ರಕ್ತದಾನದಿಂದ ಮನುಷ್ಯ ಸದೃಢನಾಗುತ್ತಾನೆ: ಮಹಾಂತೇಶ ಸಾಲಿ
ಶಿಗ್ಗಾವಿ 17: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮೆಹಬೂಬ ನಗರದ ನವಜವಾನ ಕಮಿಟಿಯ ವತಿಯಿಂದ ರಕ್ತದಾನ ಶಿಬಿರವನ್ನು ಕಾರ್ಯಕ್ರಮವನ್ನು ತಜ್ಞ ವೈದ್ಯರಾದ ಡಾ.ವಿವೇಕ ಜೈನಕೇರಿ ಹಾಗೂ ಡಾ. ಗುರುರಾಜ ಉದ್ಘಾಟಿಸಿದರು.
ನಂತರ ಕಾಂಗ್ರೆಸ್ ಮುಖಂಡ ಮಹಾಂತೇಶ ಸಾಲಿ ರಕ್ತದಾನ ಶಿಬಿರ ಉದ್ದೇಶಿಸಿ ಮಾತನಾಡಿ ರಕ್ತದಾನದಿಂದ ಮನ್ಯಷ್ಯನು ದೈಹಿಕವಾಗ, ಮಾನಸಿಕವಾಗಿ ಸದೃಡನಾಗುತ್ತಾನೆ ಮತ್ತು ರಕ್ತದಾನದಿಂದ ಮತ್ತೊಂದು ಜೀವವನ್ನು ಉಳಿಸಲು ಸಹಾಯ ಮಾಡಿದಂತೆ ಆಗುತ್ತೆ ಆದ್ದರಿಂದ ಪ್ರತಿಯೊಬ್ಬ ಯುವಕರು ರಕ್ತದಾನವನ್ನು ಮಾಡಬೇಕು ಅಂತಹ ಮನೋಭಾವನೆಯನ್ನು ಬೆಳಸುವಲ್ಲಿ ನವಜವಾನ ಕಮಿಟಿಯ ಮುಂದಾಗಿದ್ದು ಬಹಳ ಸಂತೋಷ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ದಾವೂದ್ ಸೌದಾಗರ,ಪಿ.ಎಂ.ಬಾಣಿ, ಜಿಲ್ಲಾ ರಕ್ತ ಕೇಂದ್ರ ವೈದ್ಯಾಧಿಕಾರಿ ಬಸವರಾಜ ತಳವಾರ, ಮಲ್ಲಿಕ ತಿಳವಳ್ಳಿ ಹಾಗೂ ಕಮಿಟಿಯ ಸದಸ್ಯರಾದ ಆಶಿಪ ಮಾರಂಬಿಡ,ಶಾರುಖಮೇಲ್ಮುರಿ,ಹಾಸ್ಮಿಯಬೇಗ್,ರಹಿಂ ನಾಯಕ, ಜಾಫರ ನದಾಫ್, ಯಾಕುಬ ಕ್ಯಾಲಕೊಂಡ, ಜಿಲಾನಿ ಮಾರಂಬಿಡ, ಖಾಸಿಂ ಟಪಾಲ, ರೇಹಾನ ಕಾರಡಗಿ, ಸಾದಿಕ ಗುಜರಾತಿ, ಮುಫ್ತಿ ತಹಶಿಲ್ದಾರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.