ಸೌಂದತ್ತಿ

ದುರ್ಗವ್ವ ದೇವಿಯರ ದೇವಸ್ಥಾನದಲ್ಲಿ ಮಂಡಲ ಹೋಮ-ಹವನ ಕಾರ್ಯಕ್ರಮ

ದುರ್ಗವ್ವ ದೇವಿಯರ ದೇವಸ್ಥಾನದಲ್ಲಿ ಮಂಡಲ ಹೋಮ-ಹವನ ಕಾರ್ಯಕ್ರಮ

ಉಗರಗೋಳ25: ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಗ್ರಾಮದೇವತೆಯರಾದ ದ್ಯಾಮವ್ವ ದೇವಿ ಹಾಗೂ ದುರ್ಗವ್ವ ದೇವಿಯರ ದೇವಸ್ಥಾನದಲ್ಲಿ ಮಂಗಳವಾರ ಮಂಡಲ ಹೋಮ-ಹವನ ಮತ್ತು ಮಹಾ ಮಂಗಳಾರತಿ ಕಾರ್ಯಕ್ರಮ ಜರುಗಿತು. 

125 ವರ್ಷಗಳ ನಂತರ ಗ್ರಾಮದಲ್ಲಿ ಮೇ 31ರಂದು ಆರಂಭಗೊಂಡ ಗ್ರಾಮದೇವತೆಯರ ಜಾತ್ರೆ ಜೂನ್ 8ರಂದು ವೈಭವದೊಂದಿಗೆ ತೆರೆ ಕಂಡಿತ್ತು. ಅದಾದ 48 ದಿನಗಳವರೆಗೆ ಗ್ರಾಮದಲ್ಲಿ ಯಾವುದೇ ಮದುವೆ, ಉಪನಯನ ಸೇರಿದಂತೆ ಯಾವುದೇ ಕಾರ್ಯಕ್ರಮ ನಡೆದಿರಲಿಲ್ಲ. ಇಂದಿನ ಧಾರ್ಮಿಕ ಕಾರ್ಯಕ್ರಮದೊಂದಿಗೆ ಅವುಗಳಿಗೆ ಮರುಚಾಲನೆ ಸಿಕ್ಕಿತು.

ಶಿರಸಂಗಿಯ ಕಾಳಿಕಾಂಬ ದೇವಸ್ಥಾನದ ಧರ್ಮಾಧಿಕಾರಿ ಕಾಳಾಚಾರ್ಯ ಪೂಜಾರ ಸ್ವಾಮೀಜಿ, ಪ್ರತಿಯೊಬ್ಬರೂ ಗುರುವಿನ ಉಪದೇಶ ಪಾಲಿಸಬೇಕು. ಆಗ ಬದುಕು ಸುಗಮವಾಗುತ್ತದೆ. ಸಂಕಷ್ಟಗಳೆಲ್ಲ ದೂರವಾಗುತ್ತವೆ ಎಂದರು.

ಸವದತ್ತಿಯ ಅಶ್ವತ್ಥ ವೈದ್ಯ ಮಾತನಾಡಿ, ಮಹಾತ್ಮರು ಹೆಳುವ ಉಪದೇಶವನ್ನು ಕೇಳಿ, ಮನಸ್ಸಿನಲ್ಲಿ ಇಟ್ಟುಕೊಂಡರೆ, ಭಕ್ತಿ ಎಂಬ ಬೀಜ ಉತ್ಪತ್ತಿಯಾಗಿ ಬಾಳಿನ ಬಂಡಿ ಸುಗಮವಾಗಿ ಸಾಗುತ್ತದೆ ಎಂದರು.

ಉಗರಗೋಳದ ಬ್ರಹ್ಮಾರೂಢ ಮಠದ ಬ್ರಹ್ಮಾರೂಢ ಶ್ರೀಗಳು, ನಿರ್ವಾಣೇಶ್ವರ ಮಠದ ಪೀಠಾಧಿಪತಿ ಗುರುಮಹಾಂತ ಶ್ರೀಗಳು ಸಾನಿಧ್ಯ ವಹಿಸಿದ್ದರು. ಸ್ಥಳೀಯ ಅರ್ಚಕರಾದ ಈಶ್ವರ ಬಡಿಗೇರ, ಪ್ರತೀಕ ಬಡಿಗೇರ, ದೇವೆಂದ್ರ ಬಡಿಗೇರ, ದ್ಯಾಮಣ್ಣ ಬಡಿಗೇರ, ವಿಶಾಲ ಬಡಿಗೇರ, ಮೌನೇಶ ಬಡಿಗೇರ, ವಿನಾಯಕ ಬಡಿಗೇರ, ಭೀಮರಾಯ ಬಡಿಗೇರ, ರೇಣಪ್ಪ ಮಾಯಾಚಾರಿ, ಗುರಪ್ಪ ಕಂಭಾರ, ಶಂಕರ ಬಡಿಗೇರ ವೈದೀಕತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು.

ಗ್ರಾಮ ದೇವತೆಯರ ಉತ್ಸವ ಮೂರ್ತಿ ಸುಮಂಗಲಿಯರ ಆರತಿ ಹಾಗೂ ಜಾಂಜ್ ಪಥಕ ಹಾಗೂ ಬಜನೆಯೋಂದಿಗೆ ಗ್ರಾಮದ ಪ್ರಮುಖ ಬಿದಿಯಲ್ಲಿ ಸಂಚರಿಸಿತು. ಮಹಾ ಪ್ರಸಾದದ ವೈವಸ್ಥೆಯನ್ನು ಮಡಲಗಿತ್ತು.


ಸುದ್ದಿ ಓದಿ