ಸೌಂದತ್ತಿ

ಮಾಮನಿ ನಿಧನ: ತಾಲೂಕಾಡಳಿತದಿಂದ ಸಂಕ್ಷಿಪ್ತವಾಗಿ ರಾಜ್ಯೋತ್ಸವ ಆಚರಣೆ

ಮಾಮನಿ ನಿಧನ: ತಾಲೂಕಾಡಳಿತದಿಂದ ಸಂಕ್ಷಿಪ್ತವಾಗಿ ರಾಜ್ಯೋತ್ಸವ ಆಚರಣೆ

ಲೋಕದರ್ಶನ ವರದಿ 

ಸವದತ್ತಿ 02: ಪಟ್ಟಣದಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿಯವರ ನಿಧನದಿಂದಾಗಿ ತಾಲೂಕು ಆಡಳಿತದಿಂದ ಸಂಕ್ಷಿಪ್ತವಾಗಿ ರಾಜ್ಯೋತ್ಸವವನ್ನು ಆಚರಿಸಲಾಯಿತು. 

ತಾ.ಪಂ ಸಭಾಭವನದಲ್ಲಿ ಏರಿ​‍್ಡಸಿದ್ದ 67ನೇ ಕನ್ನಡ ರಾಜ್ಯೋತ್ಸವವನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ನಾಡದೇವಿಯ ಪೂಜೆಯೊಂದಿಗೆ ಪ್ರಾರಂಭಿಸಲಾಯಿತು. ನಂತರ ಶಾಸಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಉಪನ್ಯಾಸ ಮತ್ತು ಮನರಂಜನೆ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿತ್ತು. 

ಪುರಸಭೆ ಉಪಾಧ್ಯಕ್ಷ ದೀಪಕ ಜಾನ್ವೇಕರ, ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಜಗದೀಶ ಶಿಂತ್ರಿ, ತಹಸೀಲ್ದಾರ ಬಿ.ಜೆ.ಜಕ್ಕನಗೌಡರ. ಬಿಇಓ ಶ್ರೀಶೈಲ್ ಕರೀಕಟ್ಟಿ, ತಾ.ಪಂ ಇಓ ಯಶವಂತಕುಮಾರ, ಪುರಸಭೆ ಸದಸ್ಯರಾದ ಅರ್ಜುನ ಅಮ್ಮೋಜಿ, ಯಲ್ಲಪ್ಪ ರುದ್ರಾಕ್ಷಿ, ಸುತಗಟ್ಟಿ, ನಿಂಗಪ್ಪ ಬೆಟಸೂರ, ಮುಖ್ಯಾಕಾರಿ ಪ್ರಕಾಶ ಚನ್ನಪ್ಪನವರ, ಉಪ ತಹಸೀಲ್ದಾರ ಶಶಿಧರ ವನಕಿ, ಕೆ.ಐ.ಕದ್ರಾಪುರ, ಪಿಎಸ್‌ಐ ಗಂಗೊಳ್ಳಿ, ಡಾ.ಎಮ್‌.ಎಮ್‌.ಮರಲಿಂಗಣ್ಣವರ, ಡಾ.ಮಹೇಶ ಚಿತ್ತರಗಿ, ಸಿಡಿಪಿಓ ಕಾಂಚನಾ ಅಮಠೆ ಉಪಸ್ಥಿತರಿದ್ದರು. 

ಬಿಇಓ ಶ್ರೀಶೈಲ್ ಕರೀಕಟ್ಟಿ ಸ್ವಾಗತಿಸಿದರು. ಎಮ್‌.ಪಿ.ಪಾಟೀಲ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ