ಬೃಹತ್ ಉದ್ಯೋಗ ಮೇಳ: 755 ಅಭ್ಯರ್ಥಿಗಳ ಆಯ್ಕೆ
ಲೋಕದರ್ಶನ ವರದಿ
ಬೈಲಹೊಂಗಲ 31: ಪಟ್ಟಣದ ಕೆಎಲ್ಇ ಶಿಕ್ಷಣ ಸಂಸ್ಥೆಯ ಪಾಲಿಟೆಕ್ನಿಕ (ಡಿಪ್ಲೋಮಾ) ಕಾಲೇಜಿನಲ್ಲಿ ಶನಿವಾರ ಕೆಎಲ್ಇ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ 75ನೇ ಹುಟ್ಟುಹಬ್ಬದ ನಿಮಿತ್ಯ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಪ್ರತಿಷ್ಟಿತ 52ಕ್ಕೂ ಹೆಚ್ಚು ಕಂಪನಿಗಳಿಂದ ಎಸ್ಎಸ್ಎಲ್ಸಿ ಐಟಿಐ, ಪಿಯುಸಿ, ಡಿಪ್ಲೋಮಾ, ಬಿಇ ಮತ್ತು ವಿವಿಧ ಪದವಿಧರರ ಒಟ್ಟು 1253 ಅಭ್ಯರ್ಥಿಗಳಿಗೆ ನೇರ ಸಂದರ್ಶಿಸಿ 755 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು.
ಕೆಎಲ್ಇ ಸಂಸ್ಥೆಯ ನಿರ್ದೆಶಕ ಎಸ್. ಸಿ. ಮೆಟಗುಡ್ಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀನವದ ನಂತರ ಉದ್ಯೋಗ ಪಡೆಯಲು ಪರದಾಡುವ ಉದ್ಯೋಗಾಂಕ್ಷೀಗಳಿಗೆ ಪ್ರಯೋಜನವಾದ ಕೆಎಲ್ಇ ಸಂಸ್ಥೆಯ ಉದ್ಯೋಗ ಮೇಳ ಯಶಸ್ವಿಯಾಗಿದ್ದು, ವಿದ್ಯಾರ್ಥಿಗಳು ಉದ್ಯೋಗದಲ್ಲಿ ಪ್ರಾವಿಣ್ಯತೆಯನ್ನು ಪಡೆದು ತದನಂತದ ಮುಂದಿನ ದಿನಮಾನಗಳಲ್ಲಿ ತಮ್ಮದೇ ಸ್ವಂತ ಉದ್ಯೋಗದೊಂದಿಗೆ ಬದುಕು ಕಟ್ಟಿಕೊಳ್ಳಬೇಕೆಂದರು.
ಕೆಎಲ್ಇ ಸಂಸ್ಥೆಯ ನಿರ್ದೆಶಕ ಡಾ. ವಿ. ಎಸ್. ಸಾಧುನವರ ಮಾತನಾಡಿ, ಬೆಳಗಾವಿ ಜಿಲ್ಲೆಯೂ ವ್ಯವಸಾಯ ಪ್ರಧಾನವಾದ ಜಿಲ್ಲೆಯಾಗಿದೆ. ಇಲ್ಲಿನ ಯುವಕರು ವಿದ್ಯಾಭ್ಯಾಸ ಮುಗಿಸಿದ ಮೇಲೆ ಹೆಚ್ಚಾಗಿ ತಾವಿದ್ದಲ್ಲಿಯೇ ದುಡಿಮೇಯ ಮಾರ್ಗ ಕಂಡುಕೊಂಡು ಹುಟ್ಟು ಬೆಳೆದ ಉರಿನಲ್ಲೇ ಇರಲು ಬಯಸುವ ಬದಲು ಉದ್ಯೋಗಾವಕಾಶಗಳಿರುವಲ್ಲಿಗೆ ಹೋಗಿ ಆದಾಯ ಗಳಿಸುವ ಜೊತೆಗೆ ತಿಳಿವಳಿಕೆ ಹೆಚ್ಚಿಸಿಕೊಳ್ಳಬೇಕು ಎಂದರು.
ಕೆ.ಎಲ್ಇ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಬಿ.ಎಸ್.ತಟವಟಿ ಮಾತನಾಡಿ, ಕೋವಿಡ್-19 ಕಾರಣದಿಂದ ರಾಷ್ಟ್ರದಲ್ಲಿ ಹಾಗೂ ರಾಜ್ಯದಲ್ಲಿ ಅನೇಕ ಯುವಕರು ಉದ್ಯೋಗವನ್ನು ಕಳೆದುಕೊಂಡರು, ಆದರೆ ಇತ್ತಿಚೆಗೆ ಸಾಕಷ್ಟು ಉದ್ಯೋಗಗಳು ಲಭ್ಯವಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ಡಾ. ಪ್ರಸಾದ ರಾಂಪುರೆ ಪ್ರಾಚಾರ್ಯರು ಕೆಎಲ್ಇ ಇಂಜನೀಯರಿಂಗ ಕಾಲೇಜು ಚಿಕ್ಕೊಡಿ ಇವರು ಭಾಗವಹಿಸಿ ಮಾತನಾಡಿ ನಮ್ಮ ಹೆಮ್ಮೆಯ ಕೆಎಲ್ಇ ಸಂಸ್ಥೆಯೂ ಪ್ರತಿಷ್ಟಿತ ಕಂಪನಿಗಳಿಂದ ಹಲವಾರು ಕಾಲೇಜುಗಳಲ್ಲಿ ಇಂತಹ ಉದ್ಯೋಗ ಮೇಳವನ್ನು ಹಮ್ಮಿಕೊಂಡು ತಾಂತ್ರೀಕ ಮತ್ತು ತಾಂತ್ರಿಕೇತರ ಅಭ್ಯರ್ಥಿಗಳ ಉದ್ಯೋಗ ಭವಿಷ್ಯ ರೂಪಿಸುವಲ್ಲಿ ಕಾರ್ಯಗತವಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಪ್ರೋ. ಶ್ರೀಧರ ನಿರಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತರ ಕರ್ನಾಟಕದ ಹೃದಯ ಭಾಗದಲ್ಲಿ ನೆಲೆಸಿರುವ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಪ್ರತಿಷ್ಟಿತ 52 ಕಂಪನಿಗಳು ನಮ್ಮ ಸಂಸ್ಥೆಯಲ್ಲಿ ಆಯೋಜಿಸಿರುವ ಬೃಹತ್ ಉದ್ಯೋಗ ಮೆಳದಲ್ಲಿ ಭಾಗವಹಿಸಿರುವದು ನಮಗೆ ಸಂತಸವನ್ನುಂಟು ಮಾಡಿದೆ ಎಂದರು.
ಉದ್ಯೋಗ ಮೇಳದಲ್ಲಿ ಐಟಿ ಬಿಟಿ, ಆಟೋಮೋಬೈಲ, ಮೆಕ್ಯಾನಿಕಲ್, ಕಟ್ಟಡ ನಿರ್ಮಾಣ, ಮಾರ್ಕೆಟಿಂಗ, ಸೆಲ್ಸ ಆಂಡ್ ರೀಟೇಲ್, ಟೆಲಿಕಾಂ, ಬಿಪಿಒ, ಟೆಕ್ಸಟೈಲ್ಸ, ಬ್ಯಾಂಕಿಂಗ, ಪೈನಾನ್ಸ, ಇನ್ಸುರೆನ್ಸ, ಹಾಸಪ್ಟೀಲ್, ಫರ್ಮಾಕ್ಯುಟಿಕಲ್, ಹೆಲ್ತಕೇರ, ಮ್ಯಾನುಪ್ಯಾಕ್ಚರಿಂಗ, ಟ್ರಾನ್ಸಪೋರ್ಟ, ಸರ್ವಿಸ್, ಆಹಾರ ಸಂಸ್ಕರಣೆ, ಹೋಟೇಲ ನಿರ್ವಹನೆ, ಗಾರ್ಮೆಂಟ್ಸ, ಸೆಕ್ಯುರಿಟಿ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳ ಆಯ್ಕೆ ಪ್ರಕ್ರೀಯೇ ನಡೆಯಿತು. ಸಂದರ್ಶನದಲ್ಲಿ ವಿವಿಧ ಸ್ಥಳಗಳಿಂದ ಸುಮಾರು 1200ಕ್ಕು ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು.
ಸತೀಶ ಪಾಟೀಲ, ಎಸ್.ಎಸ್.ಶರಣಪ್ಪನವರ, ಆರ್. ಎಮ್. ತೋಟಗಿ, ಎಸ್.ಎಮ್.ಕಳಸಣ್ಣವರ, ಎಲ್.ಎಸ್.ಶಿರಹಟ್ಟಿ, ಎ.ಎಮ್.ಪಾಟೀಲ, ಆರ್.ಪಿ.ದೊಡ್ಡಹುಬ್ಬಳ್ಳಿ, ಆರ್. ಎನ್. ವಾರಿ, ಎಮ್. ಎ. ಸವದತ್ತಿಮಠ, ಎಚ್. ಆಯ್. ಸಂಕಣ್ಣವರ, ಭರತ ಹುಣಶಿಕಟ್ಟಿ ಹಾಗೂ ಐ.ಟಿ.ಐ ಮತ್ತು ಡಿಪ್ಲೊಮಾ ಕಾಲೇಜಿನ ಸಿಬ್ಬಂದಿ ವಿವಿದ ಕಂಪನಿಗಳ ಅಧಿಕಾರಿಗಳು ಇದ್ದರು.
ರಕ್ಷಿತಾ ಹೂಗಾರ, ನೀಶಾ ಕುಬಸದ ನಿರೂಪಿಸಿದರು, ಚೇತನ ಹಿರೇಮೆತ್ರಿ ವಂದಿಸಿದರು.