ಹೊಸಪೇಟೆ

ಡಾನ್ ಬೋಸ್ಕೊ ಸಂಸ್ಥೆಯಿಂದ ಅನೇಕ ಸಾಮಾಜಿಕ ಚಟುವಟಕೆ

ಡಾನ್ ಬೋಸ್ಕೊ ಸಂಸ್ಥೆಯಿಂದ ಅನೇಕ ಸಾಮಾಜಿಕ ಚಟುವಟಕೆ

ಹೊಸಪೇಟೆ 19:  ಹೊಸಪೇಟೆಯ ಡಾನ್ ಬೋಸ್ಕೊ ಸಂಸ್ಥೆ ಕಳೆದ 35 ವರ್ಷಗಳಿಂದ ಬಾಲ್ಯ ವಿವಾಹ, ಬಾಲ್ಯಕಾರ್ಮಿಕ ಪಧ್ಧತಿ ನಿರ್ಮೂಲನೆ, ಬಾಲ್ಯ ದೇವದಾಸಿ ಪದ್ಧತಿಗಳನ್ನು ತಡೆಗಟ್ಟುವಿಕೆ ಮತ್ತು ಮಕ್ಕಳ ಹಕ್ಕುಗಳನ್ನು ಸಮಗ್ರವಾಗಿ ಜಾರಿಗೊಳಿಸಲು ವಿವಿಧ ಇಲಾಖೆಗಳ ಅಧಿಕಾರಿಗಳು, ಜನ ಪ್ರತಿನಿಧಿಗಳು ಹಾಗೂ ಜನರ ಸಹಭಾಗಿತ್ವದೊಂದಿಗೆ ಅನೇಕ ಚುವಟಿಕೆಗಳನ್ನು ನಿರ್ವಹಿಸುತ್ತಾ ಬರುತ್ತಿದೆ. 

ಕ್ರೀಮ್‍ಯೋಜನೆ ಬೆಂಗಳೂರು ಬ್ರೇಡ್ಸ ಸಂಸ್ಥೆ ಮತ್ತುರಾಜ್ಯದ ಹತ್ತು ಜಿಲ್ಲೆಗಲ್ಲಿಗಳಲ್ಲಿರುವ ಡಾನ್ ಬೋಸ್ಕೊ ಸಮಾಜಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕಳೆದ ಆರುವರ್ಷಗಳಿಂದ ಹತ್ತು ಜಿಲ್ಲೆಗಳಲ್ಲಿ ಕ್ರೀಮ್ ಅಂದರೆ  ಮಕ್ಕಳ ಹಕ್ಕುಗಳ ಶಿಕ್ಷಣ ಮತ್ತು ಸತ್ಕ್ರೀಯಾ ಸಂಚಲನ ಎಂಬ ವಿನೂತನ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು ಅದರಲ್ಲಿ ಬಳ್ಳಾರಿ ಜಿಲ್ಲೆಯುಒಂದಾಗಿದ್ದು, ಈ ವರ್ಷದಿಂದ (2021)ಹೆಚ್ಚುವರಿಯಾಗಿಇನ್ನು ಹತ್ತು ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕಿದ್ದು ಅದರಲ್ಲಿ ಹೊಸಪೇಟೆಯಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆ ಕೇಂದ್ರ ಸ್ಥಾನವಾಗಿಟ್ಟುಕೊಂಡು ಕೊಪ್ಪಳ ಜಿಲ್ಲೆಯಲ್ಲಿ ಈ ಯೋಜನೆಯನ್ನ ಅನುಷ್ಠಾನಗೊಳಿಸಬೇಕಿದೆ

ಈ ಯೋಜನೆಯು 2020 ಅಕ್ಟೋಬರ್- ನವಂಬರ್‍ನಿಂದ ಮುಂದಿನ ಮೂರು ವರ್ಷಗಳವರೆಗೆ ಈ ಮೊದಲುಕೈಗೊಂಡಿರುವ ಚಟುವಟಿಕೆಗಳನ್ವಯ ಮತ್ತಷ್ಟು ಪ್ರದೇಶಗಳಿಗೆ ವಿಸ್ತರಿಸಿದ್ದು, ಕೊಪ್ಪಳ, ಜಿಲ್ಲೆಗಳಲ್ಲಿ ಕೈಗೊಳ್ಳಲೂ ಚಿಂತಿಸಲಾಗಿದೆ. ಈ ಚಟುವಟಿಕೆಗಳನ್ನು ಕರ್ನಾಟಕರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾಆಯೋಗ ಮತ್ತು ಮಕ್ಕಳ ಪರವಾಗಿಯೆ ಹೆಚ್ಚು ಕೆಲಸ ಮಾಡುತ್ತಿರುವ ಶಿಕ್ಷಣ ಇಲಾಖೆ,ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯಿತರಾಜ್ಯ ಇಲಾಖೆ,ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ,ಮತ್ತು ಮಕ್ಕಳ ಪರವಾಗಿಕಾರ್ಯನಿರ್ವಹಿಸುವಂತಹ ಇಲಾಖೆಗಳ ಜೊತೆಗೆಸೇರಿ ಅನುಷ್ಠಾನಗೊಳಿಸಲಾಗುತ್ತಿದೆ.

ಸುದ್ದಿ ಓದಿ