ಶಿಗ್ಗಾವ್

ದೇಶದಲ್ಲಿ ಅನೇಕ ಮಹಾತ್ಮರು ಶರಣರು ಸೂಫಿ ಸಂತರು ದೇಶಕ್ಕಾಗಿ ಸಂದೇಶ ನೀಡಿದ್ದಾರೆ: ಖಾದ್ರಿ

ದೇಶದಲ್ಲಿ ಅನೇಕ ಮಹಾತ್ಮರು ಶರಣರು ಸೂಫಿ ಸಂತರು ದೇಶಕ್ಕಾಗಿ  ಸಂದೇಶ ನೀಡಿದ್ದಾರೆ: ಖಾದ್ರಿ

ಶಿಗ್ಗಾವಿ 22: ಭಾರತೀಯರೆಲ್ಲರೂ ಶ್ರೀ ರಾಮನ ಸಂದೇಶ ನೀಡುವುದು ಬಹಳ ಮುಖ್ಯವಾಗಿದೆ ದೇಶದಲ್ಲಿ ಅನೇಕ ಮಹಾತ್ಮರು ಶರಣರು ಸೂಫಿ ಸಂತರು ದೇಶಕ್ಕಾಗಿ ಒಂದು ಸಂದೇಶವನ್ನು ನೀಡಿದ್ದಾರೆ ಎಂದು ಮಾಜಿ ಶಾಸಕ ಸಯ್ಯದ್ ಅಜ್ಜಂಪಿರ್ ಎಸ್ ಖಾದ್ರಿ ಹೇಳಿದರು. 

ಪಟ್ಟಣದ ಕಿತ್ತೂರಾಣಿ ಚೆನ್ನಮ್ಮ ಸರ್ಕಲ್‌ನಲ್ಲಿ ಶ್ರೀರಾಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವೆಲ್ಲರೂ ಭಾರತೀಯರು ಭಾರತೀಯ ಸಂಸ್ಕೃತಿಯನ್ನು ಮತ್ತು ಭಾರತದ ಭಾವೈಕ್ಯತೆಯನ್ನ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿದೆ ದೇಶದ ಸಂಸ್ಕೃತಿಗಾಗಿ ನಾವೆಲ್ಲರೂ ಸೇರಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ನಿಟ್ಟಿನಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಗಿದೆ ದೇಶದಲ್ಲಿ ಅತಿ ಶ್ರದ್ಧಾಭಕ್ತಿಯಿಂದ ಶ್ರೀ ರಾಮನ ಜಪ ನಡೆದಿದೆ ಎಂದರು, ಆದರೆ ಈ ದೇಶದಲ್ಲಿ ಶ್ರೀ ರಾಮನ ಪ್ರತಿಷ್ಠಾಪನೆಯ ದಿನದಂದು ರಾಜಕೀಯವು ಬೆರೆತಿರುವುದು ಸರಿಯಲ್ಲ ಎಂದರು ಅಲ್ಲದೆ ಸರಕಾರಿ ರಜೆಯನ್ನ ಘೋಷಿಸದೆ ಇರುವ ಪ್ರಶ್ನೆಗೆ ಉತ್ತರಿಸಿದ ಅವರು ಈಗಾಗಲೇ ಮುಜರಾಯಿ ಸಚಿವರು ದೇವಸ್ಥಾನಗಳ ಸ್ವಚ್ಛತೆಗೆ ತಿಳಿಸಿದ್ದಾರೆ ಅದೇ ರೀತಿ ಬೆಳಿಗ್ಗೆ ನಾಲ್ಕು ಗಂಟೆಯಿಂದ ಪ್ರತಿಯೊಂದು ದೇವಸ್ಥಾನಗಳಲ್ಲಿಯೂ ಸಹಿತ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಅವರು ರಜೆ ವಿಷಯವಾಗಿ ಯಾವುದೇ ಬೆಳವಣಿಗೆ ನೀಡುವ ಅವಶ್ಯಕತೆ ಇಲ್ಲ ಎಂದರು. 

ಈ ಸಂದರ್ಭದಲ್ಲಿ ವಿವಿಧ ಮುಖಂಡರುಗಳಾದ ರವಿ ಕೋಣಪ್ಪನವರ್, ಹನುಮಂತಪ್ಪ ಬಂಡಿವಡ್ಡರ, ಮಜೀದ್ ಮಾಳಗಿಮನಿ, ಡಿ ಎಸ್ ಓಲೆಕಾರ್, ಬಸವರಾಜ, ಜೇಕಿನಕಟ್ಟಿ, ಫಯಾಜ್ ಸವಣೂರು, ಸುರೇಶ್ ಹರಿಜನ, ಶಿವರಾಜ್ ಅಮರಾಪುರ, ಸುಮಿತ್ ಸೂರ್ಯವಂಶಿ, ಬೀರೇಶ್ ಜಟ್ಟೆಪ್ಪನವರ, ಬಾಬಾ ತರೀನ್, ಶಂಕರ ಮಾಡಿವಾಳರ, ಬಾಶಾಸಾಬ್ ಕಾಳಂಗಿ, ಗದಿಗೆಪ್ಪ ಕೊಡ್ಲಿವಾಡ, ಮಹಲಿಂಗಪ್ಪ ಕುಂಬಾರ, ಮಹೇಶ ಹುಲಸೋಗಿ, ಸಲೀಂ ಯಳವಟ್ಟಿ, ಇಮಾಮ್ ನದಾಫ್, ಹುಸೇನ್ ಸಾಬ್ ಕಡೇಮನಿ, ಸಲೀಂ ಫರೋಕಿ ಸೇರಿದಂತೆ ಖಾದ್ರಿ ಅಭಿಮಾನಿ ಬಳಗದ ಸದಸ್ಯರು ಇದ್ದರು. 


ಸುದ್ದಿ ಓದಿ