ಕುಷ್ಟಗಿ

ಇಂದು ಮಾತೋಶ್ರೀ ಡಯಗ್ನೋಸ್ಟಿಕ್ ಲ್ಯಾಬೋರೇಟರಿ 20ನೇ ವರ್ಷಾಚರಣೆ ಕಾರ್ಯಕ್ರಮ

ಇಂದು ಮಾತೋಶ್ರೀ ಡಯಗ್ನೋಸ್ಟಿಕ್ ಲ್ಯಾಬೋರೇಟರಿ 20ನೇ ವರ್ಷಾಚರಣೆ ಕಾರ್ಯಕ್ರಮ

ಲೋಕದರ್ಶನ ವರದಿ 

ಕುಷ್ಟಗಿ 25: 2022ನೇ ಸಾಲಿನ ವೈದ್ಯರ ದಿನಾಚರಣೆ ಹಾಗೂ ಮಾತಾಶ್ರೀ ಡೈಗ್ನೋಸ್ಟಿಕ್ ಲ್ಯಾಬೋರೇಟರಿಯ 20ನೇ ವರ್ಷಾಚರಣೆ ಅಂಗವಾಗಿ ಮಾತಾಶ್ರೀ ರಕ್ತ ತಪಾಸಣೆ ಕೇಂದ್ರದ ವತಿಯಿಂದ ದಿ. 26ರಂದು ಮಂಗಳವಾರ ಸಂಜೆ 5:00 ಗಂಟೆಗೆ ಪಟ್ಟಣದ ಪಿಸಿಎಚ್ ಪ್ಯಾಲೆಸಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾತಾಶ್ರೀ ಡೈಗ್ನೋಸ್ಟಿಕ್ ಲ್ಯಾಬೋರೇಟರಿ ಮುಖ್ಯಸ್ಥ ಮಹೇಶ್ ಹಿರೇಮಠ ತಿಳಿಸಿದ್ದಾರೆ. 

ಹಿರಿಯ ಚಿಕ್ಕ ಮಕ್ಕಳ ತಜ್ಞ ಡಾ. ಎನ್.ಎಸ್ ಪಾಟೀಲ್, ಡಾ.ಬಿ.ಎಮ್ ಗೌಡರ, ಡಾ. ಎ.ಎಚ್ ಆನೆಹೊಸೂರ, ಡಾ.ವಿ.ಜಿ ದೇಸಾಯಿ, ಡಾ.ಎಸ್.ಜಿ ಜಾಗ್ಯೀರದಾರ, ತಾಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರ ಇವರಿಗೆ ಗೌರವಿಸಿ ಸನ್ಮಾನಿಸಲಾಗುತ್ತದೆ. 

ಸಂಗಮೇಶ್ವರ ಚಿಕ್ಕ ಮಕ್ಕಳ ಆರೋಗ್ಯ ಕೇಂದ್ರದ ಚಿಕ್ಕ ಮಕ್ಕಳ ತಜ್ಞ ಡಾ.ವೇದಾವತಿ ಪಾಟೀಲ್, ಬಾಗಲಕೋಟೆಯ ಹೃದಯರೋಗ ತಜ್ಞ ಡಾ. ಸಾಗರ  ದೇಸಾಯಿ, ಕೊಪ್ಪಳದ ಪಾತ್ಯೋಲಾಜಿಸ್ಟ್ ಡಾ. ವಿಜಯಶ್ರೀ ನೀರಾವರಿ ಸೇರಿದಂತೆ ಗಜೇಂದ್ರಗಡ, ಬಾಗಲಕೋಟೆ ಸೇರಿದಂತೆ ತಾಲೂಕಿನ ವೈದ್ಯರು, ಪ್ರಯೋಗಾಲಯ ತಜ್ಞರು  ಕಾರ್ಯಕ್ರಮದಲ್ಲಿ ಭಾಗವಹಿಸುವರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

ಸುದ್ದಿ ಓದಿ