ಹೊಸಪೇಟೆ

ಖಾಸಗಿ ಟೆಲಿಕಾಂ ಕಂಪನಿಗಳ ಕ್ರಮ ವಿರೋಧಿಸಿ ಸಾಮೂಹಿಕ ಇ-ಮೇಲ್ ಚಳುವಳಿ

ಖಾಸಗಿ ಟೆಲಿಕಾಂ ಕಂಪನಿಗಳ ಕ್ರಮ ವಿರೋಧಿಸಿ ಸಾಮೂಹಿಕ ಇ-ಮೇಲ್ ಚಳುವಳಿ

ಲೋಕದರ್ಶನ ವರದಿ 

ಹೊಸಪೇಟೆ 31: ವಾಲ್ಮೀಕಿ ಐಟಿಐ, ವಿದ್ಯಾರಣ್ಯ ಐಟಿಐ ಕಾಲೇಜುಗಳಲ್ಲಿ ಎಐಡಿವೈಓ ಹಾಗೂ ಎಐಡಿಎಸ್‌ಓ ಸಂಘಟನೆಗಳಿಂದ ಮೊಬೈಲ್ ರೀಚಾರ್ಜ್‌ ದರ ಹಾಗೂ ಡಾಟಾ ಟ್ಯಾರಿಫ್ ಹೆಚ್ಚಳ ಮಾಡಿರುವ ಖಾಸಗಿ ಟೆಲಿಕಾಂ ಕಂಪನಿಗಳ ಕ್ರಮವನ್ನು ವಿರೋಧಿಸಿ ಹಾಗೂ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ವು ಈ ದರ ಏರಿಕೆ ಇಳಿಕೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಸಾಮೂಹಿಕ ಇ-ಮೇಲ್ ಚಳುವಳಿಯನ್ನು ಹಮ್ಮಿಕೊಳ್ಳಲಾಗಿತ್ತು.  


ಎಐಡಿವೈಓನ ಜಿಲ್ಲಾ ಅಧ್ಯಕ್ಷರಾದ ಪ್ರಶಾಂತ್ ಅವರು ಯುವಕರನ್ನು ಉದ್ದೇಶಿಸಿ ಮಾತನಾಡುತ್ತಾ “ ಲಾಕ್‌ಡೌನ್, ಕರ್ಫ್ಯೂಗಳಿಂದಾಗಿ ಜನರು ಕೆಲಸವಿಲ್ಲದೇ ಆದಾಯ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇಂತಹ ಆರ್ಥಿಕ ಕಷ್ಟಕಾಲದಲ್ಲಿ ಮೊಬೈಲ್‌ಗಳ ರಿಚಾರ್ಜ್‌ ದರಗಳನ್ನು ಒಂದೇ ವರ್ಷದಲ್ಲಿ 80ರಿಂದ 100ಅದಷ್ಟು ಹೆಚ್ಚಿಸಲಾಗಿದೆ. ಜಿಯೋ, ವೊಡಾಫೋನ್ ಐಡಿಯಾ, ಏರ್‌ಟೆಲ್ ಖಾಸಗಿ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್‌ ದರಗಳನ್ನು ತೀವ್ರವಾಗಿ ಹೆಚ್ಚಿಸಿದ್ದು ಜನಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮೋಬೈಲ್ ಬಳಕೆದಾರ ಜನಗಳ ಹಿತ ಕಾಪಾಡಬೇಕಿದ್ದ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಈ ಟ್ಯಾರಿಪ್ ಹೆಚ್ಚಳಕ್ಕೆ ತಡೆಯೊಡ್ಡದೇ ಮೌನ ಸಮ್ಮತಿ ನೀಡುತ್ತಿದೆ. ಜನವರಿ 30, 31 ಹಾಗೂ ಪೆಬ್ರುವರಿ 01ರ ಈ ಮೂರು ದಿನಗಳ ಕಾಲ ಟ್ರಾಯ್ ಹಾಗೂ ದೂರ ಸಂಪರ್ಕ ಇಲಾಖೆ ಸಚಿವರಿಗೆ ಸಾಮೂಹಿಕ ಇ-ಮೇಲ್ ಕಳಿಸುವ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 


ಶೇಖರ್ ಬಾಬು ಎಐಡಿವೈಓ ಸಂಘಟಕರು ಮಾತನಾಡುತ್ತಾ “ಎಲ್ಲ ವಿದ್ಯಾರ್ಥಿ-ಯುವಜನರು ಹಾಗೂ ನಾಗರಿಕರು ಈ ಚಳವಳಿಯಲ್ಲಿ ಪಾಲ್ಗೊಂಡು ತಮ್ಮ ಪ್ರತಿರೋಧವನ್ನು ದಾಖಲಿಸಬೇಕೆಂದು ಎಐಡಿವೈಓ ಮತ್ತು ಎಐಡಿಎಸ್‌ಓ ಸಂಘಟನೆಗಳ ಪರವಾಗಿ ಮನವಿ ಮಾಡಿದರು”. 

ಹೊಸಪೇಟೆಯ ವಾಲ್ಮೀಕಿ ಐಟಿಐ, ವಿದ್ಯಾರಣ್ಯ ಐಟಿಐ ಕಾಲೇಜುಗಳಲ್ಲಿ ಮೊಬೈಲ್ ರೀಚಾರ್ಜ್‌ ದರ ಹಾಗೂ ಡಾಟಾ ಟ್ಯಾರಿಫ್ ಹೆಚ್ಚಳ ಮಾಡಿರುವ ಖಾಸಗಿ ಟೆಲಿಕಾಂ ಕಂಪನಿಗಳ ಕ್ರಮವನ್ನು ವಿರೋಧಿಸಿ ಹಾಗೂ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ವು ಈ ದರ ಏರಿಕೆ ಇಳಿಕೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ನೂರಾರು ಯುವಕರು  ಸಾಮೂಹಿಕ ಇ-ಮೇಲ್ ಮಾಡುವ ಮೂಲಕ ಈಮೇಲ್‌-ಚಳುವಳಿಯಲ್ಲಿ ಭಾಗವಹಿಸಿದರು. 


ಸುದ್ದಿ ಓದಿ