ಸೌಂದತ್ತಿ

ದಿ.ಆನಂದ ಮಾಮನಿಯವರ ಸೇವೆಯನ್ನು ಸ್ಮರಿಸಬೇಕಿದೆ: ಕಾರದಗಿ

ದಿ.ಆನಂದ ಮಾಮನಿಯವರ ಸೇವೆಯನ್ನು ಸ್ಮರಿಸಬೇಕಿದೆ:  ಕಾರದಗಿ

ಲೋಕದರ್ಶನ ವರದಿ

ಸವದತ್ತಿ 26: ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ರಾಷ್ಟ್ರೀಯ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತ ಬಂದಿದ್ದ ದಿ.ಆನಂದ ಮಾಮನಿಯವರ ಸೇವೆಯನ್ನು ನಾವು ಇಂದು ಸ್ಮರಿಸಬೇಕಿದ್ದು, ಅವರಿಲ್ಲದ ಸಂದರ್ಭದಲ್ಲಿ ಅವರು ಮಾಡಿಕೊಂಡು ಬಂದಿರುವಂತ ಕಾರ್ಯಗಳನ್ನು ನಾವು ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ ಹೇಳಿದರು.

ಪಟ್ಟಣದ ಎಸ್.ಕೆ.ಹೈಸ್ಕೂಲ ಮೈದಾನದಲ್ಲಿ 74ನೇ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಭಿವೃದ್ದಿ ದೃಷ್ಠಿಕೋನದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಪಟ್ಟಣದ ಜನರಿಗೆ 24/7 ಕುಡಿಯುವ ನೀರಿನ ಯೋಜನೆಗೆ ಟೆಂಡರ ಕರೆಯಲಾಗಿದ್ದು, ಕೂಡಲೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದರು.

ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ತರಕಾರಿ ಮಾರುಕಟ್ಟೆಯನ್ನು ಲೋಕಾರ್ಪಣೆಗೊಳಿಸುವದರ ಜೊತೆಗೆ ಈಗಿರುವಂತ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸಲಾಗುತ್ತಿದೆ ಎಂದರು.

ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ ಜಿ.ಬಿ.ಜಕ್ಕನಗೌಡರ ಧ್ವಜಾರೋಹಣ ನೆರವೇರಿಸಿ ಪ್ರಭಾತಪೇರಿಗೆ ಚಾಲನೆ ನೀಡಿದರು. ರೂಪಕ, ಗೃಹರಕ್ಷದಳ, ವಿದ್ಯಾಥರ್ಿಗಳಿಂದ ಕೂಡಿದ ಪ್ರಭಾತ ಪೇರಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಎಸ್.ಕೆ.ಹೈಸ್ಕೂಲ ಮೈದಾನ ತಲುಪಿತು. 

ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನೌಕರರನ್ನು ಮತ್ತು ಸಾರ್ವಜನಿಕ ವಲಯದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ವಿವಿಧ ಶಾಲಾ ವಿದ್ಯಾಥರ್ಿಗಳ ತಂಡಗಳಿಂದ ಸಂಸ್ಕೃತಿ ಮನರಂಜನೆ ಕಾರ್ಯಕ್ರಮಗಳು ನೆರವೇರಿದವು.

ಪುರಸಭೆ ಸದಸ್ಯ ಧರೆಪ್ಪ ಮಡ್ಲಿ, ಐ.ಪಿ.ಪಾಟೀಲ, ಎಲ್.ಆರ್.ಕುಲಕರ್ಣಿ, ಗ್ರೇಡ್-2 ತಹಸೀಲ್ದಾರ ಎಮ್.ವಿ.ಗುಂಡಪ್ಪಗೋಳ, ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ಸಿಪಿಐ ಕರುಣೇಶಗೌಡ, ತಾ.ಪಂ ಇಓ ಯಶವಂತಕುಮಾರ, ಪಿಡಬ್ಲುಡಿ ಅಭಿಯಂತರ ಎಚ್.ಎ.ಕದ್ರಾಪುರ, ಪಿ.ಎಸ್.ಐ ಪ್ರವೀಣ ಗಂಗೊಳ್ಳಿ, ಟಿಎಚ್ಓ ಡಾ.ಮಹೇಶ ಚಿತ್ತರಗಿ, ಸಿಡಿಪಿಓ ಕಾಂಚನಾ ಅಮಠೆ ಇತರರು ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ್ ಕರೀಕಟ್ಟಿ ಸ್ವಾಗತಿಸಿದರು. ತಹಸೀಲ್ದಾರ ಜಿ.ಬಿ.ಜಕ್ಕನಗೌಡರ ಸಂದೇಶ ವಾಚಿಸಿದರು. ಶಿವಾನಂದ ತಾರಿಹಾಳ ನಿರೂಪಿಸಿದರು. ಬಿ.ಎನ್.ಬ್ಯಾಳಿ ವಂದಿಸಿದರು 

ಸುದ್ದಿ ಓದಿ