ರಾಣೆಬೆನ್ನೂರ

ಮಾತಾ ಪಬ್ಲಿಕ್ ಶಾಲೆ: ನೆಹರುಜಿ ಜನ್ಮ ದಿನೋತ್ಸವ

ಮಾತಾ ಪಬ್ಲಿಕ್ ಶಾಲೆ: ನೆಹರುಜಿ ಜನ್ಮ ದಿನೋತ್ಸವ

ಲೋಕದರ್ಶನ ವರದಿ 


ರಾಣೇಬೆನ್ನೂರು: ಇಲ್ಲಿನ ಚೋಳಮರಡೇಶ್ವರ ನಗರದ ಮಾತಾ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಪಂಡಿತ್ ಜವಾಹರಲಾಲ್ ನೆಹರೂಜಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು. ಶಾಲಾ ವಿಧ್ಯಾರ್ಥಿಗಳೇ ವೇದಿಕೆಯಲ್ಲಿ ಉಪಸ್ಥಿತರಿದ್ದು. ಮಕ್ಕಳ ದಿನಾಚರಣೆಯಲ್ಲಿ ಅವರೆ ಅತಿಥಿಗಳಾಗಿದ್ದು ವಿಶೇಷವಾಗಿತ್ತು. ವಿಧ್ಯಾರ್ಥಿ ವಿನಯ ಅಗಡಿ ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದರು.  

ಕುಶಾಲ್ ಸಿ ಎಸ್ ಅಧ್ಯಕ್ಷತೆ ವಹಿಸಿದ್ದರು. ಗೌರಮ್ಮ ದೇಸೂರ, ಅಂಕಿತಾ ಬಂಡಿ, ಹೇಮಂತ ಹಾವನೂರ, ಪಲ್ಲವಿ ಬಾಗಲವರ, ವಿಧ್ಯಾ ಗುತ್ತೇಕ್ಕನವರ ಮತ್ತಿತರರು ಅಥಿತಿಗಳಾಗಿದ್ದರು. ಸಂಸ್ಥೆಯ ಅಧ್ಯಕ್ಷ ಬಿ ಹೆಚ್ ಮಡ್ಲೂರ, ಉಪಾಧ್ಯಕ್ಷ ಕೆ ಎಪ್ ಆನ್ವೇರಿ,  ಮುಖ್ಯ ಶಿಕ್ಷಕ ಚನಬಸಪ್ಪ ಎಸ್ , ಸದಸ್ಯರಾದ ವೀರಣ್ಣ ಬುಡಪನಹಳ್ಳಿ. ಭರಮಪ್ಪ ಕೆ. ವಿಶ್ವನಾಥ ಕಮ್ಮಾರ. ಲತಾ ಸಿ ಎಸ್‌. ಶಿಕ್ಷಕಿಯರಾದ ಶಿಲ್ಪಾ ಬಿ ಕೆ, ಶ್ಯಾಮಿಲಿ ಕಡೂರ, ಸುಕನ್ಯ, ಪುಷ್ಪಾ. ಆಶಾ ಮೊದಲಾದವರಿದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಪಾಲಕರ ಗಮನ ಸೆಳೆದರು. 


ಸುದ್ದಿ ಓದಿ