ಬೈಲಹೊಂಗಲ

ಸಮಾಜದ ಚಿಂತನೆಯ ಜಾತ್ರೆಗಳನ್ನು ಆಯೋಜಿಸುತ್ತಿರುವ ಕಾರ್ಯ ಶ್ಲಾಘನೀಯ: ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ

ಸಮಾಜದ ಚಿಂತನೆಯ ಜಾತ್ರೆಗಳನ್ನು ಆಯೋಜಿಸುತ್ತಿರುವ ಕಾರ್ಯ ಶ್ಲಾಘನೀಯ: ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ

ಬೈಲಹೊಂಗಲ 16: ಸಮಾಜದ ಬಗ್ಗೆ ಚಿಂತನೆ ಮಾಡುವ ಮನೋಭಾವ ಇಟ್ಟುಕೊಂಡು ಜಾತ್ರೆಗಳನ್ನು ಆಯೋಜಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಅವರು  ಪಟ್ಟಣದ ಬಸವನಗರದಲ್ಲಿರುವ ಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ಮಾತಾ ಸಂಭ್ರಮ 2021 ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ನಾಡಿನಲ್ಲಿ ಇರುವಂತಹ ಕಲಾವಿದರನ್ನು ಅವರಿಗೆ ಗೌರವ ಸನ್ಮಾನವನ್ನು ಮಾಡುವದರ ಜೊತೆಗೆ ತಮ್ಮ ಕುಟುಂಬಕ್ಕೂ ಕೂಡ ಸಂಸ್ಕಾರ ಅರಿವನ್ನು ತಿಳಿಸುಕೊಳ್ಳುವಂತಹ ಇಂತಹ ಶಾಸ್ತ್ರಿಗಳು ಚಿಕ್ಕದಾದ ದೇವಾಲಯವನ್ನು  ನಿರ್ಮಾಣ ಮಾಡಿ ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ದುರ್ಗಾ ಪರಮೇಶ್ವರಿಯನ್ನು ಪ್ರತಿಷ್ಠಾಪನೆ ಮಾಡಿ  12 ವರ್ಷ ಗತಿಸಿದ ಸಂದರ್ಭದಲ್ಲಿ ತಾಯಿಯ ಆಶೀರ್ವಾದ ಎಲ್ಲರಿಗೂ ಸಿಗಲೆಂದು ಹಾರೈಸಿದರು.

ಕುಂದರಗಿ ಅಡವಿಸಿದ್ಧೇಶ್ವರಮಠದ ಅಮರಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಂಸ್ಕಾರ ಮೂಡಿಸುವುದು ಇಂದಿನ ದಿನಮಾನಗಳಲ್ಲಿ ಅತೀ ಅವಶ್ಯವಾಗಿದೆ. ಅಲ್ಪವಾಧಿಯಲ್ಲೇ  ಡಾ.ಮಹಾಂತಯ್ಯ ಶಾಸ್ತ್ರಿಗಳು ಈ ದೇವಸ್ಥಾನಕ್ಕೆ ಸಾವಿರಾರು ಭಕ್ತರನ್ನು ಆಕರ್ಷಣೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ದೇಶದ  ವಿವಿಧ ಮೂಲೆಗಳಿಂದ ಸಾಧು-ಸಂತರು, ಶರಣರು, ವಿದ್ವಾಂಸರನ್ನು  ಆಹ್ವಾನಿಸಿ ಭಕ್ತರಿಗೆ ಅಧ್ಯಾತ್ಮಿಕ, ಧಾರ್ಮಿಕ ಚಿಂತನೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುತ್ತಿರುವ ಕಾರ್ಯ ಅನನ್ಯವಾಗಿದೆ ಎಂದರು. 

ದೊಡವಾಡ ಹಿರೇಮಠದ ಜಡಿಸಿದ್ದೇಶ್ವರ ಸ್ವಾಮಿಜಿ, ಅರಳಿಕಟ್ಟಿ ಶಿವಮೂರ್ತಿ ದೇವರು, ಪಿ.ಜಿ.ಹುಣಶ್ಯಾಳದ ನಿಜಗುಣ ದೇವರು, ಕಸಾಪ ತಾಲೂಕಾ ಘಟಕದ ಮಾಜಿ ಅಧ್ಯಕ್ಷ ಈಶ್ವರ ಹೋಟಿ ಮಾತನಾಡಿದರು.

ವೇದಿಕೆ ಮೇಲೆ ಪುರಸಭೆ ಸದಸ್ಯರಾದ ವಿಜಯ ಬೊಳನ್ನವರ, ಶಿವಾನಂದ ಕೋಲಕಾರ, ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ, ಬಸವರಾಜ ಕಲಾದಗಿ, ಸೋಮನಾಥ ಸೊಪ್ಪಿಮಠ, ಡಾ.ಮಹಾಂತೇಶ ಕಳ್ಳಿಬಡ್ಡಿ, ಶಿವಾನಂದ ಬಡ್ಡಿಮನಿ, ಮುರಗೇಶ ಗುಂಡ್ಲೂರ, ಮಹಾಂತೇಶ ಮತ್ತಿಕೊಪ್ಪ, ಡಾ.ಶರಣಕುಮಾರ ಅಂಗಡಿ, ಡಾ.ಚಿದಂಬರ ಕುಲಕರ್ಣಿ, ಬಸಯ್ಯ ಮಠಪತಿ, ವಿಠ್ಠಲ ಕಡಕೋಳ ಮತ್ತಿತರರು ಇದ್ದರು.

ಸಮಾರಂಭದಲ್ಲಿ ನಮ್ಮನೆ ಯುವರಾಣಿ  ಧಾರಾವಾಹಿ ನಟಿ ಅಂಕಿತಾ, ಗಿಣಿರಾಮ ಧಾರಾವಾಹಿ ನಟಿ ಸರಿಗಮ ಖ್ಯಾತಿಯ ಗಾಯಕ ಓಂಕಾರ ಪತ್ತಾರ ಆಗಮಿಸಿ ಪ್ರೇಕ್ಷಕರನ್ನು ರಂಜಿಸಿದರು. ಇದೇ ಸಂದರ್ಭದಲ್ಲಿ ಗಣ್ಯಮಾನ್ಯರು ಇದ್ದರು. ಸಂತೋಷ ಹುಣಶೀಕಟ್ಟಿ ನಿರೂಪಿಸಿ, ವಂದಿಸಿದರು.


ಸುದ್ದಿ ಓದಿ