ಜ್ಞಾನಿಗಳಿಗೆ ಹಲವು ಅವಕಾಶ ಕೈ ಬೀಸಿ ಕರೆಯುತ್ತವೆ: ನಾಗೂರ
ತಾಳಿಕೋಟೆ31: ವಿದ್ಯಾಥರ್ಿಗಳು ಅಭ್ಯಾಸ ಮಾಡುವಾಗ ಸಮಯ ಕಳೆದಿದ್ದೆ ತಿಳಿಯಬಾರದು, ಜ್ಞಾನಕ್ಕೆ ಸರ್ವಸಿದ್ಧಿ ಶಕ್ತಿ ಇದೆ, ಜ್ಞಾನಿಗಳಿಗೆ ಹಲವು ಅವಕಾಶಗಳು ಕೈ ಬೀಸಿ ಕರೆಯುತ್ತವೆ. ಜ್ಞಾನಾರ್ಜನೆ ಮಾಡಿ ಒಳ್ಳೆಯ ಸಂಸ್ಕಾರದೊಂದಿಗೆ ನಿಮಗೆ ನೀವೇ ಗುರುವಾಗಿ ಬದುಕಿ, ಮೊಬೈಲ್ ಗೀಳು ಬಿಟ್ಟು ಓದಿನ ಗೀಳು ಬೇಳೆಸಿಕೊಳ್ಳಿ ಎಂದು ವಿಜಯಪುರದ ಶಾಲಾ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಎನ್.ಎಚ್.ನಾಗೂರ ಹೇಳಿದರು.
ಅವರು ಪಟ್ಟಣದ ಎಸ್.ಕೆ.ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿವಿಧ ಚಟುವಟಿಕೆಗಳ ಮುಕ್ತಾಯ ಸಮಾರಂಭ, ಅಂತಿಮ ವರ್ಷದ ಪದವಿ ವಿದ್ಯಾಥರ್ಿಗಳಿಗೆ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.
ಅಪ್ಪ ಅಮ್ಮನ ತ್ಯಾಗ, ಗುರುಗಳ ನಿಸ್ವಾರ್ಥ ಸಲಹೆ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿದೆ. ಆರಂಭಿಕ ಶಿಕ್ಷಣದಲ್ಲಿ ಓದಿನಲ್ಲಿ ಸಾಮನ್ಯವಾಗಿ ಇದ್ದ ನನಗೆ ಪದವಿಯಲ್ಲಿ ವಿಶೇಷ ಸಾಧನೆ ಮಾಡಲು ಪ್ರೇರಣೆಯಾಗಿದ್ದು ಖಾಸ್ಗತೇಶ ಮಹಾವಿದ್ಯಾಲಯ. ನನ್ನ ಜೀವನ ನಿರೂಪಿಸಿಕೊಳ್ಳಲು ಭದ್ರ ಬುನಾದಿ ಹಾಕಿಕೊಟ್ಟಿದ್ದೇ ತಾಳಿಕೋಟೆ ಪಟ್ಟಣ. ಇಂತಹ ಗ್ರಾಮೀಣ ಭಾಗದಲ್ಲಿ ನಾವುಗಳು ವಿಶೇಷ ಸಾಧನೆ ಮಾಡಬೇಕು. ಅಂದಾಗ ಮಾತ್ರ ಅವಕಾಶಗಳು ಕೈಬೀಸಿ ಕರೆಯುತ್ತವೆ. ಸ್ವತಃ ಅವರೂ ಕೂಡ ಇದೇ ಕಾಲೇಜಿನ ವಿದ್ಯಾರ್ಥಿ ಆಗಿದ್ದು ಅತ್ಯಂತ ಕಷ್ಟದಲ್ಲಿ ಇಷ್ಟಪಟ್ಟು ಓದಿರುವುದಾಗಿ ಹೇಳುತ್ತ ತಮ್ಮ ಆ ಕಾಲದ ಗುರುಗಳನ್ನು ಸ್ಮರಿಸಿದರು.
ವೀವಿ ಸಂಘದ ಚೇರಮನ್ ವ್ಹಿ.ಸಿ.ಹಿರೇಮಠ ಮಾತನಾಡಿ, ನಮ್ಮ ಕಾಲೇಜು ಆರಂಭದಲ್ಲಿ ಸೌಲಭ್ಯಗಳ ಕೊರತೆ ಇದ್ದಾಗ್ಯೂ ಸಹ ಅಂದಿನ ವಿದ್ಯಾರ್ಥಿಗಳ ಸಾಧನೆ ನಮ್ಮ ಸಂಸ್ಥೆಗೆ ಹೆಮ್ಮೆ ತಂದಿದೆ. ಆದರೆ ಸದ್ಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಬೇಕಾಗುವ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದ್ದು ಇನ್ನು ಹೆಚ್ಚಿನ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತರಬೇಕು ಎಂದರು.
ಪ್ರಾಚಾರ್ಯ ಆರ್.ವ್ಹಿ.ಜಾಲವಾದಿ ಅಧ್ಯಕ್ಷತೆ ವಹಿಸಿದ್ದರು. ವೀವಿ ಸಂಘದ ಕಾರ್ಯದರ್ಶಿ ಎಮ್.ಎಸ್.ಸರಶೆಟ್ಟಿ, ವಿದ್ಯಾರ್ಥಿ ವಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್.ಸ್ನೇಹಾ ವಿ.ವಿ.ಎಸ್. ಮಹಿಳಾ ಪದವಿ ಪೂರ್ವ ಕಾಲೇಜಿನ ಚೇರಮನ್ ಕೆ.ಸಿ.ಸಜ್ಜನ, ಎಸ್.ಕೆ.ಬಾಲಕಿಯರ ಪ್ರೌಢಶಾಲೆಯ ಚೇರಮನ್ ಆಯ್.ಬಿ.ಬಿಳೆಭಾವಿ, ವಸತಿ ನಿಲಯದ ಚೇರಮನ್ ಅಶೋಕ ಜಾಲವಾದಿ, ನಿರ್ದೇಶಕಸಿ.ಆರ್.ಕತ್ತಿ, ರಮೇಶ ಸಾಲಂಕಿ, ದೈಹಿಕ ನಿರ್ದೇಶಕ ಡಾ.ದಯಾನಂದ ಮೂಗಡ್ಲಿಮಠ, ಪ್ರಾಧ್ಯಾಪಕಕೆ.ಬಿ.ದೇಸಾಯಿ, ಎಸ್.ಎಸ್.ಮಾನೆ ಸೇರಿದಂತೆ ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು ಇದ್ದರು.
ವಿದ್ಯಾರ್ಥಿನಿ ಭಾಗ್ಯ ಇಲಕಲ್ಲ ಪ್ರಾರ್ಥಿಸಿದರು. ಅನುಷಾ ಹಾಗೂ ಸಂಗಡಿಗರು ರಾಷ್ಟ್ರಗೀತೆ ಹಾಡಿದರು. ಸುವರ್ಣಾ ಪಾಟೀಲ ಸ್ವಾಗತಿಸಿದರು. ತೇಜಸ್ವಿನಿ ಡಿಸಲೆ ಮತ್ತು ಸಿದ್ದನಗೌಡ ಪಾಟೀಲ ನಿರೂಪಿಸಿದರು. ಸ್ನೇಹಾ ನಾವದಗಿ ವರದಿ ವಾಚಿಸಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್.ಕಲಾಶ್ರೀ ವಂದಿಸಿದರು.