ಮನುಷ್ಯ ಯಾಂತ್ರಿಕ ಬದುಕಿನಲ್ಲಿ ಸಿಲುಕಿ ಅನಾರೋಗ್ಯಕ್ಕಿಡಾಗುತ್ತಿದ್ದಾನೆ: ಡಾ.ಅಲ್ಲಮಪ್ರಭು
ಲೋಕದರ್ಶನ ವರದಿ
ರಾಣೇಬೆನ್ನೂರ 21: ಆಧುನಿಕ ಜೀವನದ ಶೈಲಿಯಲ್ಲಿ ಇಂದಿನ ನಾಗರೀಕರು ಸಾಗುತ್ತಿದ್ದಾರೆ. ಇದರ ಪರಿಣಾಮ ಬಹುತೇಕರು ಮಾನಸಿಕ ಶಾಂತಿ, ನೆಮ್ಮದಿ ಇಲ್ಲದೇ ಅನಾರೋಗ್ಯಕ್ಕಿಡಾಗಿ ತಮ್ಮ ಜೀವನವನ್ನು ಹಾಳು ಮಾಡಿಕೂಳ್ಳುತ್ತಿದ್ದಾರೆ ಎಂದು ಬೆಳಗಾವಿ ಡಾ. ಪ್ರಭಾಕರ್ ಕೋರೆ ಆಸ್ಪತ್ರೆ, ವೈದ್ಯಕೀಯ ಸಂಶೋಧನಾ ಕೇಂದ್ರದ ಹಿರಿಯ ವೈದ್ಯರಾದ ಡಾ. ಅಲ್ಲಮಪ್ರಭು ಹೇಳಿದರು.
ಅವರು ಶನಿವಾರ ಇಲ್ಲಿನ ಎಪಿಎಂಸಿ ಕೃಷಿ ಭವನದಲ್ಲಿ ಸ್ಥಳೀಯ ವರ್ತಕರ ಸಂಘವು ತನ್ನ 75ನೇ ಅಮೃತ ಮಹೋತ್ಸವದಂಗವಾಗಿ ಕೆಎಲ್‌ಇ ವಿಧ್ಯಾಲಯ, ಜೆಎನ್ ಮೇಡಿಕಲ್ ಕಾಲೇಜು ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ, ಶಸ್ತ್ರ ಚಿಕಿತ್ಸೆ ಹಾಗೂ ಸ್ವಯಂ ಪ್ರೇರಿತ ರಕ್ತಧಾನ ಶಿಭಿರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕೆಎಲ್‌ಇ ತನ್ನ ವಿದ್ಯಾಲಯದ ಅಡಿಯಲ್ಲಿ ಜನಸಾಮಾನ್ಯರಿಗಾಗಿ ಇಂತಹ ಉಚಿತ ಶಿಭಿರಗಳನ್ನು ಆಯೋಜಿಸುವುದರ ಮೂಲಕ ತನ್ನ ಪಾಲಿನ ಸಾಮಾಜಿಕ ಸೇವಾ ಕಾರ್ಯವನ್ನು ಮಾಡುತ್ತಲಿದೆ ಎಂದ ಅವರು ಪ್ರಾಥಮಿಕ ಹಂತದಿಂದ ಹಿಡಿದು ವಿಜ್ಞಾನ ಮತ್ತು ತಾಂತ್ರಿಕತೆ ಸೇರಿದಂತೆ ಉನ್ನತ ಅತೀ ಉನ್ನತವಾದ ಶಿಕ್ಷಣ ಸೇವೆಯನ್ನು ಮಾಡುತ್ತಲಿದೆ. ರಾಜ್ಯವು ಸೇರಿದಂತೆ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಸಂಸ್ಥೆ ತನ್ನ ಶಾಖೆಗಳ ಮೂಲಕ ಸೇವಾ ಕಾರ್ಯ ಮಾಡುತ್ತಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವರ್ತಕರ ಸಂಘದ ಅಧ್ಯಕ್ಷ ಸದಾಶಿವಪ್ಪ ಉಪ್ಪಿನ ಅವರು ಮಾತನಾಡಿ, ವರ್ತಕರ ಸಂಘವು ಕೃಷಿಕರಿಗೆ ಅನೇಕ ರೀತಿಯಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಸಾಮಾಜಿಕ ಸೇವೆಯನ್ನು ಸಹ ಮಾಡುತ್ತಾ ಬಂದಿದೆ. ಇದೀಗ ಅಮೃತ ಮಹೋತ್ಸವ ಆಚರಣೆಯ ಹಂತದಲ್ಲಿ ಸಂಘ ಈ ಬೃಹತ್ ಕಾರ್ಯಕ್ರಮವು ಆಯೋಜಿಸಿ ಜನಪರ ಸೇವೆಯಲ್ಲಿ ತನ್ನನ್ನೇ ತಾನು ತೊಡಗಿಸಿ ಕೂಂಡಿದೆ ನಡೆಯುತ್ತಿರುವ ಶಿಭಿರವು ಅತ್ಯಂತ ಯಶಸ್ವಿಯಾಗುತ್ತಿದ್ದು ಕೆಎಲ್‌ಇ ವೈದ್ಯಕೀಯ ಕೇಂದ್ರ ಮತ್ತು ಆಸ್ಪತ್ರೆಯ ವೈದ್ಯರ ಸೇವೆ ಅತ್ಯಂತ ಶ್ಲಾಘನೀಯವಾಗಿದೆ. ಎಂದು ಡಾ. ಪ್ರಭಾಕರ ಕೋರೆ ಅವರನ್ನು ವರ್ತಕರ ಪರವಾಗಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮತ್ತೋರ್ವ ಹಿರಿಯ ವೈದ್ಯ ವೆಂಕಟೇಶ ಡಾಂಗೆ, ಪಿಆರ್‌ಓ ರಾಜು ಹಾದಿಮನಿ, ಹೃದಯ ತಜ್ಞ ಎಂ.ಬಿ. ಪ್ರಸಾದ, ವೈದ್ಯರಾದ ಅಭಿನವ, ತಿರುಮಲ, ಪ್ರಶಾಂತ, ಭಾಗ್ಯಶ್ರೀ, ವಿ. ಚೇತನ, ವಿವೇಕ ಶೆಟ್ಟಿ, ಹೆಚ್. ಪ್ರಥಮೇಶ, ಮಹಮದ್, ಶಾರದಾ, ಫರ್‌ಜನ್, ತೀರ್ತನ್, ಮಹಾಂತೇಶ, ಸುಶಿಲಕುಮಾರ, ದೀಪಕ್, ಮತ್ತಿತರರು ತಮ್ಮ ವೈದ್ಯಕೀಯ ಸೇವೆಯನ್ನು ನೀಡಿದರು.
ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ವಿ.ಪಿ. ಲಿಂಗನಗೌಡ್ರ, ಜಿ.ಜಿ ಹೂಟ್ಟಿಗೌಡ್ರ, ಬಿ.ಎಸ್. ಪಟ್ಟಣಶೆಟ್ಟಿ, ಬಿ.ಸಿ. ಗೌಡ್ರಶಿವಣ್ಣನವರ, ಅಶೋಕ ಗಂಗನಗೌಡ್ರ, ಜಟ್ಟೇಪ್ಪ ಕರೇಗೌಡ್ರ, ಪಾಂಡಪ್ಪ ಮಾಳೋದೆ, ಎಂ.ಬಿ. ಹೊಂಬರಡಿ, ಚನ್ನಬಸಪ್ಪ ಅಜಗಣ್ಣನವರ, ರಾಜು ತಿಳವಳ್ಳಿ, ಬಸವರಾಜ ಮಳವಳ್ಳಿ, ರಮೇಶ ಹಳ್ಳಪ್ಪಗೌಡ್ರ, ಸೇರಿದಂತೆ ಸಂಘದ ಅನೇಕ ಮುಖಂಡರು ಗಣ್ಯರು, ವರ್ತಕರು ಮತ್ತು ವಿವಿಧ ವಿಭಾಗಗಳ ವೈದ್ಯಕೀಯ ತಜ್ಞರು, ಶುಶ್ರೂಸಕಿಯರು, ಸಿಬಂಧಿ ಮತ್ತು ಕಾಲೇಜಿನ ಉಪನ್ಯಾಸಕರು ಪಾಲ್ಗೂಂಡಿದ್ದರು. ಮುಂಜಾನೆಯಿಂದ ಸಂಜೆಯವರೆಗೆ ನಡೆದ ಶಿಭಿರದಲ್ಲಿ ಸಾವಿರಕ್ಕೂ ಹೆಚ್ಚು ನಾಗರೀಕರು ತಪಾಸಣೆಗೂಳಪಟ್ಟರು. ಅಲ್ಲದೇ 40 ಜನರು ರಕ್ತದಾನ ನೀಡುವುದರ ಮೂಲಕ ತಮ್ಮ ಮಾನವೀಯತೆ ಮೇರೆದರು.