ಶಿಗ್ಗಾವ್

ಒಳ ಮೀಸಲಾತಿಯನ್ನು ಖಂಡಿಸಿ ಬಂಜಾರ ಸಮುದಾಯದಿಂದ ಬೃಹತ್ ಪ್ರತಿಭಟನೆ

ಒಳ ಮೀಸಲಾತಿಯನ್ನು ಖಂಡಿಸಿ ಬಂಜಾರ ಸಮುದಾಯದಿಂದ ಬೃಹತ್ ಪ್ರತಿಭಟನೆ

ಶಿಗ್ಗಾವಿ: ಸರಕಾರದ ಒಳ ಮೀಸಲಾತಿಯನ್ನು ಖಂಡಿಸಿ ಶಿಗ್ಗಾವಿ ಪಟ್ಟಣದಲ್ಲಿ ಬಂಜಾರ ಸಮುದಾಯದಿಂದ ಬೃಹತ್ ಪ್ರತಿಭಟನೆಯನ್ನು ಮಂಗಳವಾರ ಹಮ್ಮಿಕೊಳ್ಳಲಾಯಿತ್ತು.

ಚಿತ್ರದುರ್ಗದ ಸರ್ದಾರ್ ಸೇವಾಲಾಲ್ ಮಹಾರಾಜರ ನೇತೃತ್ವದಲ್ಲಿ ಬಂಜಾರ ಸಮುದಾಯ ಸೇರಿದಂತೆ ಮತ್ತಿರ ಸಮುದಾಯಗಳ ಮುಖಂಡರು ಪಟ್ಟಣದ ರಾಣಿ ಚೆನ್ನಮ್ಮ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಸಾಗಿ ತಹಶೀಲ್ದಾರ ಕಛೇರಿ ತಲುಪಿ ತಾಲೂಕು ದಂಡಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಸದಾಶಿವ ಆಯೋಗದ ವರದಿಯ ಆಧಾರದ ಮೇಲೆ ಘೊಷಿಸಿರುವ ಒಳಮೀಸಲಾತಿಯನ್ನು ರದ್ದು ಮಾಡಬೇಕು, ಅದನ್ನು ಕೇಂದ್ರ ಸರಕಾರಕ್ಕೆ ಪ್ರಸ್ಥಾಪ ಸಲ್ಲಿಸಬಾರದು ಎಂದು ಮನವಿ ಅರ​‍್ಿಸಲಾಯಿತು. 

ಮಾ. 25 ರಂದು ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ, ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳ ಮೀಸಲಾತಿ) ಹಂಚಿಕೆ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಪಾರಸು ಮಾಡಲು ನಿರ್ಧರಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಭಾರತದ ಸಂವಿಧಾನ ಮತ್ತು ಕಾನೂನನ್ನು ಗಾಳಿ ತೂರಲಾಗಿದೆ, ಈ ಅಸಂವಿಧಾನಿಕ ಮತ್ತು ಅವೈಜ್ಞಾನಿಕ ಪ್ರಕ್ರಿಯೆಯನ್ನು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ (ರಿ) ರಾಜ್ಯ ಸಮಿತಿ ವಿರೋಧಿಸುತ್ತದೆ. ಉಪ ಸಮಿತಿಯ ವರದಿಯಲ್ಲಿ ಪರಿಶಿಷ್ಟ ಜಾತಿಗಳ ಸಹೋದರ ಸಮುದಾಯಗಳ ಐಕ್ಯತೆ ಹಾಳು ಮಾಡಲು ಅನಧಿಕೃತ ವರದಿಯನ್ನು ನೀಡಲಾಗಿದೆ. ಚಾರಿತ್ರಿಕ ಆಧಾರದ ಮೇಲೆ ಸಾಂವಿಧಾನಿಕ ಸ್ಥಾನಮಾನ ಪಡೆದುಕೊಂಡಿರುವ ಈ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳನ್ನು, ಎಸ್‌.ಸಿ ಪಟ್ಟಿಯಿಂದ ಹೊರ ಹಾಕಿಸುವದು ಯಾರಿಂದಲೂ ಸಾಧ್ಯವಿಲ್ಲ ಎಂದು ಸರ್ದಾರ್ ಸೇವಾಲಾಲ್ ಮಹಾರಾಜರು ತಿಳಿಸಿದರು.  

ಮುಖಂಡರಾದ ದಾಮಲಪ್ಪ ಲಮಾಣಿ, ಹರ್ಜಪ್ಪ ಲಮಾಣಿ, ಅಣ್ಣಪ್ಪ ಲಮಾಣಿ, ಸುದೀರ ಲಮಾಣಿ ಸೇರಿದಂತೆ ಬಂಜಾರ ಸಮುದಾಯದ ಜಿಲ್ಲಾ ಮಟ್ಟದ, ತಾಲೂಕಿನ ಮುಖಂಡರು ಮತ್ತು ಸಾವಿರಾರು ಸಂಖ್ಯೆಯಲ್ಲಿ ಸಮುದಾಯ ಬಾಂಧವರು ಉಪಸ್ಥಿತರಿದ್ದರು. ಮೀಸಲಾತಿಯಿಂದ ನೊಂದು ನೇಣಿಗೆ ಶರಣಾಗಲು ಯತ್ನಿಸಿದ ಬಂಜಾರ ಪೀಠದ ಸ್ವಾಮೀಜಿ 

ಮೀಸಲಾತಿ ಹೋರಾಟದಲ್ಲಿ ಬಂಜಾರ ಗುರು ಪೀಠದ ಶ್ರೀಗಳು ಮೀಸಲಾತಿಯಿಂದ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಲು ಮುಂದಾದ ಘಟನೆ ಸಿಎಂ ಸ್ವಕ್ಷೇತ್ರವಾದ ಶಿಗ್ಗಾವಿ ಪಟ್ಟಣದ ಆಡಳಿತ ಭವನದ ಅಂಬೇಡ್ಕರ್ ಮೂರ್ತಿ ಎದುರು ಮಂಗಳವಾರ ಪ್ರತಿಭಟನೆ ಪೂರ್ವದಲ್ಲಿ ಜರಗಿತು. 

ಇತ್ತೀಚೆಗೆ ಬಿಜೆಪಿ ಸರ್ಕಾರ ನೀಡಿದ ಮೀಸಲಾತಿಯನ್ನು ವಿರೋಧಿಸಿ ಶಿಗ್ಗಾವಿ ಪಟ್ಟಣದಲ್ಲಿ ಬಂಜಾರ ಸಮಾಜದಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. 

ಆಡಳಿತ ಭವನದ ಎದುರಿಗಿರುವ ಅಂಬೇಡ್ಕರ್ ಮೂರ್ತಿಗೆ ಮಾಲಾರೆ​‍್ಣ ಮತ್ತು ಚೆನ್ನಮ್ಮ ವೃತ್ತದಲ್ಲಿರುವ ಚೆನ್ನಮ್ಮ ಮೂರ್ತಿಗೆ ಮಾಲಾರೆ​‍್ಣ ಮಾಡಿ ಪ್ರತಿಭಟನೆ ಆರಂಭಿಸುವ ಕಾರ್ಯಕ್ರಮ ನಿಗದಿಯಾಗಿತ್ತು, ಅದರಂತೆ ಪಟ್ಟಣದ ಮಧ್ಯ ಭಾಗದಲ್ಲಿರುವ ಆಡಳಿತ ಭವನದ ಎದುರು ಬಂಜಾರ ಸಮುದಾಯದ ಮತ್ತು ಇತರ ಸಮುದಾಯಗಳ ಮುಖಂಡರೊಂದಿಗೆ ಅಂಬೇಡ್ಕರ್ ಮೂರ್ತಿಗೆ ಮಾಲಾರೆ​‍್ಣ ಮಾಡಲು ಆಗಮಿಸಿದ ಗುಂಡೂರು ಹುಬ್ಬಳ್ಳಿಯ ಬಂಜಾರ ಗುರು ತಿಪ್ಪೇಶ್ ಮಹಾಸ್ವಾಮಿಗಳು ಮಾಲಾರೆ​‍್ಣ ಮಾಡಿ ನಂತರ ಪಕ್ಕದಲ್ಲಿಯ ಕಬ್ಬಿಣದ ಕಂಬಿಗೆ ತಮ್ಮ ಕೊರಳಿನಲ್ಲಿರುವ ಶಾಲಿನಿಂದ ನೇಣು ಬಿಗಿದುಕೊಂಡು ನಂತರ ಮೇಲಿನಿಂದ ಜಿಗಿದರು. ಪ್ರತಿಭಟನಾಕಾರರು ಹಾಗೂ ಪೊಲೀಸರು ಮೇಲೆ ಹತ್ತಿ ಶ್ರೀಗಳನ್ನು ರಕ್ಷಿಸಿ ಸುರಕ್ಷಿತವಾಗಿ ಕೆಳಗೆ ತಂದರು. ಉಸಿರಾಟಕ್ಕೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಪೊಲೀಸರು ಶ್ರೀಗಳನ್ನು ಚಿಕಿತ್ಸೆಗೆ ಕರೆದೊಯ್ದರು. 


ಸುದ್ದಿ ಓದಿ