ಬಳ್ಳಾರಿ

ಎಸ್ ಡಿ ಪಿ ಐ ನಿಂದ ಬೃಹತ್ ಮೆರವಣಿಗೆ ಹಾಗೂ ಪ್ರತಿಭಟನೆ,

ಎಸ್ ಡಿ ಪಿ ಐ ನಿಂದ ಬೃಹತ್  ಮೆರವಣಿಗೆ ಹಾಗೂ ಪ್ರತಿಭಟನೆ,
ಬಳ್ಳಾರಿ 08: SDPI ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ  ಹರ್ಯಾಣದಲ್ಲಿ ನಡೆಸುತ್ತಿರುವ ಮುಸ್ಲಿಮರ ಮೇಲೆ ಹಿಂಸಾಚಾರ ಮತ್ತು ಮಣಿಪುರದಲ್ಲಿ ಕ್ರೈಸ್ತರ ಮೇಲೆ ನಡೆಸುತ್ತಿರುವ ಹಿಂಸಾಚಾರ ಮತ್ತು ಸಂಘಪರಿವಾರದ ದುಷ್ಕೃತ್ಯಗಳನ್ನು ಖಂಡಿಸಿ ಬಳ್ಳಾರಿಯಲ್ಲಿ ಮೋತಿ ವೃತ್ತದಿಂದ ಜಿಲ್ಲಾ ಅಧಿಕಾರಿ ಕಚೇರಿಯ ವರೆಗೆ ಪ್ರತಿಭಟನೆ ಹಾಗೂ  ಮೆರವಣಿಗೆ ನಡೆಸಲಾಯಿತು.

ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಹಾಗೂ ಬಿಜಾಪುರದಲ್ಲಿ ದಲಿತ ಹೆಣ್ಣುಮಕ್ಕಳ ಮೇಲೆ ನಡೆದ ಅತ್ಯಾಚಾರದ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ ಎಸ್.ಡಿ.ಪಿ.ಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. 

ಧರ್ಮ ಮತ್ತು ಜಾತಿಯ ಹೆಸರಲ್ಲಿ ಪರಸ್ಪರ ಕಚ್ಚಾಡದೆ ಸೌಹಾರ್ದ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ದೇಶ ಬಾಂಧವರಲ್ಲಿ ವಿನಂತಿಸಿದರು. ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಮಾಜ ಬಾಹಿರ ಕೃತ್ಯ ಮಾಡುವವರು ಮತ್ತು ಜನರ ಮಧ್ಯೆ ದ್ವೇಷ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಪ್ರತಿಭಟನೆಯಲ್ಲಿ ಎಸ್ ಡಿ ಪಿ ಐ ಪಕ್ಷದ ರಾಜ್ಯ ನಾಯಕರಾದ ಝಾಕಿರ್ ಚಿತ್ರದುರ್ಗ,  ಬಳ್ಳಾರಿ  ಜಿಲ್ಲಾಅಧ್ಯಕ್ಷ ಹೈದರ್ ಅಲಿ, ಉಪಾಧ್ಯಕ್ಷ ಜೆ.ಇನಾಯತ್, ಪ್ರಧಾನ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್    ಜಿಲ್ಲಾ ಮುಖಂಡರುಗಳಾದ ಝಕರಿಯ, ಶಕೀಲ್, ಸಲೀಂ, ಮತ್ತು ನೂರಾರು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸುದ್ದಿ ಓದಿ