ವಿಜಯಪುರ

ಎಂ.ಬಿ. ಪಾಟೀಲರ ಜನ್ಮದಿನದ ಅಂಗವಾಗಿ ಅನ್ನಸಂತರೆ​‍್ಣ

ಎಂ.ಬಿ. ಪಾಟೀಲರ ಜನ್ಮದಿನದ ಅಂಗವಾಗಿ ಅನ್ನಸಂತರೆ​‍್ಣ


ವಿಜಯಪುರ, 07: ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿಜಯಪುರ ನಗರದ ಖ್ಯಾತ ಸೂಫಿ ಸಂತ ಅಬ್ದುಲ್ ರಜಾಕ್ ದರ್ಗಾದಲ್ಲಿ ನೂರಾರು ಜನರಿಗೆ ಅನ್ನಸಂತರೆ​‍್ಣ ಕಾರ್ಯಕ್ರಮ ಆಯೋಜಿಸಲಾಗಿತ್ತು.  

ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಕೀಲ್ ಅಹ್ಮದ್ ಬಾಗಮಾರೆ ಹಾಗೂ ಅವರ ತಂಡದ ವತಿಯಿಂದ ಈ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  

ಎಂ.ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಸತತ ಎರಡನೇ ವರ್ಷವೂ ಅನ್ನದಾನ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷವಾಗಿದೆ.  

ಈ ಸಂದರ್ಭದಲ್ಲಿ ಮಾತನಾಡಿದ ಶಕೀಲ್ ಅಹ್ಮದ್ ಬಾಗಮಾರೆ, “ಎಂ.ಬಿ. ಪಾಟೀಲ ಅವರು ವಿಜಯಪುರ ಜಿಲ್ಲೆ ಸೇರಿದಂತೆ ಕರ್ನಾಟಕದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಅವರ ಜನ್ಮದಿನವನ್ನು ಕೇವಲ ಶುಭಾಶಯಗಳಿಗೆ ಸೀಮಿತಗೊಳಿಸದೆ, ಜನಸೇವೆ ಹಾಗೂ ಮಾನವೀಯ ಸೇವೆಯ ಮೂಲಕ ಆಚರಿಸುವುದು ನಮ್ಮ ಉದ್ದೇಶ” ಎಂದು ಹೇಳಿದರು.  

“ಅಗತ್ಯವಿರುವವರಿಗೆ ಅನ್ನ ನೀಡುವುದು ಹಾಗೂ ಅವರ ಮುಖದಲ್ಲಿ ಸಂತಸದ ಭಾವ ಮೂಡಿಸುವುದೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉತ್ತಮ ಮಾರ್ಗ” ಎಂದು ಅವರು ತಿಳಿಸಿದರು.  ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಶಕೀಲ್ ಅಹ್ಮದ್ ಬಾಗಮಾರೆ ಅವರ ತಂಡದ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ