ಶಾಸಕ ಬಸವರಾಜ ಬೊಮ್ಮಾಯಿ ಹೇಳಿಕೆ ಸ್ವಹಿತಕ್ಕಾಗಿ: ಮಂಜುನಾಥ್ ಮಣ್ಣಣ್ಣವರ್
ಶಿಗ್ಗಾವಿ 30: ಶಾಸಕ ಬಸವರಾಜ ಬೊಮ್ಮಾಯಿ ಅವರ ಕಾಂಗ್ರೆಸ್ ಪಕ್ಷ ಓಲೈಕೆ ರಾಜಕಾರಣ ಮಾಡುತ್ತಿದೆ ಎಂಬ ಹೇಳಿಕೆ ಸಮಾಜ ಮತ್ತು ಬಿಜೆಪಿ ಪಕ್ಷದ ಹಿತಕ್ಕೂ ಅಲ್ಲ ಎಲ್ಲವೂ ಸ್ವಹಿತಕ್ಕಾಗಿ. ಶಿಗ್ಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ತಾಲೂಕಾ ವಕ್ತಾರ ಮಂಜುನಾಥ್ ಮಣ್ಣಣ್ಣವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಜನ್ಮದಿನದ ಆಚರಣೆ ಸಂದರ್ಭದಲ್ಲಿ ಮಾಧ್ಯಮಕ್ಕೆ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ, ದಲಿತರಿಗೆ ಯಾವ ನ್ಯಾಯಕೊಟ್ಟಿದೆ ಎಂಬ ಶಾಸಕ ಬಸವರಾಜ ಬೊಮ್ಮಾಯಿ ಹೇಳಿಕೆ ಅವಕಾಶವಾದಿ ರಾಜಕಾರಣಿಯ ಹಾಸ್ಯಾಸ್ಪದ ಹೇಳಿಕೆ. ಹಿಂದೆ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಹಾಗೂ ಇವರೇ ಮುಖ್ಯಮಂತ್ರಿ ಆಗಿದ್ದಾಗ ಅವರ ಅವಧಿ ಮುಗಿಯುವವರೆಗೂ ಕೇವಲ ಘೋಷಣೆ ಮತ್ತು ಶೋಷಣೆಗಳ ಅಧಿಕಾರ ನಡೆಸಿ ಶಿಗ್ಗಾವಿ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣದಿಂದಲೇ ಗೆಲ್ಲುತ್ತಿರುವುದು ಆಡಳಿತದಲ್ಲಿ ದಲಿತ ಸಮುದಾಯವನ್ನು ಒಡೆಯುವ ಕೆಲಸ ಮಾಡಿ ತಾವು ಹೇಳಿಕೊಳ್ಳುವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಕೊಡುವ ಭರವಸೆಯ ವಿಚಾರ ಜನಕ್ಕೆ ತಿಳಿದಿದೆ. ಸೇವಾ ಮನೋಭಾವಗಿಂತ ಹಣದಿಂದ ವ್ಯಕ್ತಿತ್ವ ಅಳೆಯುವ ರಾಜಕೀಯ ಗಿಮಿಕ್ ಮುಂದೆ ನಡೆಯುವುದಿಲ್ಲ. ಬೊಮ್ಮಾಯಿ ಅಂತಹ ವೈಯಕ್ತಿಕ ಹಿತಾಸಕ್ತಿಯ ರಾಜಕಾರಣಿ ಎಂಬುದು ರಾಜ್ಯಕ್ಕೆ ಗೊತ್ತಿದೆ ಇವರ ಆಡಳಿತದಲ್ಲಿ ಸಮಾಜಕ್ಕೂ ಹಾಗೂ ಪಕ್ಷಕ್ಕೂ ಮುಜುಗರ ತಂದಿರುವುದನ್ನು ಮೊದಲು ಅವರು ಆತ್ಮ ಅವಲೋಕನ ಮಾಡಿಕೊಳ್ಳಲಿ ನಂತರ ಕಾಂಗ್ರೆಸ್ ಪಕ್ಷದ ರಾಜಕಾರಣದ ಬಗ್ಗೆ ಮಾತನಾಡಲಿ ಇವರಿಂದ ಪಕ್ಷವಾಗಲಿ ನಾಯಕರಾಗಲಿ ಪಾಠ ಕಲಿಯುವ ಅವಶ್ಯಕತೆಇಲ್ಲ ಎಂದು ಹೇಳಿದ್ದಾರೆ.