂದ ಹಲವಾರು ಯೋಜನೆಗಳನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿ ಯೂರ​‍್ಪನವರ ಬಳಿ ವಿವರಿಸಿ ನಮ್ಮ ಕ್ಷೇತ್ರಕ್ಕೆ ಬೇಕಾಗುವಂತಹ ಹಲವಾರು ಯೋಜನೆಗಳನ್ನು ಬಿಡುಗೊಡೆಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ವಿರೋಧ ಪಕ್ಷದವರೇ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚುಗೆ ವ್ಯಕ್ತಪಡಿಸಿ ಸುಮ್ಮನಿರುವಾಗ, ಸ್ವಪಕ್ಷ ದವರೇ ನನ್ನ ಬಗ್ಗೆ ಇಲ್ಲಸಲ್ಲದ ಟೀಕೆ ಟಿಪ್ಪಣೆಗಳನ್ನು ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ. ನನ್ನ ಬಗ್ಗೆ ಟೀಕೆ ಮಾಡುವವರಿಗೆ ಭಗವಂತ ಒಳ್ಳೆಯದು ಮಾಡಲಿ ಎಂದರು.  

ನನಗೆ ಆಶೀರ್ವಾದ ಮಾಡಿದ ಕ್ಷೇತ್ರದ ಜನತೆಯ ಋಣ ತೀರಿಸುವದೇ ನನ್ನ ಮೊದಲ ಆದ್ಯ ಕರ್ತವ್ಯ.ಹೀಗಾಗಿ ತಾ:ನ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ಇಲ್ಲಿ ನಾನು ನನ್ನದು ಎನ್ನುವುದು ನನಗೆ ಮುಖ್ಯವಲ್ಲ. ತಾಲೂಕಿನ ಅಭಿವೃದ್ಧಿ ಮುಖ್ಯ, ಕ್ಷೇತ್ರದ ಜನತೆ ಮುಖ್ಯ. ದುಡ್ಡು ಮಾಡಲು ನಾನು ರಾಜಕೀಯಕ್ಕೆ ಬಂದಿಲ್ಲ. ನಾನು ಒಬ್ಬ ಬಡ ಕುಟುಂಬದಿಂದ ಬಂದವನು. ಕಷ್ಟ ಸುಖ ಎಲ್ಲ ನನಗೆ ಗೊತ್ತು. ಹೀಗಿರುವಾಗ ನನಗೆ ದುಡ್ಡು ಮುಖ್ಯವಲ್ಲ. ಜನರ ಕೆಲಸ ಕಾರ್ಯಗಳು ಮುಖ್ಯ ಎಂದು ಸ್ಪಷ್ಟಪಡಿಸಿದರು. 


ಸುದ್ದಿ ಓದಿ