ಮಾತಾ ಪಬ್ಲಿಕ್ ಶಾಲೆ: ಗಾಂಧಿ ಜಯಂತಿ
ಲೋಕದರ್ಶನ ವರದಿ
ರಾಣೇಬೆನ್ನೂರು 06: ಇಲ್ಲಿನ ಚೋಳಮರಡೇಶ್ವರ ನಗರದ ಮಾತಾ ಪಬ್ಲಿಕ್ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲಬ್ಬಹಾದ್ದೂರ ಶಾಸ್ತ್ರಿಜೀ ಅವರ ಜನ್ಮ ದಿನಾಚರಣೆ ಸಮಾರಂಭವು ಸರಳವಾಗಿ ಆಚರಿಸಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಕೆ ಎಫ್ ಆನ್ವೇರಿ, ಸದಸ್ಯ ಗಣೇಶ ಬಿ ಕ,ೆ ಮುಖ್ಯಸ್ಥ ಚನಬಸಪ್ಪ ಎಸ್, ಶಿಕ್ಷಕಿಯರಾದ ಶ್ಯಾಮಿಲಿ ಕಡೂರ, ಶಿಲ್ಪಾ ಬಿ ಕೆ, ಪುಷ್ಪಾ ಉಜ್ಜೇರ, ಸುಕನ್ಯ ಕೆ, ರೂಪಾ, ಕವಿತಾ ಮತ್ತಿತರರು ಉಪಸ್ಥಿತರಿದ್ದರು.