ಬಳ್ಳಾರಿ

ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಕೆಆರ್‌ಪಿ ಪಕ್ಷಕ್ಕೆ ಸೇರೆ​‍್ಡ

ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಕೆಆರ್‌ಪಿ ಪಕ್ಷಕ್ಕೆ ಸೇರೆ​‍್ಡ

ಬಳ್ಳಾರಿ 09: ನಗರದ ಭತ್ರಿ ರಸ್ತೆಯ ವಿದ್ಯಾನಗರದಲ್ಲಿ ಕೆಆರ್‌ಪಿ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದ ಮಾಜಿ ಮೇಯರ್ ಗುರ್ರಮ್ ವೆಂಕಟರಮಣ ಮತ್ತು ಸದಸ್ಯರುಗಳಾದ ವಿ ಎಸ್ ಮರಿದೇವಯ್ಯ, ರಾಮುಡು ಮತ್ತು ಷಾಷಾಬ್ ಹಾಗೂ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರೆ​‍್ಡಗೊಂಡರು.  

ಪಕ್ಷದ ಅಭ್ಯರ್ಥಿಯಾದ ಅರುಣಾ ಲಕ್ಷ್ಮಿ ಮಾತನಾಡಿ, ನಮ್ಮ ಯಜಮಾನರು ಜನಾರ್ಧನ್ ರೆಡ್ಡಿ ಹೇಳುವ ಹಾಗೆ ರಾಜಕಾರಣವೆಂದರೆ, ಮೋಸ, ತಂತ್ರ, ಕುತಂತ್ರಗಳಿಂದ ಕೂಡಿರುವಂತದ್ದು. ಅಧಿಕಾರದ ಆಸೆಯ ಮುಂದೆ ಸ್ನೇಹ ಮತ್ತು ಸಂಬಂಧಗಳು ಲೆಕ್ಕಕ್ಕೆ ಬರುವುದಿಲ್ಲ ಎಂದು ನನ್ನ ಜೀವನದಲ್ಲಿ ಸಾಬೀತಾಗಿದೆ. ಜನಾರ್ಧನ್ ರೆಡ್ಡಿಯವರಿಂದ ಎಲ್ಲವನ್ನು ಪಡೆದು ಒಂದು ಹಂತಕ್ಕೆ ತಲುಪಿದ ಮೇಲೆ ಸ್ವತಃ ಒಡಹುಟ್ಟಿದ ಸ್ನೇಹೀತರು ಮತ್ತು ಸಹೋದರರು ದೂರ ಸರಿದಿರುವಾಗ ನಮ್ಮ ಜೊತೆ ನಿಲ್ಲಲು ನಿರ್ಧಾರ ಮಾಡಿ ನಮ್ಮ ಪಕ್ಷಕ್ಕೆ ಸೇರೆ​‍್ಡಯಾಗಿರುವ ಅಣ್ಣ ಗುರ್ರಂ ವೆಂಕಟರಮಣ ಇವರಿಗೆ ತುಂಬು ಹೃದಯದ ಸ್ವಾಗತ ಕೋರುತ್ತನೆಂದರು.  

ಜನಾರ್ಧನ್ ರೆಡ್ಡಿಯವರು ಅಧಿಕಾರದಲ್ಲಿದ್ದಾಗ ಅವರ ಜೊತೆಗಿದ್ದು ಎಲ್ಲಾ ಅನುಕೂಲಗಳನ್ನು ಪಡೆದುಕೊಂಡವರು ಇಂದು ನಮ್ಮ ರಾಜಕೀಯ ಜೀವನದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ನಮ್ಮ ಪಾಲಿಗೆ ದುರ್ದೈವದ ಸಂಗತಿಯಾಗಿದೆ. ಕಳೆದ ಹನ್ನೆರೆಡು ವರ್ಷಗಳಿಂದ ಬಳ್ಳಾರಿ ನಗರ ಅಭಿವೃದ್ಧಿ ಶೂನ್ಯವಾಗಿದೆ. ಜನರು ಪಡಲಾರದ ಕಷ್ಟವನ್ನು ಪಡುತ್ತಿದ್ದಾರೆ. ರಿ ಸ್ವಾಮಿ ದಯವಿಟ್ಟು ರೆಡ್ಡಿಯವರ ಬಗ್ಗೆ ಮಾತನಾಡುವವರು ಬಳ್ಳಾರಿ ನಗರಕ್ಕೆ ಏನೂ ಮಾಡಿದ್ದೀರಿ ಸ್ವಾಮಿ? ರೆಡ್ಡಿಯವರು ಅಧಿಕಾರದಲ್ಲಿದ್ದಾಗ ಬಳ್ಳಾರಿ ನಗರಕ್ಕೆ ಏನೂ ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ತಿಳಿಯಲು ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲೆಸೆದರು.   

್ಲ ವೆಂಕಟರಮಣ ಮಾತನಾಡಿ, ನಾನು ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ದುಡಿದಿರುತ್ತೇನೆ. ಆದರೆ ನನಗೆ ಆ ಪಕ್ಷದಲ್ಲಿ 2017ರಲ್ಲಿ ಮೇಯರ್ ಬಿಟ್ಟು ಏನೂ ಸಿಗಲಿಲ್ಲ, ಆ ಪಕ್ಷದಲ್ಲಿ ನಮ್ಮವರೆ ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು. ನನಗೆ ಕಾಂಗ್ರೆಸ್ ಪಕ್ಷದಲ್ಲಿ ಗಾಡ್ ಫಾದರ್ ಇಲ್ಲ, ಗಾಡ್ ಮದರ್ ಸಹ ಇಲ್ಲ ಇದರಿಂದ ನಾವು ಪಕ್ಷದಲ್ಲಿ ಮೂಲೆಗುಂಪಾಗಿದ್ದೇವು. ಇದರಿಂದ ನಮಗೆ ಬೇರೆ ಆಲೋಚನೆಗಳು ಬಂದ ಸಮಯದಲ್ಲಿ ಕೆಆರ್‌ಪಿ ಪಕ್ಷದ ನಗರ ಅಭ್ಯರ್ಥಿ ಲಕ್ಷ್ಮಿ ಅರುಣಾ ರವರು ನನಗೆ ನಿಮ್ಮ ಸಹಾಯ ಬೇಕಾಗಿದೆ ದಯವಿಟ್ಟು ನೀವು ನಮ್ಮ ಪಕ್ಷಕ್ಕೆ ಬನ್ನಿ ಎಂದು ಅಹ್ವಾನ ನೀಡಿದ್ದರಿಂದ ನಾವು ಬೇಷರತ್ ಆಗಿ ಪಕ್ಷಕ್ಕೆ ಸೇರಿಕೊಂಡೆವು ಎಂದು ತಿಳಿಸಿದರು.  

ಬಳ್ಳಾರಿ ಜಿಲ್ಲಾಧ್ಯಕ್ಷ ಗೋನಾಳ್ ರಾಜಶೇಖರ್ ಗೌಡ, ರೆಡ್ಡಿ ಪುತ್ರಿ ಬ್ರಹ್ಮಣಿ, ಮುಖಂಡರಾದ ಅಲಿಖಾನ್, ಉಮಾರಾಜ್, ಖುದ್ದುಸಾಬ್, ಗಡ್ಡಂ ತಿಮ್ಮಪ್ಪ, ವಿಶ್ವ, ಹುಂಡೇಕಾರ್ ರಾಜೇಶ್, ಪರ್ವಿನ್ ಬಾನು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ