ಶಿಗ್ಗಾವ್

ಮಾತೊಶ್ರೀ ಗಂಗಮ್ಮಎಸ್ ಬೊಮ್ಮಾಯಿಟ್ರಸ್ಟ್‌ ಸಾರ್ವತ್ರಿಕ ಕಣ್ಣಾಗಿ ನಾಡಿನ ಕಣ್ಮನ ಸೆಳೆಯುತ್ತಿದೆ

ಮಾತೊಶ್ರೀ ಗಂಗಮ್ಮಎಸ್ ಬೊಮ್ಮಾಯಿಟ್ರಸ್ಟ್‌ ಸಾರ್ವತ್ರಿಕ ಕಣ್ಣಾಗಿ ನಾಡಿನ ಕಣ್ಮನ ಸೆಳೆಯುತ್ತಿದೆ

ಶಿಗ್ಗಾವಿ 20: ಸಾಮಾಜಿಕ ಸತ್ಕಾರ್ಯಗಳ ಮೂಲಕ ಮಾತೊಶ್ರೀ ಗಂಗಮ್ಮಎಸ್ ಬೊಮ್ಮಾಯಿ ಟ್ರಸ್ಟ್‌ ಸಾರ್ವತ್ರಿಕ ಕಣ್ಣಾಗಿ ನಾಡಿನಕಣ್ಮನ ಸೆಳೆಯುತ್ತಿದೆ. ಈ ಟ್ರಸ್ಟ್‌ಅಡಿಯಲ್ಲಿ ನಮ್ಮ ನಾಯಕರಂತಹ ಬಸವರಾಜ ಬೊಮ್ಮಾಯಿ ಅವರ ಅಭಿಮಾನಿ ಬಳಗವು ಬಡವರ ಬಾಳಿಗೆ ಬೆಳಕಾಗುವಂತೆ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಿರುವುದು ನಿಜಕ್ಕೂ ಮಹತ್ಕಾರ್ಯಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. 

ಪಟ್ಟಣದ ಹೊರವಲಯದ ಶಾಸಕರ ಸಭಾಭವನದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರ 64ನೇ ಜನ್ಮ ದಿನಾಚರಣೆ ಅಂಗವಾಗಿ ಗಂಗಮ್ಮ ಬೊಮ್ಮಾಯಿ ಟ್ರಸ್ಟ್‌, ಬೊಮ್ಮಾಯಿ ಅಭಿಮಾನಿಗಳ ಬಳಗ ಮತ್ತು ಹುಬ್ಬಳ್ಳಿ ಎಂ.ಎಂ.ಜೋಶಿ ನೇತ್ರ ವಿಜ್ಷಾನ ಸಂಸ್ಥೆಯ ಸಹಯೋಗದಲ್ಲಿ ನಡೆದಉಚಿತ ನೇತ್ರ ಸಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಜೀವನಕ್ಕೆ ಅತ್ಯಮೂಲ್ಯವಾದ ಕಣ್ಣು ಸಂರಕ್ಷಿತವಾಗಿರಬೇಕಾದರೆ ಕಾಲ ಕಾಲಕ್ಕೆ ತಪಾಸಣೆ ಹಾಗೂ ಕಾಳಜಿ ಬಹುಮುಖ್ಯವಾಗಿದೆ ಹಾಗೂ ಮನುಷ್ಯನಿಗೆಎಲ್ಲ ಸಂಪತ್ತು ಇದ್ದರೂ ಅದನ್ನು ಸವಿಯಬೇಕಾದರೆ ನಮ್ಮ ಆರೋಗ್ಯ ಉತ್ತಮವಾಗಿರಬೇಕು. ಕಾಲ ಕಾಲಕ್ಕೆ ನಮ್ಮಆರೋಗ್ಯವನ್ನು ತಪಾಷಣೆಗೊಳಪಡಿಸುವ ಮೂಲಕ ಉತ್ತಮವಾದ ಸದೃಢಆರೋಗ್ಯವನ್ನು ಹೊಂದಬಹುದು.ಬಸವರಾಜ ಬೊಮ್ಮಾಯಿ ಅವರ ಆಚರಣೆ ಅರ್ಥಪೂರ್ಣವಾಗಬೇಕಾದರೆ ಇಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ನೆರವೇರಿರುವುದರಿಂದ ಈ ನಾಡಿನ ಹಿರಿಮೆಯು ಮತ್ತಷ್ಟು ಉತ್ತಮವಾಗಲಿದೆ ಎಂದು ಹೇಳಿದರು. 

ಭಾಜಪ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಅತಿ ಹಿಂದುಳಿದ ತಾಲೂಕು ಎಂದು ಹಣೆಪಟ್ಟಿ ಕಟ್ಟಿಕೊಂಡ ಶಿಗ್ಗಾಂವಿ ಕ್ಷೆತ್ರ ಬಸವರಾಜ ಬೊಮ್ಮಾಯಿ ಈ ಕ್ಷೇತ್ರಕ್ಕೆ ಬಂದಮೇಲೆಅಭಿವೃದ್ಧಿಯ ಮಹಾಪೂರವೇ ಹರಿಯುತ್ತಿದೆ. ಅವರ ಹುಟ್ಟುಹಬ್ಬವನ್ನು ಮಾತೊಶ್ರೀ ಗಂಗಮ್ಮಎಸ್ ಬೊಮ್ಮಾಯಿಟ್ರಸ್ಟ್‌ ಹಾಗೂ ಹುಬ್ಬಳ್ಳಿ ಎಂ.ಎಂ.ಜೋಶಿ ನೇತ್ರ ವಿಜ್ಷಾನ ಸಂಸ್ಥೆಯ ಸಹಯೋಗದಲ್ಲಿ ಬೊಮ್ಮಾಯಿಅಭಿಮಾನಿ ಬಳಗದವರು ಸಮಾಜಿಕ ಸೇವೆಯೊಂದಿಗೆ ವಿಶಿಷ್ಟ, ಸಂಭ್ರಮದಿಂದ ಆಚರಿಸುವ ಮೂಲಕ ಹುಟ್ಟುಹಬ್ಬದ ಪ್ರತಿಕ ಎಂಬಂತಿದೆ ಎಂದು ಹೇಳಿದರು. 

ಹಿರೇಮಣ ಕಟ್ಟಿಯ ಮುರುಗೇಂದ್ರ ಮಠದ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪುರಸಭೆ ಸದಸ್ಯ ಶ್ರೀಕಾಂತ ಬುಳ್ಳಕನವರ, ರಾಜ್ಯಯುವ ಮೋರ್ಚಾ ಕಾರ್ಯಕಾರಿ ಸದಸ್ಯ ನರಹರಿಕಟ್ಟಿ, ಎಪಿಎಂಸಿ ಮಾಜಿಅಧ್ಯಕ್ಷತಿಪ್ಪಣ್ಣ ಸಾತಣ್ಣವರ ಮಾತನಾಡಿದರು. ಶಿಬಿರದಲ್ಲಿ ಒಟ್ಟು 250 ಕ್ಕೂ ಹೆಚ್ಚು ಜನಕಣ್ಣಿನ ತಪಾಸಣೆಗೆ ಒಳಪಟ್ಟರು.ಅದರಲ್ಲಿ 84 ಜನರನ್ನಕಣ್ಣಿನ ಪೊರೆಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದುಕಣ್ಣಿನ ವೈದ್ಯೆ ಅನುರಾಧಾ ಪಾಟೀಲ ಅವರು ತಿಳಿಸಿದರು. 

ಕಾರ್ಯಕ್ರಮದಲ್ಲಿ ಶಿವಪ್ರಸಾದ ಸುರಗಿಮಠ, ಹನುಮರಡ್ಡಿ ನಡುವಿನಮನಿ, ವೀರೇಶಅಜೂರ, ಆನಂದ ಸುಬೇದಾರ, ರಮೇಶ ಸಾತಣ್ಣನವರ, ಕರೆಪ್ಪಕಟ್ಟಿಮನಿ, ಕಾಶಿನಾಥ ಕಳ್ಳಿಮನಿ, ಪ್ರತೀಕ ಕೊಳೇಕರ, ಮಂಜುನಾಥ ಬ್ಯಾಹಟ್ಟಿ, ನವೀನ ಸಾಸನೂರ, ವಿಶ್ವನಾಥಗಾಣಿಗೇರ, ವಿನಯ ಮುಂಡಗೋಡ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಎಂ.ಎಂ.ಜೋಶಿ ನೇತ್ರ ವಿಜ್ಷಾನ ಸಂಸ್ಥೆಯ ವೈದ್ಯಕೀಯ ಸಿಬ್ಬಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ