ಪಿಂಕ್ ತಳಿ ಪೇರಲ ಬೆಳೆದು ಇತರರಿಗೆ ಮಾದರಿಯಾದ ರೈತ ಮಂಜಪ್ಪ ಸಿರಿಗೇರಿ

ರಾಣಿಬೆನ್ನೂರ 19: ಇಂದು ಬೇಸಾಯ ಎಂದರೆ ಬೇಸತ್ತು ಕೃಷಿಯಿಂದ ವಿಮುಕ್ತಿ ಹೊಂದುತ್ತಿರುವ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಮಾರ್ಗದರ್ಶನ ಪಡೆದು ನರೇಗಾ ಯೋಜನೆ ಅಡಿ ತೈವಾನ್ ಪಿಂಕ್ ತಳಿ ಪೇರಲವನ್ನು ಸಮೃದ್ಧವಾಗಿ ಬೆಳೆದು ವರ್ಷಕ್ಕೆ ಖರ್ಚು ಮತ್ತು ವೆಚ್ಚ ತಗೆದು ಒಂದು ಎಕರೆ ಸುಮಾರು 1 ಲಕ್ಷದ ವರೆಗೆ ನಿವ್ವಳ ಆದಾಯ ಪಡೆದು ಇತರರಿಗೆ ಮಾದರಿಯಾದ ರೈತ ಹಾವೇರಿ ಜಿಲ್ಲೆ ರಾಣಿಬೆನ್ನೂರ ತಾಲೂಕಿನ ಸುಣಕಲ್ಬಿದರಿ ಗ್ರಾಮದ ಮಂಜಪ್ಪ ಸಿರಿಗೇರಿ.
ಇವರು ತಮ್ಮ ಒಂದು ಎಕರೆ ಜಮೀನಿನಲ್ಲಿ 2023, 24 ರಲ್ಲಿ ನರೇಗಾ ಯೋಜನೆ ಅಡಿ ತೈವಾನ್ ಮಾದರಿಯ ಪೇರಲವನ್ನು ಸಮೃದ್ಧವಾಗಿ ಬೆಳೆದು ರೈತನ ಕೈಹಿಡಿದ ನರೇಗಾ ಪೇರಲವಾಗಿದೆ. ಈ ಹಿಂದೆ ತನ್ನ ಒಂದು ಎಕರೆ ಜಮೀನಿನಲ್ಲಿ ಹತ್ತಿ ಅಥವಾ ಮೆಕ್ಕೆಜೋಳ ಬೆಳೆಯನ್ನು ಬೆಳೆಯುತ್ತಿದ್ದ ಇದರಿಂದ ವರ್ಷಕ್ಕೆ ಖರ್ಚು ವೆಚ್ಚ ತೆಗೆದು ಆದಾಯ 30 ರಿಂದ 40,000 ರೂಪಾಯಿ ಗಳಿಸಲು ಮಾತ್ರ ಸಾಧ್ಯವಾಗುತ್ತಿತ್ತು.
ಆದರೆ ಈಗ ಗ್ರಾಮ ಪಂಚಾಯಿತಿಯವರ ಮಾರ್ಗದರ್ಶನದಲ್ಲಿ ತನ್ನ ಒಂದು ಎಕರೆ ಜಮೀನಿನಲ್ಲಿ ಕಳೆದ ಒಂದು ವರ್ಷದ ಹಿಂದೆ ತೈಲ್ವಾನ್ ಮಾದರಿಯ 500 ಪೇರಲ ಸಸಿಗಳನ್ನು ತೋಟಗಾರಿಕೆಯವರ ತಾಂತ್ರಿಕ ಮಾರ್ಗದರ್ಶನದಲ್ಲಿ 8*8 ಅಂತರದಲ್ಲಿ ನರೇಗಾ ಯೋಜನೆ ಅಡಿ ಪೇರಲು ನಾಟಿ ಮಾಡಿ ಸಮೃದ್ಧವಾಗಿ ಪೇರಲ ಈಗ ಫಲ ನೀಡುತ್ತಿದೆ. ಇದು ವರ್ಷದಲ್ಲಿ ಎರಡು ಬಾರಿ ಫಲ ನೀಡುತ್ತಿದ್ದು ಈಗಾಗಲೇ ಸುಮಾರು 60 ಬಾಕ್ಸ್ ಪೇರಲವನ್ನು ಮಾರಾಟ ಮಾಡಲಾಗಿದೆ.
ಪ್ರತಿ ಬಾಕ್ಸಿಗೆ ಐದು ನೂರು ರೂಪಾಯಿಯಂತೆ ಹೊಲದಲ್ಲಿ ಬಂದು ಮಾರಾಟಗಾರರು ತೆಗೆದುಕೊಂಡು ಹೋಗುತ್ತಿದ್ದಾರೆ ಸುಮಾರು ಈಗಾಗಲೇ ರೂ.30,000 ಆದಾಯ ಬಂದಿದ್ದು ಇನ್ನೂ 40,000ಸಾವಿರ ಆದಾಯ ಬರುತ್ತದೆ. ವರ್ಷದಲ್ಲಿ ಒಂದು ಬೆಳೆಗೆ ಸುಮಾರು ಖರ್ಚು ವೆಚ್ಚ ತೆಗೆದು 60 ರಿಂದ 70,000 ಸಾವಿರ ಆದಾಯ ಗಳಿಸಲು ಸಾಧ್ಯವಾಗಿದೆ ವರ್ಷಕ್ಕೆ ಎರಡು ಬೆಳೆ ಪೇರೆಲ್ಲ ಬಂದರೆ ಸುಮಾರು ಒಂದು ಲಕ್ಷದವರೆಗೆ ಆದಾಯ ಬರುತ್ತದೆ.
ಪೇರಲು ಬೆಳೆಗೆ ರೋಗ ನಿಯಂತ್ರಣ ಮಾಡಲು ಸೋಲಾರ್ ಅಳವಡಿಕೆ ಒಂದು ಎಕರೆ ವಿಸ್ತೀರ್ಣಕ್ಕೆ ಬೇಕಾದ ಸುಮಾರು 5000ಸಾವಿರ ರೂಪಾಯಿ ಯಲ್ಲಿಸೋಲಾರ್ ಖರೀದಿಸಿ ರಾತ್ರಿಯ ಸಮಯದಲ್ಲಿ ಕಾಯಿ ಕೊರೆಯುವ ಹುಳು ನಿಯಂತ್ರಣ ಮಾಡಲು ಪತಂಗ ಆಕರ್ಷಣೀಯ ಬುಟ್ಟಿಯನ್ನು ಅಳವಡಿಸಿದ್ದರಿಂದ ಪೇರಲದ ಹಣ್ಣುಗಳು ಯಾವುದೇ ಚುಕ್ಕೆ ಅಥವಾ ಕಾಯಿ ಕೊರಕ ರೋಗದ ಬಾದೆಯಿಂದ ಪೇರಲ ಗಿಡ ಮತ್ತು ಹಣ್ಣುಗಳು ಮುಕ್ತವಾಗಿವೆ ಇದರಿಂದ ರಸಾಯನಿಕ ಸಿಂಪಡಣೆಯ ಖರ್ಚು ಕಡಿಮೆಯಾಗಿದ್ದು ಸಂಪೂರ್ಣವಾಗಿ ಸಾವಯವ ಗೊಬ್ಬರದಲ್ಲಿ ಬೆಳೆದ ಪೇರಲವಾಗಿದೆ.
ಗ್ರಾಮ ಪಂಚಾಯಿತಿಯವರ ಹಾಗೂ ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದಲ್ಲಿ ತೈಲ್ವಾನ್ ಮಾದರಿಯ 500 ಪೇರಲ ಸಸಿಗಳನ್ನು ಒಂದು ಎಕರೆ ಜಮೀನಿನಲ್ಲಿ 8*8 ಅಂತರದಲ್ಲಿ ನರೇಗಾ ಯೋಜನೆ ಅಡಿ ಪೇರಲು ನಾಟಿ ಮಾಡಿ ಸಮೃದ್ಧವಾಗಿ ಪೇರಲ ಈಗ ಫಲ ನೀಡುತ್ತಿದೆ. ಇದು ವರ್ಷದಲ್ಲಿ ಎರಡು ಬಾರಿ ಫಲ ನೀಡುತ್ತಿದ್ದು ಈಗಾಗಲೇ ಸುಮಾರು 60 ಬಾಕ್ಸ್ ಪೇರಲವನ್ನು ಮಾರಾಟ ಮಾಡಲಾಗಿದೆ. ರೈತರು ನರೇಗಾ ಯೋಜನೆ ಅಡಿ ಬಹುವಾರ್ಷಿಕ ಪೇರಲು ಬೆಳೆದರೆ ಆರ್ಥಿಕವಾಗಿ ಸುಧಾರಣೆಯಾಗಲು ಸಾಧ್ಯ.
ರೈತ ಮಂಜಪ್ಪ ಸಿರಿಗೇರಿ. ಸುಣಕಲ್ಬಿದರಿ. ತಾಲೂಕ ರಾಣಿಬೆನ್ನೂರ.
ತಾಲೂಕಿನ ಸುಣಕಲ್ಬಿದರಿ ಗ್ರಾಮದ ಮಂಜಪ್ಪ ಸಿರಿಗೇರಿ ಇವರು ತಮ್ಮ ಒಂದು ಎಕರೆ ಜಮೀನಿನಲ್ಲಿ 2023, 24 ರಲ್ಲಿ ನರೇಗಾ ಯೋಜನೆ ಅಡಿ ತೈವಾನ್ ಮಾದರಿಯ ಪೇರಲವನ್ನು ಸಮೃದ್ಧವಾಗಿ ಬೆಳೆದು ರೈತನ ಕೈಹಿಡಿದ ಪೇರಲವಾಗಿದೆ.
ಪೇರಲು ಬೆಳೆಗೆ ರೋಗ ನಿಯಂತ್ರಣ ಮಾಡಲು ಸೋಲಾರ್ ಅಳವಡಿಕೆ ಒಂದು ಎಕರೆ ವಿಸ್ತೀರ್ಣಕ್ಕೆ ಬೇಕಾದ ಸೋಲಾರ್ನ್ನು ರಾತ್ರಿಯ ಸಮಯದಲ್ಲಿ ಕಾಯಿ ಕೊರೆಯುವ ಹುಳು ನಿಯಂತ್ರಣ
ಮಾಡಲು ಪತಂಗ ಆಕರ್ಷಣೀಯ ಬುಟ್ಟಿಯನ್ನು ಅಳವಡಿಸಿದ್ದರಿಂದ ಪೇರಲದ ಹಣ್ಣುಗಳು ಯಾವುದೇ ಚುಕ್ಕೆ ಅಥವಾ ಕಾಯಿ ಕೊರಕ ರೋಗದ ಬಾದೆಯಿಂದ ಪೇರಲ ಗಿಡ ಮತ್ತು ಹಣ್ಣುಗಳು ಮುಕ್ತವಾಗಿವೆ. ಇದರಿಂದ ಸೇವನೆಯಿಂದ ಜನರ ಆರೋಗ್ಯ ರಕ್ಷಣೆಗೆ ಉತ್ತಮ.
ನೂರಅಹ್ಮದ್ ಹಲಗೇರಿ.
ಹಿರಿಯ ಸಹಾಯಕ ನಿದೇರ್ಶಕ ತೋಟಗಾರಿಕೆ ಇಲಾಖೆ ರಾಣಿಬೆನ್ನೂರ.