ಗಾಂಜಾ ಮಾರಾಟ: ವ್ಯಕ್ತಿ ಬಂಧನ
ಸವದತ್ತಿ 22: ತಾಲೂಕಿನ ಯಕ್ಕೇರಿ ಹದ್ದಿಯ ಮುನವಳ್ಳಿ ನರಗುಂದ ರಸ್ತೆಯಲ್ಲಿ ಪಾನಬೀಡಾ ಅಂಗಡಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಸವದತ್ತಿ ಪೊಲೀಸರು ಅವನಿಂದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಯಕ್ಕೇರಿ ಗ್ರಾಮದ ಶ್ರೀಶೈಲ್ ನಿಂಗಪ್ಪ ದಿವಟೆ (54) ಈತನೇ ಆರೋಪಿತನಾಗಿದ್ದು, ತನ್ನ ಅಂಗಡಿಯಲ್ಲಿ ಲಾಭಕ್ಕಾಗಿ ಯಾವುದೇ ಪಾಸ್ ಪಮರ್ಿಟ್ ಇಲ್ಲದೆ 954 ಗ್ರಾಂ. ತೂಕದ ಗಾಂಜಾವನ್ನು ಸಾರ್ವಜನಿಕವಾಗಿ ಮಾರಾಟ ಮಾಡುತ್ತಿದ್ದಾಗ ಮಾಲು ಸಮೇತ ಸವದತ್ತಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ತಹಸೀಲ್ದಾರ ಮಲ್ಲಿಕಾಜರ್ುನ ಹೆಗ್ಗಣ್ಣವರ, ಸಿಪಿಐ ಕರುಣೇಶಗೌಡ ಜಿ ಹಾಗೂ ಪೊಲೀಸ್ ಸಿಬ್ಬಂದಿಯವರು ಸ್ಥಳದಲ್ಲಿ ಮಹಜರು ಮಾಡಿ ಆರೋಪಿತನಿಂದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಪಿಎಸ್ಐ ಆನಂದ ಕ್ಯಾರಕಟ್ಟಿ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.