ಇವಿಎಂ ಗೆ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಹೊಸ ನಾಮಕರಣ.!
ನವದೆಹಲಿ, ಅ, 17: ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್ ಗೆ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಹೊಸ ನಾಮಕರಣ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ವಾಸ್ತವವಾಗಿ ಇವಿಎಂ ಎಂದರೆ ಎವೆರಿ ವೋಟ್ ಫಾರ್ ಮೋದಿ" ಮತ್ತು "ಎವೆರಿ ವೋಟ್ ಫಾರ್ ಮನೋಹರ್" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇವಿಎಂ ಎಂದರೆ ನಿಜವಾಗಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಎಂಬ ಅರ್ಥ. ಯಾವುದೇ ಮತಪತ್ರ ಅಥವಾ ಮತಪೆಟ್ಟಿಗೆಯ ಅಗತ್ಯವಿಲ್ಲದೇ ಮತ ಚಲಾಯಿಸಬಹುದಾದ ಒಂದು ಸಲಭ ಸರಳ ವಿದ್ಯುನ್ಮಾನ ಮತಯಂತ್ರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರೂ ಅವರು ಈ ರೀತಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಚುನಾವಣಾ ಸಭೆಯಲ್ಲಿ ಖಟ್ಟರ್ ಈ ಹೊಸ ವ್ಯಾಖ್ಯಾನ ಮಾಡುತ್ತಿರುವ ವೀಡಿಯೊ ತುಣುಕಿನ ಸಹಿತ ಮಾಡಿದ ಟ್ವೀಟ್ ಅನ್ನು ಸಾರ್ವಜನಿಕರ ಆಕ್ರೋಶದ ನಂತರ ಡಿಲೀಟ್ ಮಾಡಲಾಗಿದೆ. "ಯಂತ್ರದ ಹೆಸರು ಇವಿಎಂ. ಇದನ್ನು ಎವೆರಿ ವೋಟ್ ಫಾರ್ ಮೋದಿ ಎಂದು ವಿಸ್ತರಿಸಿ ಹೇಳಬಹುದು ಎಂದು ಹೇಳಿದ್ದಾರೆ.
ರಾಜ್ಯ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆ; ಲೋಕಸಭೆಗೆ ಅಲ್ಲ ಎಂದು ಯಾರಾದರೂ ಕೇಳಿದರೆ , ಅದನ್ನು ಎವೆರಿ ವೋಟ್ ಫಾರ್ ಮನೋಹರ್ ಎಂದು ಮಾರ್ಪಡಿಸಬಹುದು. ಮೋದಿಗಾದರೂ ಮತ ನೀಡಿ; ಮನೋಹರ್ಗಾದರೂ ಮತ ನೀಡಿ, ನೀವು ಒತ್ತಬೇಕಾಗಿರುವ ಗುಂಡಿ ಕಮಲದ ಚಿಹ್ನೆ ಎಂಬುದನ್ನು ಮರೆಯಬೇಡಿ ಎಂದು ಖಟ್ಟರ್ ಹೇಳಿದ್ದಾರೆ.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 