ಇಂಡಿ

ಮರುಳಸಿದ್ದೇಶ್ವರ ಮಂಗಲ ಕಾರ್ಯಾಲಯ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ

ಮರುಳಸಿದ್ದೇಶ್ವರ ಮಂಗಲ ಕಾರ್ಯಾಲಯ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ

ಮರುಳಸಿದ್ದೇಶ್ವರ ಮಂಗಲ ಕಾರ್ಯಾಲಯ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ 

ಇಂಡಿ 22 : ಆರೋಗ್ಯ ಇಲಾಖೆ ವಿಜಯಪೂರ ಮತ್ತು ಸಮುದಾಯ ಆರೋಗ್ಯ ಕೇಂದ್ರ ತಡವಲಗಾ ಗ್ರಾಮ ಪಂಚಾಯಿತಿ ತಡವಲಗಾ ಹಾಗೂ ಶ್ರೀ ಮರುಳಸಿದ್ದೇಶ್ವರ ಜಾತ್ರೆ ಕಮೀಟಿ ತಡವಲಗಾ ಇವರ ಸಹಯೋಗದಲ್ಲಿ ಇದೆ ದಿನಾಂಕ 24-11-2024 ರಂದು ರವಿವಾರ ಬೆಳಿಗ್ಗೆ ಹತ್ತು ಗಂಟೆಗೆ ಜೋಡಗುಡಿ ಶ್ರೀ ಮರುಳಸಿದ್ದೇಶ್ವರ ಮಂಗಲ ಕಾರ್ಯಾಲಯ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಡವಲಗಾ ಸಮುದಾಯ ಆರೋಗ್ಯ ಕೇಂದ್ರದ ಆಡಳಿವೈದ್ಯಾಧಿಕಾರಿ ಕೆ ಎಸ್ ಜಾಧವ ತಿಳಿಸಿದ್ದಾರೆ.ಅವರು ಇಂದು ತಡವಲಗಾ ಗ್ರಾಮ ಪಂಚಾಯತಿ ಆವರಣದಲ್ಲಿ ಮಾತನಾಡಿದ ಅವರು ಇಂಡಿ ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡಗುಡಿ ಶ್ರೀ ಮರುಳಸಿದ್ದೇಶ್ವರ ದೇವರ ಕಾರ್ತಿಕ ಮಾಸದ ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಅದರಂತ ಈ ಬಾರಿ ಕೂಡಾ ಜಾತ್ರೆಯ ನಿಮಿತ್ತವಾಗಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.ರಕ್ತದಾನ ಮಾಡಲು ಮುಖ್ಯ ಕಾರಣ ಜೀವವನ್ನು ಉಳಿಸುವುದು, ಆದ್ದರಿಂದ ನೀವು ರಕ್ತದಾನ ಮಾಡಲು ಎರಡು ಬಾರಿ ಯೋಚಿಸಬಾರದು. ಇದು ಮಾನವೀಯತೆಯ ಸಂಕೇತವಾಗಿದೆ. ಇದು ರಕ್ತದಾನಿಗಳ ಜಾತಿ, ಮತ, ಧರ್ಮವನ್ನು ನೋಡುವುದಿಲ್ಲ. ಇದಲ್ಲದೆ, ನಮ್ಮ ದೇಹದಲ್ಲಿನ ಅಂಗಗಳು ವಿಭಿನ್ನ ಕಾರ್ಯಗಳನ್ನು ನಿರ್ವಹಿಸುತ್ತವೆ ಮತ್ತು ಈ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಶಕ್ತಿ ಮತ್ತು ಆಮ್ಲಜನಕದ ಅಗತ್ಯವಿದೆ. ಆದ್ದರಿಂದ 18 ವರ್ಷ ಮೆಲಪಟ್ಟವರು ರಕ್ತದಾನ ಮಾಡಬಹುದು.ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಿಂದ ಬಂದ ಯುವಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಈ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಇಂಡಿ ಆರೋಗ್ಯ ಇಲಾಖೆ ವಾಯ್ ಎಂ ಪೂಜಾರಿ, ರಘು ಚವಾಣ್, ಎಂ ಎಚ್ ಬಗಲಿ, ಅರುಣ್ ಕುಂಬಾರ,ರಾಮಗೊಂಡ ಭಜಂತ್ರಿ ತಡವಲಗಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀಮಂತ ನಾಮದಾರ,ಗ್ರಾಂ ಪಂ ಸದಸ್ಯರಾದ ಧರೇಪ ನಾವಿ,ಮಾದೇವ ಹಳ್ಳಿ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಜ್ಯೋತಿ ಇಂಡಿ, ಶೈಲಾ ರೋಡಗಿ ಸುನಂದಾ ನಾದ, ಸಾವಿತ್ರಿ ಗೋಣಿ,ಚನ್ನಮ ತಾರಾಪೂರ, ಸುಜಾತಾ ಕಟ್ಟಿ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ